ಬಣಜಿಗ ಸಮುದಾಯ ಸಾಮಾಜಿಕ ವ್ಯವಸ್ಥೆಯ ಬೆನ್ನೆಲುಬು

ಶಿಕಾರಿಪುರದಲ್ಲಿ ಬಣಜಿಗ ಸಂಭ್ರಮ ಸಮಾವೇಶವನ್ನು ಮಾಜಿ ಮುಖ್ಯಮಂತಿ, ಸಂಸದ ಜಗದೀಶ ಶೆಟ್ಟರ್ ಉದ್ಘಾಟಿಸಿದರು. ಶ್ರೀ ಚನ್ನಬಸವ ಸ್ವಾಮೀಜಿ, ಬಿ.ವೈ.ವಿಜಯೇಂದ್ರ, ಕೆ.ಎಸ್. ಗುರುಮೂರ್ತಿ, ಕಾಂಚನಾಕುಮಾರ್, ನಿಂಬೆಗೊಂದಿ ಸಿದ್ಲಿಂಗಪ್ಪ, ಮಹೇಶ್ ಲಂಬಿ ಇತರರಿದ್ದರು.
ಶಿಕಾರಿಪುರದಲ್ಲಿ ಬಣಜಿಗ ಸಂಭ್ರಮ ಸಮಾವೇಶವನ್ನು ಮಾಜಿ ಮುಖ್ಯಮಂತಿ, ಸಂಸದ ಜಗದೀಶ ಶೆಟ್ಟರ್ ಉದ್ಘಾಟಿಸಿದರು. ಶ್ರೀ ಚನ್ನಬಸವ ಸ್ವಾಮೀಜಿ, ಬಿ.ವೈ.ವಿಜಯೇಂದ್ರ, ಕೆ.ಎಸ್. ಗುರುಮೂರ್ತಿ, ಕಾಂಚನಾಕುಮಾರ್, ನಿಂಬೆಗೊಂದಿ ಸಿದ್ಲಿಂಗಪ್ಪ, ಮಹೇಶ್ ಲಂಬಿ ಇತರರಿದ್ದರು.
Published on
ಶಿಕಾರಿಪುರ: ಬಣಜಿಗ ಸಮಾಜವು ಕೇವಲ ಒಂದು ಸಮುದಾಯವಲ್ಲ. ಅದು ನಾಡಿನ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯ ಬೆನ್ನೆಲುಬು ಎಂದು ಮಾಜಿ ಮುಖ್ಯಮಂತ್ರಿ, ಲೋಕಸಭಾ ಸದಸ್ಯ ಜಗದೀಶ ಶೆಟ್ಟರ್ ಹೇಳಿದರು.
ಪಟ್ಟಣದ ವಿರಕ್ತಮಠದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಬಣಜಿಗ ಸಮಾಜದ ಬಣಜಿಗ ಸಂಭ್ರಮ ಸಮಾವೇಶ ಉದ್ಘಾಟಿಸಿ ಮಾತನಾಡಿ, ಪರಿಶ್ರಮಿ ಮತ್ತು ಸ್ನೇಹಮಯಿ ಸಮಾಜದ ಋಣ ನಮ್ಮ ಮೇಲಿದೆ. ಸಮಾಜವನ್ನು ಕಟ್ಟುವ ಕಾರ್ಯಕ್ಕೆ ಮುಂದಾಗಬೇಕು. ಸಂಘಟನೆ ಸಮಾಜಕ್ಕೆ ಭೀಮಬಲ ಎಂದರು.
ಬಣಜಿಗ ಸಮಾಜವು ಧರ್ಮ, ವ್ಯಾಪಾರ ಮತ್ತು ದಾಸೋಹ ಸಂಸ್ಕೃತಿ ಮೂಲಕ ನಾಡಿಗೆ ಅಪಾರ ಕೊಡುಗೆ ನೀಡಿದೆ. ಆದರೆ ಸಮಾಜದ ಯುವಪೀಳಿಗೆಗೆ ಶೈಕ್ಷಣಿಕ ಮತ್ತು ರಾಜಕೀಯವಾಗಿ ಸೂಕ್ತ ಪ್ರಾತಿನಿಧ್ಯ ಸಿಗಬೇಕಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಸಂಘಟಿತರಾಗುವ ಮೂಲಕ ಸಮಾಜದ ಶಕ್ತಿ ಪ್ರದರ್ಶಿಸಬೇಕು. ಮುಖಂಡರು ಸದಾ ಸಮಾಜದ ಅಭಿವೃದ್ಧಿ ಪರ ಚಿಂತನೆ ಉಳ್ಳವರಾಗಿರುವುದು ಸಮಾಜೋತ್ಥಾನಕ್ಕೆ ಪೂರಕವಾಗಿದೆ. ತಾಲೂಕಿನ ಬಣಜಿಗ ಸಮಾಜವು ಇಂದು ಹೊಸ ಹೆಜ್ಜೆಯನ್ನಿಟ್ಟಿದೆ. ವಿವಿಧ ಕ್ಷೇತ್ರದಲ್ಲಿ ಅಪರೂಪದ ಕೊಡುಗೆ ನೀಡಿದೆ. ನೂತನ ಪದಾಧಿಕಾರಿಗಳು ಸಮಾಜದವರ ಸಂಕಷ್ಟಕ್ಕೆ ದನಿಯಾಗಿ ಸಮುದಾಯವನ್ನು ಸದೃಢವಾಗಿ ಕಟ್ಟಿ ಎಂದು ಹೇಳಿದರು.
ಬಣಜಿಗ ಸಮಾಜದ ನೂತನ ಅಧ್ಯಕ್ಷ ನಿಂಬೆಗೊಂದಿ ಸಿದ್ಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ರಾಜ್ಯ ಉಪಾಧ್ಯಕ್ಷ ಮಹೇಶ್ ಲಂಬಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಕಾಂಚನಾ ಕುಮಾರ್, ಜಿಲ್ಲಾ ಉಸ್ತುವಾರಿ ಲಿಂಗರಾಜ್ ಹವಳದ್, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಸುಧೀರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ್. ಬಿ.ಡಿ.ಭೂಕಾಂತ್, ಗಿರೀಶ್,  ಪ್ರವೀಣ್‌ಕುಮಾರ್, ಮಲ್ಲಿಕಾರ್ಜುನ ಸಾಹುಕಾರ್, ವಾಗೀಶ್, ಶೈಲಜಾ ಮಡ್ಡಿ,  ಲೋಕೇಶ್, ಮಲ್ಲಿಕಾರ್ಜುನ ಹೊನ್ನಶೆಟ್ಟರ್, ಚನ್ನವೀರಶೆಟ್ಟರು, ಕರಿಬಸಪ್ಪ ಬೋರ್ಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net