ಪ್ರತಿಭಾವಂತರಿಗೆ ಸಮಾಜದ ಬೆಂಬಲ ಅಗತ್ಯ

ತೀರ್ಥಹಳ್ಳಿಯಲ್ಲಿ ಆಯೋಜಿಸಿದ್ದ ಯುವ ಶಿಲ್ಪಿ ಕುರುವಳ್ಳಿ ಜಗದೀಶ್​ ಅವರ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನವನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿದರು. ಜ್ಯೋತಿ ಮೋಹನ್​, ಮಂಜಣ್ಣ ನಾಯ್ಕ್​ ಇದ್ದರು.
ತೀರ್ಥಹಳ್ಳಿಯಲ್ಲಿ ಆಯೋಜಿಸಿದ್ದ ಯುವ ಶಿಲ್ಪಿ ಕುರುವಳ್ಳಿ ಜಗದೀಶ್​ ಅವರ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನವನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿದರು. ಜ್ಯೋತಿ ಮೋಹನ್​, ಮಂಜಣ್ಣ ನಾಯ್ಕ್​ ಇದ್ದರು.
Published on
ತೀರ್ಥಹಳ್ಳಿ: ಕಲೆಗಾಗಿ ಸಮರ್ಪಿಸಿಕೊಂಡವರ ಬದುಕು ಕೂಡ ಹಸನಾಗಬೇಕು. ಆರ್ಥಿಕವಾಗಿ ಕಲಾವಿದರು ಸೋಲದಂತೆ ಸಮಾಜವು ಗುರುತಿಸಿ ಬೆಂಬಲ ನೀಡುವ ಅಗತ್ಯವಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಕನ್ನಡ ಸಂಸತಿ ಇಲಾಖೆ ನರೆವಿನೊಂದಿಗೆ ಪಟ್ಟಣದ ಗೋಪಾಲ ಗೌಡ ರಂಗಮಂದಿರದಲ್ಲಿ ಆಯೋಜಿಸಿದ್ದ ಯುವ ಶಿಲ್ಪಿ ಕುರುವಳ್ಳಿ ಜಗದೀಶ್​ ಅವರ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಈ ಮಣ್ಣಿನಲ್ಲಿ ಹುಟ್ಟಿ ಶಿಲ್ಪಕಲೆಯಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಹಿರಿಯರಂತೆ ಇದೀಗ ಪ್ರವರ್ಧಮಾನಕ್ಕೆ ಬರುತ್ತಿರುವ ಕ್ರಿಯಾಶೀಲ ಚಿಂತನೆಯ ಕುರುವಳ್ಳಿ ಜಗದೀಶ್​ ಭವಿಷ್ಯ ಕೂಡ ಉಜ್ವಲವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಯೋಧ್ಯೆಯಲ್ಲಿ ಸ್ಥಾಪಿಸಲಾಗಿರುವ ಶ್ರೀರಾಮನ ಮೂರ್ತಿಯನ್ನು ರಚಿಸಿರುವುದು ನಮ್ಮ ರಾಜ್ಯದವರೆ ಆದ ಮೈಸೂರಿನ ಅರುಣ್​ ಯೋಗಿರಾಜ್​ ಎಂಬುದು ಹೆಮ್ಮೆಯ ಸಂಗತಿ. ಬಾಣಂಕಿ ಜಗದೀಶ್​, ಎಚ್​.ಎನ್​.ಕೃಷ್ಣಮೂರ್ತಿ, ಚಿ.ಸು.ಕೃಷ್ಣಶೆಟ್ಟಿ ಮುಂತಾದರವರ ಹಾದಿಯಲ್ಲೇ ಕುರುವಳ್ಳಿ ಜಗದೀಶ್​ ಸಾಗುತ್ತಿದ್ದಾರೆ. ಇವರ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಕಲಾಕೃತಿಗಳು ಆಕರ್ಷಕವಾಗಿವೆ ಎಂದರು.
ಪಪಂ ಸದಸ್ಯೆ ಜ್ಯೋತಿ ಮೋಹನ್​, ಚಿತ್ರಕಲಾವಿದ ಮಂಜಣ್ಣ ನಾಯ್ಕ್​, ಲೇಖಕ ಶಿವಾನಂದ ಕರ್ಕಿ, ಪತ್ರಕರ್ತರ ಸಂದ ಅಧ್ಯಕ್ಷ ಮುನ್ನೂರು ಮೋಹನ್​, ಕಲಾವಿದ ನಿಶ್ಚಲ್​ ಜಾದೂಗಾರ್​, ಕಲಾವಿದ ಜಗದೀಶ್​ ಕುಟುಂಬದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net