ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಪಠ್ಯಪುಸ್ತಕ

ಸೊರಬ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಪ್ರಾಚಾರ್ಯ ಎಂ.ಸುರೇಶಪ್ಪ ಸ್ವಾಗತಿಸಿದರು. ಚಿದಂಬರ್, ಡಾ. ಉಮೇಶ್ ಭದ್ರಾಪುರ, ವಿಜಯಕುಮಾರ್ ದಟ್ಟರ್ ಇತರರಿದ್ದರು.
ಸೊರಬ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಪ್ರಾಚಾರ್ಯ ಎಂ.ಸುರೇಶಪ್ಪ ಸ್ವಾಗತಿಸಿದರು. ಚಿದಂಬರ್, ಡಾ. ಉಮೇಶ್ ಭದ್ರಾಪುರ, ವಿಜಯಕುಮಾರ್ ದಟ್ಟರ್ ಇತರರಿದ್ದರು.
Published on
ಸೊರಬ: ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ವರ್ಷ ಪ್ರಾರಂಭಗೊಂಡಿದ್ದು, ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ಮೊದಲ ದಿನ ತರಗತಿಗಳಿಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಉಪನ್ಯಾಸಕರು ಗುಲಾಬಿ ಹೂವು ನೀಡಿ ಸ್ವಾಗತಿಸಿದರು.
ಕಾಲೇಜಿನ ಪ್ರಾಚಾರ್ಯ ಎಂ.ಸುರೇಶಪ್ಪ ಮಾತನಾಡಿ, ವಿದ್ಯಾರ್ಥಿಗಳು ತರಗತಿಗಳಿಗೆ ಪ್ರತಿನಿತ್ಯ ಹಾಜರಾಗಬೇಕು. ಕನಿಷ್ಠ  ಹಾಜರಾತಿ ಇಲ್ಲದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ಇರುವುದಿಲ್ಲ. ವಿದ್ಯಾರ್ಥಿಗಳು ಸರ್ಕಾರದಿಂದ ಸಿಗುವ ಸೌಲಭ್ಯ ಬಳಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳಿಗೆ ಸರ್ಕಾರ ಪಠ್ಯಪುಸ್ತಕ ನೀಡುತ್ತಿದೆ. ಕಾಲೇಜಿನಲ್ಲಿ ಶಿಸ್ತಿನಿಂದ ವರ್ತಿಸಬೇಕು. ಸಿಸಿ ಕ್ಯಾಮರಾ ಪರಿಶೀಲಿಸುವ ಜತೆ ವಿದ್ಯಾರ್ಥಿಗಳ ಚಲನವಲನಗಳ ಬಗ್ಗೆ ಗಮನ ಹರಿಸಲಾಗುತ್ತದೆ. ವಿದ್ಯಾರ್ಥಿಗಳ ಪರಿಶ್ರಮದಿಂದ ಕಾಲೇಜಿಗೆ ಉತ್ತಮ ಫಲಿತಾಂಶ ಲಭಿಸುತ್ತದೆ. ಪಾಲಕರ ಕನಸಿನಂತೆ ವಿದ್ಯಾಭ್ಯಾಸ ಪಡೆದು ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ತಿಳಿಸಿದರು.
ಉಪನ್ಯಾಸಕರಾದ ಚಿದಂಬರ್, ವಿಜಯಕುಮಾರ ದಟ್ಟರ್, ಮಲ್ಲೇಶಪ್ಪ, ಡಾ. ಉಮೇಶ್ ಭದ್ರಾಪುರ, ಬಸವರಾಜ್, ಮಂಜುನಾಥ, ಎಂ.ಮಂಜುನಾಥ, ಸುಚೇತ್, ನಯನಾ, ಸಂಗೀತಾ, ರೇವಣ್ಣಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net