ಕಾರ್ಮಿಕರಿದ್ದ ಬುಲೆರೋ ಮಂಡಗದ್ದೆ ಬಳಿ ಪಲ್ಟಿ | Bullero palty

ಮಂಡಗದ್ದೆ ಸಮೀಪ 15ನೇ ಮೈಲಿಗಲ್ಲಿನ ಬಳಿ ಬುಲೆರೋ ವಾಹನ ಪಲ್ಟಿಯಾಗಿ ವಸ್ತುಗಳು ಹೊರಬಿದ್ದಿರುವುದು.
ಮಂಡಗದ್ದೆ ಸಮೀಪ 15ನೇ ಮೈಲಿಗಲ್ಲಿನ ಬಳಿ ಬುಲೆರೋ ವಾಹನ ಪಲ್ಟಿಯಾಗಿ ವಸ್ತುಗಳು ಹೊರಬಿದ್ದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರದೇಶದಿಂದ ಕೂಲಿ ಅರಸಿಬಂದಿದ್ದ ಕಾರ್ಮಿಕರು
  • ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಬರುತ್ತಿದ್ದಾಗ ಅವಘಡ
  • ಸಣ್ಣಪುಟ್ಟಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರು
ಶಿವಮೊಗ್ಗ: ಮಧ್ಯಪ್ರದೇಶದಿಂದ ಕೂಲಿ ಅರಸಿಬಂದಿದ್ದ ಕಾರ್ಮಿಕರಿದ್ದ ಬುಲೆರೋ ವಾಹನ(Bullero vehicle) ಮಂಡಗದ್ದೆ ಸಮೀಪದ 15ನೇ ಮೈಲಿಗಲ್ಲಿನ ಬಳಿ ಪಲ್ಟಿಯಾಗಿದೆ. ಸಣ್ಣಪುಟ್ಟಗಾಯಗಳೊಂದಿಗೆ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಧ್ಯಪ್ರದೇಶದಿಂದ ಚಿಕ್ಕಮಗಳೂರು(From Madhya Pradesh to Chikmagalur) ಜಿಲ್ಲೆಯ ಕಳಸಾ ಭಾಗದ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಬರುತ್ತಿದ್ದ ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬುಲೆರೋ ವಾಹನ ಸೋಮವಾರ ಬೆಳಗ್ಗೆ 15ನೇ ಮೈಲಿಗಲ್ಲಿನ ಬಳಿ ಪಲ್ಟಿಯಾಗಿದೆ.
ಮಧ್ಯಪ್ರದೇಶದ ರಾಜಗಢ, ವಿದಿಶಾ ಹಾಗೂ ಗುನಾ ಜಿಲ್ಲೆಗಳಿಂದ ಇಬ್ಬರು ಮಕ್ಕಳು ಸೇರಿ ಒಟ್ಟು 29 ಕೂಲಿ ಕಾರ್ಮಿಕರು(Laborers) ಪ್ರಯಾಣಿಸುತ್ತಿದ್ದರು. ಮಧ್ಯಪ್ರದೇಶ ಮೂಲದ ಮೇಸ್ತ್ರಿ ಗೋವಿಂದ್ ಅವರ ಮೂಲಕ ಕಾರ್ಮಿಕರನ್ನು ಕೆಲಸಕ್ಕೆ ಕರೆತರಲಾಗಿತ್ತು ಎನ್ನಲಾಗಿದೆ.ಕಾರ್ಮಿಕರಿಗೆ ದಿನಗೂಲಿ ಆಧಾರದ ಮೇಲೆ ಕಳಸಾ ಭಾಗದ ಕಾಫಿ ತೋಟ(Coffee plantation)ಗಳಲ್ಲಿ ಕೆಲಸ ಮಾಡಲು ಕರೆತರಲಾಗಿತ್ತು. ಇದೇ ಉದ್ದೇಶದಿಂದ ಬುಲೆರೊ ವಾಹನದಲ್ಲಿ ಕಾರ್ಮಿಕರು ಪ್ರಯಾಣಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ.
ಅಪಘಾತದ ಪರಿಣಾಮ ವಾಹನದಲ್ಲಿದ್ದ ಕಾರ್ಮಿಕರಿಗೆ ಗಾಯಗಳಾಗಿವೆ. ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯ ನಡೆಸಿ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಘಟನಾ ಸ್ಥಳಕ್ಕೆ ತುಂಗಾನಗರ ಪೊಲೀಸ್ ಠಾಣೆ(Tunganagar Police Station) ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net