ಸಾಗರ ತಾಲೂಕಿನ ಯಡಜಿಗಳೆಮನೆ ಗ್ರಾಪಂ ವ್ಯಾಪ್ತಿಯ ಇಕ್ಕೇರಿ ವಿದ್ಯಾಸಂಸ್ಥೆಯ ಸದ್ಗುರು ಸ್ಕೂಲ್ ಆ್ ವಿಷನ್‌ನಲ್ಲಿ ಧಾರವಾಡದ ವಿದ್ಯಾಪೋಷಕ್ ಸಂಸ್ಥೆಯಿಂದ ಆಯೋಜಿಸಿದ್ದ ಶಿಕ್ಷಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಓದಿನ ಜತೆಯಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಮನೋಪ್ರವೃತ್ತಿ ಬಳಸಿಕೊಳ್ಳಬೇಕು. ಇದಕ್ಕೆ ಶಿಕ್ಷಕರಿಗೂ ತರಬೇತಿ ಮತ್ತು ಅಧ್ಯಯನದ ಅವಶ್ಯಕತೆ ಇದೆ ಎಂದರು. ವಿದ್ಯಾಪೋಷಕ್ ಸಂಸ್ಥೆ ಸಿಇಒ ಡಾ. ಶರತ್ ಐರಾಣಿ ಮಾತನಾಡಿ, ಶಿಕ್ಷಕರು ವೃತ್ತಿಪರ ಕೌಶಲ ಮತ್ತು ಬದ್ಧತೆ ಬೆಳೆಸಿಕೊಳ್ಳಲು ಇಂತಹ ತರಬೇತಿ ಸಹಕಾರಿ ಎಂದು ಹೇಳಿದರು. ಇಕ್ಕೇರಿ ವಿದ್ಯಾಸಂಸ್ಥೆ ಪ್ರಧಾನ ಕಾರ್ಯದರ್ಶಿ ಮಾ.ವೆಂ.ಸ.ಪ್ರಸಾದ್ ಮಾತನಾಡಿ, ಶಿಕ್ಷಕರ ಸಾಮರ್ಥ್ಯ ವೃದ್ಧಿಯಿಂದ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕೆ ನೆರವಾಗುತ್ತದೆ ಎಂದರು.