ತೀರ್ಥಹಳ್ಳಿಯಲ್ಲಿ ಡಿಸಿಸಿ ಬ್ಯಾಂಕ್ ನೂತನ ಶಾಖೆಯನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿದರು. ಆರ್.ಎಂ.ಮಂಜುನಾಥ ಗೌಡ, ಎಚ್.ಎನ್.ವಿಜಯದೇವ್, ರತ್ನಾಕರ ಶೆಟ್ಟಿ ಇತರರಿದ್ದರು.
Published on:
Copied
Follow Us
ತೀರ್ಥಹಳ್ಳಿ: ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರ ಬ್ಯಾಂಕ್‌ಗಳ ಕೊಡುಗೆ ಅಪಾರ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ತಾಲೂಕಿನ ಐದನೇ ಡಿಸಿಸಿ ಬ್ಯಾಂಕ್ ಶಾಖೆ ಉದ್ಘಾಟಿಸಿ ಮಾತನಾಡಿ, ಭಾರತ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಮೈಕ್ರೋ ಫೈನಾನ್ಸ್ ಮೂಲಕ ಜನರಲ್ಲಿ ಆರ್ಥಿಕ ಶಕ್ತಿ ತುಂಬಿದ ಪರಿಣಾಮ ದೇಶದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ತೀರ್ಥಹಳ್ಳಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳು ಸದೃಢವಾಗಿ ನಡೆಯುತ್ತಿರುವುದಕ್ಕೆ ಜಿಲ್ಲಾ ಕೇಂದ್ರ ಬ್ಯಾಂಕ್‌ನ ಆರ್ಥಿಕ ನೆರವು ಪ್ರಮುಖ ಕಾರಣವಾಗಿದೆ. ತಾಲೂಕಿನಲ್ಲಿ ಇನ್ನೂ ನಾಲ್ಕು ಶಾಖೆಗಳ ಆರಂಭಕ್ಕೆ ಕ್ರಮ ಕೈಗೊಂಡಿರುವುದು ಶ್ಲಾಘನೀಯ. ಆಧುನಿಕ ವ್ಯವಸ್ಥೆ ಒಳಗೊಂಡಿರುವ ಶಾಖೆ ಸ್ಥಾಪಿಸಿರುವುದು ಗ್ರಾಹಕರ ಆರ್ಥಿಕ ವ್ಯವಹಾರಕ್ಕೆ ಪೂರಕವಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ತೀರ್ಥಹಳ್ಳಿ ಪಟ್ಟಣದಲ್ಲಿ ವ್ಯವಹಾರದ ಒತ್ತಡ ಇರುವ ಕಾರಣ ಗ್ರಾಹಕರ ಅನುಕೂಲತೆ ದೃಷ್ಟಿಯಿಂದ ಎರಡನೇ ಶಾಖೆ ಆರಂಭಿಸುವುದು ಅನಿವಾರ್ಯವಾಗಿತ್ತು. ತಾಲೂಕಿನ ಹೋಬಳಿ ಕೇಂದ್ರಗಳಾದ ಮೇಗರವಳ್ಳಿ, ಕಟ್ಟೆಹಕ್ಕಲು ಮತ್ತು ದೇವಂಗಿಯಲ್ಲಿ ಹೊಸದಾಗಿ ಶಾಖೆ ತೆರೆಯಲಾಗುವುದು ಎಂದು ತಿಳಿಸಿದರು.