ಸಿಲಿಂಡರ್ ಅಭಾವಕ್ಕೆ ಕೇಂದ್ರವೇ ಕಾರಣ | Congress Protest

ಗ್ಯಾಸ್ ಸಿಲೆಂಡರ್ ಅಭಾವಕ್ಕೆ ಕೇಂದ್ರ ಸರ್ಕಾರದ ನಿರ್ಲಕ್ಷೃವೇ ಕಾರಣ ಎಂದು ಆರೋಪಿಸಿ ಸಾಗರ ಬ್ಲಾಕ್ ಕಾಂಗ್ರೆಸ್ ಪ್ರಮುಖರು ರಸ್ತೆ ತಡೆ ನಡೆಸಿದರು. ಎಲ್.ಚಂದ್ರಪ್ಪ, ಸೋಮಶೇಖರ, ಸುರೇಶಬಾಬು, ಗಣಪತಿ, ಸರಸ್ವತಿ, ಉಷಾ ಇತರರಿದ್ದರು.
ಗ್ಯಾಸ್ ಸಿಲೆಂಡರ್ ಅಭಾವಕ್ಕೆ ಕೇಂದ್ರ ಸರ್ಕಾರದ ನಿರ್ಲಕ್ಷೃವೇ ಕಾರಣ ಎಂದು ಆರೋಪಿಸಿ ಸಾಗರ ಬ್ಲಾಕ್ ಕಾಂಗ್ರೆಸ್ ಪ್ರಮುಖರು ರಸ್ತೆ ತಡೆ ನಡೆಸಿದರು. ಎಲ್.ಚಂದ್ರಪ್ಪ, ಸೋಮಶೇಖರ, ಸುರೇಶಬಾಬು, ಗಣಪತಿ, ಸರಸ್ವತಿ, ಉಷಾ ಇತರರಿದ್ದರು.
Published on
ಸಾಗರ: ಗ್ಯಾಸ್ ಸಿಲಿಂಡರ್ ವಿತರಣೆಗೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಬ್ಲಾಕ್ ಕಾಂಗ್ರೆಸ್ ಪ್ರಮುಖರು ಪೊಲೀಸ್ ಸ್ಟೇಷನ್ ವೃತ್ತದಲ್ಲಿ ಸೋಮವಾರ ರಸ್ತೆತಡೆ ನಡೆಸಿದರು.
ಅಚ್ಚೇ ದಿನ್ ಬರುತ್ತದೆ ಎಂದು ದೇಶದ ಮತದಾರರು ಬಿಜೆಪಿಗೆ ಮೂರನೇ ಬಾರಿಗೆ ಅಧಿಕಾರ ನೀಡಿದ್ದಾರೆ. ಆದರೆ ದೇಶದಲ್ಲಿ ಜನಸಾಮಾನ್ಯರ ಸಮಸ್ಯೆಗಳು ಹೆಚ್ಚಾಗುತ್ತಲೇ ಇವೆ. ಮಧ್ಯಪ್ರಾಚ್ಯ ಯುದ್ಧದ ಕಾರಣದಿಂದ ಅಡುಗೆ ಅನಿಲ ಕೊರತೆ ಎಂದು ಹೇಳಲಾಗುತ್ತಿದೆ. ಯುದ್ಧದ ಲಕ್ಷಣ ಇದ್ದಾಗಲೇ ಮುಂಜಾಗ್ರತೆ ವಹಿಸಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಚಂದ್ರಪ್ಪ ದೂರಿದರು.
ಅಡುಗೆ ಅನಿಲ ಕೊರತೆಯಿಂದ ಸಣ್ಣಪುಟ್ಟ ಹೋಟೆಲ್‌ಗಳು ಬಂದ್ ಆಗಿವೆ. ರಾಜ್ಯದಲ್ಲಿ ಪೆಟ್ರೋಲ್ ಒಂದೆರಡು ರೂಪಾಯಿ ಜಾಸ್ತಿಯಾದರೆ ಬೀದಿಗಳಿಯುತ್ತಿದ್ದ ಬಿಜೆಪಿ ಈಗ ಅನಿಲ ಕೊರತೆ ಬಗ್ಗೆ ಯಾಕೆ ಧ್ವನಿ ಎತ್ತುತ್ತಿಲ್ಲ? ಕೂಡಲೇ ಅನಿಲ ಸಮಸ್ಯೆ ಬಗೆಹರಿಸಬೇಕು ಎಂದು ಸಾಗರ ನಗರ ಯೋಜನಾ ಪ್ರಾಧಿಕಾರದ ಸದಸ್ಯ ಸೋಮಶೇಖರ ಲ್ಯಾವಿಗೆರೆ ಒತ್ತಾಯಿಸಿದರು.
ಗ್ಯಾಸ್ ಕೊರತೆಯಿಂದ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುವ ಜತೆಗೆ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ನೇರ ಹೊಣೆ ಕೇಂದ್ರ ಸರ್ಕಾರ. ದೇಶದ ಆರ್ಥಿಕತೆ ಕೊಡುಗೆ ನೀಡುತ್ತಿದ್ದ ಹೋಟೆಲ್ ಉದ್ಯಮ ಬಿಜೆಪಿ ಸರ್ಕಾರದ ನಿರ್ಲಕ್ಷೃದಿಂದ ಮುಚ್ಚುವ ಸ್ಥಿತಿಗೆ ಬಂದಿದೆ. ರಸ್ತೆಯಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟ ಎಂದು ಹೇಳಿಕೊಳ್ಳುತ್ತಿದ್ದ ಬಿಜೆಪಿ ಕಾಲದಲ್ಲಿ ಈಗ ರಸ್ತೆಗೆ ಖಾಲಿ ಸಿಲೆಂಡರ್‌ಗಳು ಬಂದಿವೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಲೇವಡಿ ಮಾಡಿದರು.
ಪ್ರಮುಖರಾದ ಐ.ಎನ್.ಸುರೇಶಬಾಬು, ಗಣಪತಿ ಮಂಡಗಳಲೆ, ಸದ್ದಾಂ ದೊಡ್ಮನೆ, ಎಲ್.ಚಂದ್ರಪ್ಪ, ಮಧುಮಾಲತಿ, ಗಿರೀಶ್ ಕೋವಿ, ಡಿ.ದಿನೇಶ್, ಆನಂದ, ವಿಲ್ಸನ್ ಗೋನ್ಸಾಲ್ವಿಸ್, ಮೈಕಲ್ ಡಿಸೋಜ, ಸರಸ್ವತಿ ನಾಗರಾಜ್, ಸೈಯದ್ ಜಾಕೀರ್, ಉಷಾ, ಪ್ರಭಾವತಿ, ಮಂಜುಳಾ ಚಂದ್ರಪ್ಪ, ಗಜೇಂದ್ರ, ಲಲಿತಮ್ಮ, ಪರಶುರಾಮಪ್ಪ, ಕಬೀರ್, ಅಣ್ಣಪ್ಪ ಭೀಮನೇರಿ, ರವಿಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net