ಸಾಮಾಜಿಕ ಅರಣ್ಯ ರಕ್ಷಣೆಗೆ ಕ್ರಮ ಕೈಗೊಳ್ಳಿ I social forest

ಸಾಮಾಜಿಕ ಅರಣ್ಯಗಳ ಸಂರಕ್ಷಣೆಗೆ ಆಗ್ರಹಿಸಿ ಅನಂತ ಹೆಗಡೆ ಅಶೀಸರ, ಪ್ರೊ.ಬಿ.ಎಂ.ಕುಮಾರಸ್ವಾಮಿ, ಶ್ರೀಪಾದ ಬಿಚ್ಚುಗತ್ತಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಸಾಮಾಜಿಕ ಅರಣ್ಯಗಳ ಸಂರಕ್ಷಣೆಗೆ ಆಗ್ರಹಿಸಿ ಅನಂತ ಹೆಗಡೆ ಅಶೀಸರ, ಪ್ರೊ.ಬಿ.ಎಂ.ಕುಮಾರಸ್ವಾಮಿ, ಶ್ರೀಪಾದ ಬಿಚ್ಚುಗತ್ತಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿಗೆ ಪರಿಸರವಾದಿಗಳ ಮನವಿ
  • ಅರಣ್ಯ ಉಳಿವಿಗಾಗಿ ಕ್ರಮಕ್ಕೆ ಒತ್ತಾಯ
ಶಿವಮೊಗ್ಗ: ಐಐಎಸ್ಸಿ, ಪಶ್ಚಿಮಘಟ್ಟ (westernghat) ಕಾರ್ಯಪಡೆ 2013ರಲ್ಲಿ ಸಲ್ಲಿಸಿದ ಶಿಫಾರಸುಗಳು, ಅಧ್ಯಯನ ವರದಿಗಳಲ್ಲಿ ಜಿಲ್ಲೆಯಲ್ಲಿ ಅರಣ್ಯ ಪರಿಸ್ಥಿತಿ ಸೂಕ್ಷ್ಮವಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಈಗ 13 ವರ್ಷಗಳ ಬಳಿಕ ಇದು ಮತ್ತಷ್ಟು ಗಂಭೀರವಾಗಿದೆ. ಹೀಗಾಗಿ ಸಾಮಾಜಿಕ ಅರಣ್ಯ (forest) ಗಳ ಉಳಿವಿಗೆ ಜಿಲ್ಲಾಢಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವೃಕ್ಷಲಕ್ಷ ಆಂದೋಲನ ಹಾಗೂ ಪರ್ಯಾವರಣ ಟ್ರಸ್ಟ್ ಪ್ರಮುಖರು ಬುಧವಾರ ಡಿಸಿ (dc) ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ವೃಕ್ಷ ಲಕ್ಷ ಆಂದೋಲನ ಸಂಘಟನೆ 40 ವರ್ಷಗಳಿಂದ ಮಲೆನಾಡಿನ ಅರಣ್ಯ, ಗ್ರಾಮೀಣ ಸುಸ್ಥಿರ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಇದೀಗ ಜಿಲ್ಲೆಯ ಸಾಮಾಜಿಕ ಅರಣ್ಯಸಂರಕ್ಷಣಾ ಅಭಿಯಾನ ನಡೆಸುತ್ತಿದೆ ಎಂದು ಜೀವವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮಾಹಿತಿ ನೀಡಿದರು.
ಸಾಮಾಜಿಕ ಅರಣ್ಯಗಳು ನಿರ್ವಹಣೆ ಇಲ್ಲದೆ ಅನಾಥವಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಕಂದಾಯ, ಅರಣ್ಯ. ಪಿಆರ್‌ಇಡಿ ಅಧಿಕಾರಿಗಳು ಜಂಟಿಯಾಗಿ ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಅರಣ್ಯ ವನಗಳ ಗಡಿ ಕಂದಕಗಳು ಭಾಗಶಃ ಮುಚ್ಚಿವೆ. ಕೆಲವೆಡೆ ನೆಡುತೋಪು ಕಟಾವಾಗಿಲ್ಲ. ಕಾವಲುಗಾರರು, ನಾಮಫಲಕವೂ ಇಲ್ಲ. ಇದೆಲ್ಲದರ ಕಡೆಗೆ ತುರ್ತು ಗಮನ ಹರಿಸಬೇಕು. ಅರಣ್ಯ ಇಲಾಖೆ ಜೀವವೈವಿಧ್ಯ ಮಂಡಳಿ ಜತೆ ಸಮೀಕ್ಷೆ ನಡೆಸಬೇಕು. ಶಾಲಾವನ, ಪವಿತ್ರ ವನ, ದೇವರಕಾಡು ಯೋಜನೆಗಳನ್ನು ಸರ್ಕಾರ ಪುನಃ ಆರಂಭಿಸಬೇಕೆಂದು ಒತ್ತಾಯಿಸಿದರು.
ಪರಿಸರವಾದಿ ಪ್ರೊ. ಬಿ.ಎಂ.ಕುಮಾರಸ್ವಾಮಿ, ಜೀವವೈವಿಧ್ಯ ಮಂಡಳಿ ಮಾಜಿ ಸದಸ್ಯ ಕೆ.ವೆಂಕಟೇಶ, ಪರಿಸರ ಜಾಗೃತಿ ಟ್ರಸ್ಟ್‌ನ ಉಪಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ, ಪರ್ಯಾವರಣ ಟ್ರಸ್ಟ್‌ನ ಬಾಲಚಂದ್ರ ನಾಯ್ಡು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net