ಎಸ್‌ಐಆರ್‌ನ ದುರ್ಬಳಕೆಯಿಂದ ದೇಶ ಅತಂತ್ರ

ರಿಪ್ಪನ್‌ಪೇಟೆಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಎಸ್‌ಐಆರ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಪಕ್ಷಗಳ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಗೋಪಾಲಕೃಷ್ಣ ಬೇಳೂರು, ಬಿ.ಜಿ.ಚಂದ್ರಮೌಳಿ, ಕಲಗೋಡು ರತ್ನಾಕರ ಇತರರಿದ್ದರು.
ರಿಪ್ಪನ್‌ಪೇಟೆಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಎಸ್‌ಐಆರ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಪಕ್ಷಗಳ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಗೋಪಾಲಕೃಷ್ಣ ಬೇಳೂರು, ಬಿ.ಜಿ.ಚಂದ್ರಮೌಳಿ, ಕಲಗೋಡು ರತ್ನಾಕರ ಇತರರಿದ್ದರು.
Published on
ರಿಪ್ಪನ್ ಪೇಟೆ: ಬಿಜೆಪಿಯವರು ಎಸ್‌ಐಆರ್‌ನ ದುರ್ಬಳಕೆಯಿಂದ ದೇಶ ಅತಂತ್ರ ಮಾಡಲು ಹೊರಟಿದ್ದಾರೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.
ಪಟ್ಟಣದ ಎಸ್‌ಆರ್ ಕನ್ವೆಂಕ್ಷನ್ ಹಾಲ್‌ನಲ್ಲಿ ಶನಿವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಎಸ್‌ಐಆರ್ ಪ್ರಗತಿ ಪರಿಶೀಲನಾ ಸಭೆ ಉದ್ಘಾಟಿಸಿ ಮಾತನಾಡಿದರು.
ಕಳೆದ ಎಲ್ಲ ಚುನಾವಣೆಯಲ್ಲಿ ಮತದಾನ ಮಾಡಿದ್ದ ಜನರನ್ನು ಮತ್ತೊಮ್ಮೆ ಪರಿಷ್ಕರಣೆ ಹೆಸರಲ್ಲಿ ಹಕ್ಕು ವಂಚಿಸುವ ಪ್ರವೃತ್ತಿ ಪ್ರದರ್ಶಿಸುತ್ತಿದ್ದಾರೆ. ಇದಕ್ಕೆ ಪಶ್ಚಿಮ ಬಂಗಾಳ ಮತ್ತು ಬಿಹಾರ ಉದಾಹರಣೆಯಾಗಿವೆ. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸುತ್ತಿದ್ದಂತೆ ಬಿಜೆಪಿಯವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ ಎಂದರು.
ಸ್ಥಳೀಯ ಸಂಸ್ಥೆ ಚುನಾವಣೆ ಬರುತ್ತಿರುವುದರಿಂದ ನಮ್ಮ ಕಾರ್ಯಕರ್ತರು, ಆಕಾಂಕ್ಷಿಗಳು ಎಸ್‌ಐಆರ್ ಬಗ್ಗೆ ಆಸಕ್ತಿ ವಹಿಸಬೇಕು.  ನಮ್ಮವರನ್ನು ಕೈಬಿಡದಂತೆ ಎಚ್ಚರಿಕೆ ವಹಿಸಬೇಕು. ನೀವೆಲ್ಲ ಜವಾಬ್ದಾರಿಯಿಂದ ಕೆಲಸ ಮಾಡಿ ಎಂದರು.
ಮಾಜಿ ಶಾಸಕ ಬಿ.ಸ್ವಾಮಿರಾವ್ ಪುತ್ರ ಸುಬ್ರಹ್ಮಣ್ಯ, ಎಲ್.ವೆಂಕಟೇಶ, ಈಶ್ವರಪ್ಪ ಗವಟೂರು ಸೇರಿದಂತೆ ವಿವಿಧ ಪಕ್ಷದ ಕೆಲವರು ಕಾಂಗ್ರೆಸ್ ಸೇರ್ಪಡೆಗೊಂಡರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ಮುಖಂಡರಾದ ಕಲಗೋಡು ರತ್ನಾಕರ, ಬಂಡಿ ರಾಮಚಂದ್ರ, ಚಿದಂಬರ, ಶ್ವೇತಾ ಬಂಡಿ, ಸುಮಾ ಸುಬ್ರಹ್ಮಣ್ಯ, ವಿನಯ್ ಕುಮಾರ್, ಈಶ್ವರಪ್ಪ, ಎರಗಿ ಉಮೇಶ, ಜಯಶೀಲಪ್ಪಗೌಡ, ಅಮೀರ್ ಹಂಜ, ಮಹೇಂದ್ರ, ವಿಜಯ, ಆಸೀಫ್, ಗಣಪತಿ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net