ತರಳಬಾಳು ಹುಣ್ಣಿಮೆ ಸಿದ್ಧತೆ ಪರಿಶೀಲನೆ

ಭದ್ರಾವತಿ ಬೊಮ್ಮನಕಟ್ಟೆ ವಿಐಎಸ್​ಎಲ್​ ಹೆಲಿಪ್ಯಾಡ್​ ಬಳಿ ಜ.21ರಿಂದ ನಡೆಯುವ ತರಳಬಾಳು ಹುಣ್ಣಿಮೆ ಮಹೋತ್ಸವದ ಪೂರ್ವ ಸಿದ್ಧತೆಗಳನ್ನು ಸಂಸದ ಬಿ.ವೈ.ರಾವೇಂದ್ರ ಪರಿಶೀಲಿಸಿದರು. ಮಂಗೋಟೆ ರುದ್ರೇಶ್​, ಸಿದ್ದೇಶ್​, ಎಂ.ಎಸ್​.ರವಿ, ಕೆ.ಎಚ್​.ತೀರ್ಥಯ್ಯ, ದಿನೇಶ್​ ಮುಂತಾದವರಿದ್ದರು.

Published on
ಭದ್ರಾವತಿ: ನಗರದ ಬೊಮ್ಮನಕಟ್ಟೆ ವಿಐಎಸ್​ಎಲ್​ ಹೆಲಿಪ್ಯಾಡ್​ ಬಳಿ ಜ.21ರಿಂದ ಫೆ.1ರವರೆಗೆ ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಪೂರ್ವ ಸಿದ್ಧತೆಗಳನ್ನು ಸಂಸದ ಬಿ.ವೈ.ರಾವೇಂದ್ರ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ರಸ್ತೆಗಳು ಸಾಕಷ್ಟು ಹಾಳಾಗಿದ್ದು ಅವುಗಳನ್ನು ಡಾಂಬರೀಕರಣ ಮಾಡಿ ಸಮಾರಂಭಕ್ಕೆ ಆಗಮಿಸುವವರಿಗೆ ಅನುಕೂಲ ಒದಗಿಸಲಾಗುವುದು. ಅಲ್ಲದೆ ಹೆದ್ದಾರಿ ಕಾಮಗಾರಿ ನಿಧಾನವಾಗುತ್ತಿದೆ. ಎಲ್ಲ ಕಡೆಗಳಿಂದ ಜನರು ಬರಲಿದ್ದಾರೆ. ಅವರ ಅನುಕೂಲಕ್ಕಾಗಿ ತ್ವರಿತವಾಗಿ ಆ ಭಾಗಗಳ ರಸ್ತೆ ಕಾಮಗಾರಿ ಮಾಡಲು ಸಂಬಂಧಿಸಿದ ಇಂಜಿನಿಯರ್​ ಬಳಿ ಮಾತನಾಡಿ, ಗುತ್ತಿಗೆದಾರರಿಗೆ ಕೆಲಸ ಮಾಡುವಂತೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಂಗೋಟೆ ರುದ್ರೇಶ್​, ಸಿದ್ದೇಶ್​, ಎಂ.ಎಸ್​.ರವಿ, ಕೆ.ಎಚ್​.ತೀರ್ಥಯ್ಯ, ದಿನೇಶ್​ ಮುಂತಾದವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net