ಆಯನೂರು: ಬಸವಕಲ್ಯಾಣ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮೀಪದ ಆರು ಗ್ರಾಮಗಳಲ್ಲಿನ ಅಂಗವಿಕಲ ವಿದ್ಯಾರ್ಥಿಗಳಿಗೆ ಸಮಾಜ ಸೇವಕರಾದ ಶಿವಕುಮಾರ ಹಾಗೂ ಎಂ.ಮುರಳಿ ಅವರ ಸಹಯೋಗದಲ್ಲಿ ಬ್ಯಾಗ್ ಮತ್ತು ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.
ಶಿವಕುಮಾರ ಮಾತನಾಡಿ, ಅಂಗವಿಕಲರು ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಒಲವು ಬೆಳೆಸಿಕೊಳ್ಳಬೇಕು. ನಮ್ಮಿಂದ ಸಾಧನೆ ಮಾಡಲು ಸಾಧ್ಯ ಎಂಬ ಧನಾತ್ಮಕ ಆಲೋಚನೆಯೊಂದಿಗೆ ಜೀವನಶೈಲಿ ರೂಪಿಸಿಕೊಳ್ಳಬೇಕು. ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.