ಅನರ್ಹರು ಕೂಡ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ ಎಂಬ ಅನುಮಾನದ ಮೇರೆಗೆ ಸರ್ಕಾರ ರಾಜ್ಯ ಮಟ್ಟದಲ್ಲಿ ಹುಡುಕಾಟ ಆರಂಭಿಸಿತ್ತು. ಈ ವೇಳೆ ಅನೇಕ ಆಘಾತಕಾರಿ ಅಂಶಗಳು ಪತ್ತೆಯಾಗಿದ್ದವು. ಹೀಗಾಗಿ ಆರಂಭಿಕ ಹಂತದಲ್ಲಿ ಎಲ್ಲರ ಪಿಂಚಣಿ ನಿಲ್ಲಿಸಿ, ದಾಖಲೆಗಳ ಪರಿಶೀಲನೆ ನಡೆಸಿದ ಬಳಿಕ ಅರ್ಹರು ಎಂಬುದು ದೃಢಪಟ್ಟರೆ ಮಾತ್ರ ಅವರಿಗೆ ಪಿಂಚಣಿ ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ.