ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಕಲಿಸಿ

ಭದ್ರಾವತಿ ರೋಟರಿ ಸಭಾಂಗಣದಲ್ಲಿ ಚುಂಚಾದ್ರಿ ಮಹಿಳಾ ವೇದಿಕೆ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಪ್ರೊ. ಆರ್.ಅನುರಾಧಾ ಪಟೇಲ್, ಎಂ.ಎಸ್.ಸುಧಾಮಣಿ, ಶ್ವೇತಾ ಆಚಾರ್ಯ, ಕೆ.ಎಚ್.ಶಿವಕುಮಾರ್ ಇತರರಿದ್ದರು.
ಭದ್ರಾವತಿ ರೋಟರಿ ಸಭಾಂಗಣದಲ್ಲಿ ಚುಂಚಾದ್ರಿ ಮಹಿಳಾ ವೇದಿಕೆ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಪ್ರೊ. ಆರ್.ಅನುರಾಧಾ ಪಟೇಲ್, ಎಂ.ಎಸ್.ಸುಧಾಮಣಿ, ಶ್ವೇತಾ ಆಚಾರ್ಯ, ಕೆ.ಎಚ್.ಶಿವಕುಮಾರ್ ಇತರರಿದ್ದರು.
Published on
ಭದ್ರಾವತಿ: ಮಹಿಳೆಯರು ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಕಲಿಸಬೇಕು. ಒಳ್ಳೆಯ ವಿಚಾರಧಾರೆಗಳ ಬಗ್ಗೆ ಮಾರ್ಗದರ್ಶನ ನೀಡುವುದರಿಂದ ಸುಸಂಸ್ಕೃತ ದೇಶ ಕಟ್ಟಲು ಸಾಧ್ಯ ಎಂದು ಚುಂಚಾದ್ರಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಪ್ರೊ. ಆರ್.ಅನುರಾಧಾ ಪಟೇಲ್ ಹೇಳಿದರು.
ನ್ಯೂಟೌನ್ ರೋಟರಿ ಸಭಾಂಗಣದಲ್ಲಿ ಚುಂಚಾದ್ರಿ ಮಹಿಳಾ ವೇದಿಕೆ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದೇಶಿಯರು ಭಾರತೀಯ ಸಂಸ್ಕೃತಿ ಅಳವಡಿಸಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ನಮ್ಮ ಮಹಿಳೆಯರು ವಿದೇಶಿ ಸಂಸ್ಕೃತಿಗೆ ಮಾರು ಹೋಗಿ ವೇಷಭೂಷಣ ಬದಲಾಗುತ್ತಿದೆ ಎಂದರು.
ಉದ್ಯಮಿ ರೋಹಿಣಿ ಮಂಜುನಾಥ್ ಮಾತನಾಡಿ, ಸಾಧನೆ ಮಾಡಲು ಹೊರಟ ಮಹಿಳೆ ಎಂದಿಗೂ ಹೆದರಬಾರದು. ದುಡಿಯುವ ಹುಮ್ಮಸ್ಸು ಇರಬೇಕು. ಧೈರ್ಯದಿಂದ ಮುನ್ನುಗ್ಗಿದರೆ ಯಶಸ್ಸಿನ ಹಾದಿಯುದ್ದಕ್ಕೂ ಸಹಕಾರ ನೀಡುವವರು ಸಿಗುತ್ತಾರೆ ಎಂದು ತಿಳಿಸಿದರು.
ಪತ್ರಕರ್ತೆ ಶ್ವೇತಾ ಆಚಾರ್ಯ ಮಾತನಾಡಿ, ಮಹಿಳೆಯರಿಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಬಳಕೆ ಮಾಡಿ ದುಡಿಯುವ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು. ಮಕ್ಕಳಿಗೆ ಶಿಕ್ಷಣದ ಜತೆ ಅವರ ಆಸಕ್ತಿಗಳನ್ನು ಗಮನಿಸಿ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಚುಂಚಾದ್ರಿ ಮಹಿಳಾ ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್.ಸುಧಾಮಣಿ, ್ಯಾಷನ್ ಡಿಸೈನರ್ ಸ್ವಪ್ನಾ ಅಜ್ರಿ, ರೋಟರಿ ಕ್ಲಬ್ ಭದ್ರಾವತಿ ಅಧ್ಯಕ್ಷ ಕೆ.ಎಚ್.ಶಿವಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net