ಪ್ರಸ್ತುತದ ಬೋಧನೆ ಅಧ್ಯಾಪಕರಿಗೆ ಸವಾಲು I lecturer teaching

ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಪ್ರೊ.ಕೆ.ಪ್ರಸನ್ನಕುಮಾರ್ ಅಭಿನಂದನಾ ಸಮಾರಂಭವನ್ನು  ಜೆ.ಸಿ.ಮಾಧುಸ್ವಾಮಿ ಉದ್ಘಾಟಿಸಿದರು. ಆಯನೂರು ಮಂಜುನಾಥ್, ಪ್ರೊ.ಎಸ್.ಸಿರಾಜ್ ಅಹಮ್ಮದ್, ಗೀತಾ, ಡಾ.ಬಿ.ಎಸ್.ಸುರೇಶ್, ದಯಾಶಂಕರ್, ಡಾ.ಎಂ.ವಿ.ಧನಂಜಯ, ಡಾ.ಸಿ.ಎಚ್.ಮುರುಗೇಂದ್ರಪ್ಪ ಇದ್ದರು.
ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಪ್ರೊ.ಕೆ.ಪ್ರಸನ್ನಕುಮಾರ್ ಅಭಿನಂದನಾ ಸಮಾರಂಭವನ್ನು ಜೆ.ಸಿ.ಮಾಧುಸ್ವಾಮಿ ಉದ್ಘಾಟಿಸಿದರು. ಆಯನೂರು ಮಂಜುನಾಥ್, ಪ್ರೊ.ಎಸ್.ಸಿರಾಜ್ ಅಹಮ್ಮದ್, ಗೀತಾ, ಡಾ.ಬಿ.ಎಸ್.ಸುರೇಶ್, ದಯಾಶಂಕರ್, ಡಾ.ಎಂ.ವಿ.ಧನಂಜಯ, ಡಾ.ಸಿ.ಎಚ್.ಮುರುಗೇಂದ್ರಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಿತವಚನಗಳು ಯುವಜನತೆಗೆ ತಲುಪುತ್ತಿಲ್ಲ
  • ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಮತ
  • ಅಭಿನಂದನಾ ಗ್ರಂಥ ಸಹ್ಯಾದ್ರಿ ಶಿಖರ ಬಿಡುಗಡೆ ಸಮಾರಂಭ ಉದ್ಘಾಟನೆ
ಶಿವಮೊಗ್ಗ: ಯುವಕರು ಮಾರ್ಗದರ್ಶನ ಬಯಸದೇ ಹೋರಾಟಗಳಿಗೆ ಧುಮುಕುತ್ತಿರುವ ಈ ಕಾಲಘಟ್ಟದಲ್ಲಿ ಅಧ್ಯಾಪಕರು (lecturers) ಅವರಿಗೆ ಯಾವ ರೀತಿ ಬೋಧಿಸಬೇಕೆನ್ನುವುದೇ (teaching) ಸವಾಲಿನ ಸಂಗತಿಯಾಗಿದೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ (madhuswamy) ಅಭಿಪ್ರಾಯಪಟ್ಟರು.
ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ತುಮಕೂರು ವಿವಿ ನಿಕಟಪೂರ್ವ ಕುಲಸಚಿವ ಪ್ರೊ.ಕೆ.ಪ್ರಸನ್ನ ಕುಮಾರ್ ಅಭಿನಂದನಾ ಸಮಾರಂಭ ಹಾಗೂ ಅಭಿನಂದನಾ ಗ್ರಂಥ ಸಹ್ಯಾದ್ರಿ ಶಿಖರ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಸನ್ನಿವೇಶ ಬದಲಾಗುತ್ತಿದೆ. ಯುವಕರೇ ತುಂಬಿರುವ ಈ ದೇಶದಲ್ಲಿ ಅವರು ಯಾವ ಮಾರ್ಗದರ್ಶನವನ್ನೂ ಬಯಸುತ್ತಿಲ್ಲ. ತಮಗೆ ತಿಳಿದಿರುವುದೇ ನಿಜ ಅಂದುಕೊಂಡು ಹೋರಾಟಕ್ಕೆ ಯತ್ನಿಸುತ್ತಿದ್ದಾರೆ. ಹಿತವಚನಗಳು ಅವರನ್ನು ತಲುಪುತ್ತಿಲ್ಲ. ಉದ್ಯೋಗ ಕಲ್ಪಿಸಲಾಗದ ಸಂದರ್ಭವಿದು. ಹೀಗಾಗಿ ಯುವಕರಿಂದಲೂ ಆಗಾಗ ತಪ್ಪುಗಳು ಆಗುತ್ತಲೇ ಇವೆ. ಇಂತಹ ಸಂದರ್ಭದಲ್ಲಿ ನಮ್ಮ ಬೋಧಕರು ಯುವಕರನ್ನು ಜಾಗೃತಿಗೊಳಿಸುವ ಮಾರ್ಗದರ್ಶನ ಮಾಡುವ ಜಾಣ್ಮೆ ಬೆಳೆಸಿಕೊಳ್ಳಬೇಕು ಎಂದರು.
ಪ್ರಸನ್ನ ಕುಮಾರ್ ಪರೀಕ್ಷಾಂಗ ಕುಲಸಚಿವರಾಗಿ ಒಳ್ಳೆಯ ಆಡಳಿತ ನೀಡಿದವರು. ನಿವೃತ್ತಿ ಜೀವನ ವಿಶ್ರಾಂತಿಯಲ್ಲ. ಅದು ಸಮಾಧಾನಕರ ಸ್ಥಿತಿ. ಸಮಾಜದ ಋಣ ತೀರಿಸಬೇಕಾದ ಸಮಯ. ಜ್ಞಾನದ ಕಿಟಕಿಗಳನ್ನು ಅವರು ಮತ್ತಷ್ಟು ತೆರೆಯಲಿ. ಮಕ್ಕಳ ಜತೆ ಸಂಪರ್ಕ ಇಟ್ಟುಕೊಳ್ಳಲಿ ಎಂದರು.
ಪ್ರೊ.ಕೆ.ಪ್ರಸನ್ನ ಕುಮಾರ್ ಅವರ ಅಭಿನಂದನಾ ಗ್ರಂಥ ಸಹ್ಯಾದ್ರಿ ಶಿಖರದ ಕುರಿತು ಮಾತನಾಡಿದ ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಬಿ.ಜಿ.ಧನಂಜಯ, ಈ ಕೃತಿಯಲ್ಲಿ ಮೂರು ತಲೆಮಾರಿನ ವ್ಯಕ್ತಿಗಳು ಪ್ರಸನ್ನ ಕುಮಾರ್ ಅವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದು ಅವರಿಗೆ ಮಾತ್ರವಲ್ಲ, ಸಮಗ್ರ ಶಿಕ್ಷಕರಿಗೆ ಸಂದ ಗೌರವವಾಗಿದೆ. ಎಲ್ಲರ ಪ್ರೀತಿ ಗಳಿಸಿರುವ ಅವರು ಸಹ್ಯಾದ್ರಿ ಶಿಖರವೇ ಹೌದು ಎಂದು ಅಭಿಪ್ರಾಯಪಟ್ಟರು.
ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್ಯ ಪ್ರೊ.ಎಸ್.ಸಿರಾಜ್ ಅಹಮ್ಮದ್, ಮಾಜಿ ಸಂಸದ ಆಯನೂರು ಮಂಜುನಾಥ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಯುಕೆ ವಿವಿಯ ಡಾ.ಶಶಾಂಕ್, ಲೋಕಾಸೇವಾ ಆಯೋಗದ ಸದಸ್ಯೆ ಗೀತಾ, ಡಿಎಸ್‌ಎಸ್ ಸಂಚಾಲಕ ಎಂ.ಗುರುಮೂರ್ತಿ, ಕಾಲೇಜು ಅಧ್ಯಾಪಕರ ಸಂಘದ ಮಾಜಿ ಅಧ್ಯಕ್ಷ ಡಾ.ಸಿ.ಎಚ್. ಮುರಿಗೇಂದ್ರಪ್ಪ, ಶಿವಪ್ಪ ನಾಯಕ ಕೃಷಿ ಹಾಗೂ ತೋಟಗಾರಿಕೆ ವಿವಿ ಕುಲಪತಿ ಡಾ.ಎಂ.ವಿ.ಧನಂಜಯ, ಉಮಾ ಪ್ರಸನ್ನಕುಮಾರ್, ಡಾ.ಪ್ರಜ್ವಲ್, ನಿವೃತ್ತ ಐಎಎಸ್ ಅಧಿಕಾರಿ ದಯಾಶಂಕರ್, ಸುಬ್ಬಯ್ಯ ಡೆಂಟಲ್ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಸ್.ಸುರೇಶ್ ಮುಂತಾದವರಿದ್ದರು.
"

ಇಂದು ಉದ್ಯಮಿಗಳೇ ದೇಶವನ್ನು ಆಳುತ್ತಿದ್ದಾರೆ. ತಮ್ಮ ಲಾಭಕ್ಕಾಗಿ ಆಡಳಿತ ಯಂತ್ರವನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ. ಶ್ರಮದ ಜೀವನ ಯಾರಿಗೂ ಬೇಡವಾಗಿದೆ. ಕೃಷಿಗೆ ಕಾರ್ಮಿಕರು ಸಿಗುತ್ತಿಲ್ಲ. ಎಲ್ಲರಿಗೂ ಸುಲಭ ಉದ್ಯೋಗ ಬೇಕು. ವಿದ್ಯಾರ್ಥಿಗಳಿಗೆ ಸಮಾನತೆ ಬಗ್ಗೆ ಬೋಧಿಸುವುದಾದರೂ ಹೇಗೆ ಎಂಬ ಪ್ರಶ್ನೆಗಳು ನಮ್ಮ ಮುಂದಿವೆ.

— ಜೆ.ಸಿ.ಮಾಧುಸ್ವಾಮಿ, ಮಾಜಿ ಸಚಿವ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net