ಸಂವಿಧಾನ ಎಲ್ಲ ಭಾರತೀಯರ ಆತ್ಮಗೌರವದ ಸಂಕೇತ

ಕಾರ್ಗಲ್​ನಲ್ಲಿ ಆಯೋಜಿಸಿದ್ದ ಅಂಬೇಡ್ಕರ್​ ದಿನಾಚರಣೆ ಕಾರ್ಯಕ್ರಮವನ್ನು ಕೆಪಿಸಿ ವಿದ್ಯುತ್​ ವಿಭಾಗದ ಮುಖ್ಯ ಅಭಿಯಂತ ಬಿ.ಆನಂದಕುಮಾರ್​ ಉದ್ಘಾಟಿಸಿದರು. ಎಂ.ಮಾದೇಶ್​, ಕೆ.ವೀರೇಂದ್ರ, ಆರ್​.ಶಿವಕುಮಾರ್​, ಪೂರ್ಣಿಮಾ ಇತರರಿದ್ದರು.
ಕಾರ್ಗಲ್​ನಲ್ಲಿ ಆಯೋಜಿಸಿದ್ದ ಅಂಬೇಡ್ಕರ್​ ದಿನಾಚರಣೆ ಕಾರ್ಯಕ್ರಮವನ್ನು ಕೆಪಿಸಿ ವಿದ್ಯುತ್​ ವಿಭಾಗದ ಮುಖ್ಯ ಅಭಿಯಂತ ಬಿ.ಆನಂದಕುಮಾರ್​ ಉದ್ಘಾಟಿಸಿದರು. ಎಂ.ಮಾದೇಶ್​, ಕೆ.ವೀರೇಂದ್ರ, ಆರ್​.ಶಿವಕುಮಾರ್​, ಪೂರ್ಣಿಮಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಂಬೇಡ್ಕರ್​ ಜಯಂತಿ ಕಾರ್ಯಕ್ರಮ
  • ಮುಖ್ಯ ಅಭಿಯಂತ ಬಿ.ಆನಂದಕುಮಾರ್​ ಹೇಳಿಕೆ
  • ಅಂಬೇಡ್ಕರ್​ ಜಯಂತಿ ಕಾರ್ಯಕ್ರಮ
ಕಾರ್ಗಲ್​: ಸಮಾಜದಲ್ಲಿ ಇಂದಿಗೂ ಬೇರೂರಿರುವ ಅಸ್ಪಶ್ಯತೆ ಹಾಗೂ ಶೋಷಣೆ ನಿವಾರಣೆಗೆ ಪಣತೊಡುವ ಮೂಲಕ ಬಾಬಾ ಸಾಹೇಬ್​ ಡಾ. ಅಂಬೇಡ್ಕರ್​ ಕಂಡ ಸಮ ಸಮಾಜ ನಿರ್ಮಾಣದ ಕನಸನ್ನು ನನಸು ಮಾಡುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಕೆಪಿಸಿ ವಿದ್ಯುತ್​ ವಿಭಾಗದ ಮುಖ್ಯ ಅಭಿಯಂತ ಬಿ.ಆನಂದಕುಮಾರ್​ ಹೇಳಿದರು.
ಕೆಪಿಸಿ ಕ್ಲಬ್​ನಲ್ಲಿ ಕರ್ನಾಟಕ ವಿದ್ಯುತ್​ ನಿಗಮ ಹಾಗೂ ನಿಗಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಸಂದಿಂದ ಏರ್ಪಡಿಸಿದ್ದ ಅಂಬೇಡ್ಕರ್​ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಾಬಾ ಸಾಹೇಬರು ಜಗತ್ತಿನಲ್ಲೇ ಅತ್ಯಂತ ಸುದೀರ್ ಮತ್ತು ಸಮರ್ಪಕ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನವು ಕೇವಲ ಕಾನೂನಿಗೆ ಸೀಮಿತವಾಗಿಲ್ಲ. ಅದು ಎಲ್ಲ ಭಾರತೀಯರ ಆತ್ಮಗೌರವದ ಸಂಕೇತ ಎಂದು ತಿಳಿಸಿದರು. ಜಾತಿ, ಲಿಂಗ, ಧರ್ಮ ಹಾಗೂ ವರ್ಗಗಳ ತಾರತಮ್ಯವಿಲ್ಲದೆ ಎಲ್ಲರಿಗೂ ಶಿಣ, ಮತದಾನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನೀಡಿದ್ದಾರೆ ಎಂದು ಹೇಳಿದರು.
ಹೊಸನಗರ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಶ್ರೀಪತಿ ಹಳಗುಂದ ಉಪನ್ಯಾಸ ನೀಡಿದರು.
ಕೆಪಿಸಿ ಕಾಮಗಾರಿ ವಿಭಾಗದ ಮುಖ್ಯ ಅಭಿಯಂತರ ಎಂ.ಮಾದೇಶ್​, ಆಡಳಿತ ಮಂಡಳಿ ನಿರ್ದೇಶಕ ಕೆ.ವೀರೇಂದ್ರ, ಅಧೀಕ ಅಭಿಯಂತರ ಆರ್​.ಶಿವಕುಮಾರ್​, ಉಪ ಪ್ರಧಾನ ಪ್ರಬಂಧಕ ರಾಜು, ಎಸ್​.ಸಿ, ಕೆಪಿಸಿ ಎಸ್​.ಟಿ ಯೂನಿಯನ್​ ಅಧ್ಯ ಮಿರ್ಜಾ ಕುಮಾರ್​, ಮಾನವ ಸಂಪನ್ಮೂಲ ಅಧಿಕಾರಿ ಪೂರ್ಣಿಮಾ ಗಿಡ್ಡಪ್ಪಗೌಡ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net