ಪಿತೂರಿ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಿ | Protest

ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಿದ ಎಲ್ಲ ಆರೋಪಿಗಳ ಜತೆಗೆ ಯೂಟ್ಯೂಬರ್ ಸಮೀರ್‌ನನ್ನು ಸೇರಿಸಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಸಾಗರ ತಾಲೂಕು ಹಿತರಕ್ಷಣಾ ಸಮಿತಿಯ ಎಸ್.ವಿ.ಹಿತಕರ ಜೈನ್, ದೇವೇಂದ್ರಪ್ಪ, ಸುಂದರ ಸಿಂಗ್, ಲತಾ ಜೈನ್, ರೂಪಾ ಮತ್ತಿತರರು ಎಸಿ ಕಚೇರಿಗೆ ಮನವಿ ಸಲ್ಲಿಸಿದರು.
ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಿದ ಎಲ್ಲ ಆರೋಪಿಗಳ ಜತೆಗೆ ಯೂಟ್ಯೂಬರ್ ಸಮೀರ್‌ನನ್ನು ಸೇರಿಸಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಸಾಗರ ತಾಲೂಕು ಹಿತರಕ್ಷಣಾ ಸಮಿತಿಯ ಎಸ್.ವಿ.ಹಿತಕರ ಜೈನ್, ದೇವೇಂದ್ರಪ್ಪ, ಸುಂದರ ಸಿಂಗ್, ಲತಾ ಜೈನ್, ರೂಪಾ ಮತ್ತಿತರರು ಎಸಿ ಕಚೇರಿಗೆ ಮನವಿ ಸಲ್ಲಿಸಿದರು.
Published on
ಸಾಗರ: ಶ್ರೀಕ್ಷೇತ್ರ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ರೂಪಿಸಿದ ಆರು ಆರೋಪಿಗಳ ಜತೆಗೆ ಯೂಟ್ಯೂಬರ್ ಸಮೀರ್‌ನನ್ನು ಪ್ರಕರಣದಲ್ಲಿ ಸೇರಿಸಿ ಪ್ರಕರಣ ದಾಖಲಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಸಾಗರ ತಾಲೂಕು ಹಿತರಕ್ಷಣಾ ಸಮಿತಿ ಪ್ರಮುಖರು ಶುಕ್ರವಾರ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ವಿರುದ್ಧ ಪಿತೂರಿ ಮಾಡಲು ಬಂದಿದ್ದ ಬುರುಡೆ ಗ್ಯಾಂಗ್‌ನ ಬಣ್ಣ ಬಯಲಾಗಿದೆ. ಕ್ಷೇತ್ರದ ಪಾವಿತ್ರೃತೆಗೆ ಧಕ್ಕೆ ತರಲು ರೂಪಿಸಿದ ಷಡ್ಯಂತ್ರ ವಿಫಲವಾಗಿ, ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಅತಿಹೆಚ್ಚು ಸುಳ್ಳು ಸುದ್ದಿ ಹಬ್ಬಿಸಿದ್ದು ಯೂಟ್ಯೂರ್ ಸಮೀರ್. ಆತನನ್ನೂ ಸಹ ಆರೋಪಿಯಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಸಾಗರದ ಮಾರಿಕಾಂಬಾ ಜಾತ್ರೆಗೆ ಮೂಲ ಸೌಲಭ್ಯಗಳಾದ ರಸ್ತೆ, ಕುಡಿಯುವ ನೀರು, ಸ್ವಚ್ಛತೆ ಇನ್ನಿತರೆ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ 25 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು. ಇದಕ್ಕಾಗಿ ನಗರವನ್ನು ಸಂಪರ್ಕಿಸುವ 20 ಕಿ.ಮೀ ವ್ಯಾಪ್ತಿಯ ರಸ್ತೆಯನ್ನು ಅಭಿವೃದ್ದಿಪಡಿಸುವುದು ಅನಿವಾರ್ಯವಾಗಿದೆ. ಸರ್ಕಾರ ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಮಲೆನಾಡಿನ ಶರಾವತಿ ನದಿಯ ಕರೂರು ಭಾರಂಗಿ ಹೋಬಳಿಗಳ ಸಂಪರ್ಕ ಸೇತುವಾಗಿರುವ ಮುಪ್ಪಾನೆಯಲ್ಲಿ ಈಗಿರುವ ಲಾಂಚ್ ಸೌಲಭ್ಯದ ಬದಲು ಸೇತುವೆ ನಿರ್ಮಿಸಬೇಕು. ಈ ಸೇತುವೆ ನಿರ್ಮಾಣಕ್ಕೆ ಕೆಪಿಸಿಯಲ್ಲಿರುವ ಮೀಸಲು ಹಣವನ್ನು ಬಳಕೆ ಮಾಡಲು ಅವಕಾಶವಿದೆ. ಸರ್ಕಾರದ ಮೇಲೆ ಹೊರೆ ಬೀಳುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು.
ಎಸ್.ವಿ.ಹಿತಕರ ಜೈನ್, ದೇವೇಂದ್ರಪ್ಪ, ಸುಂದರ ಸಿಂಗ್, ಸಂತೋಷ್ ಶೇಟ್, ಸತೀಶ್ ಮೊಗವೀರ, ಲತಾ ಜೈನ್, ರೂಪಾ, ಮಹಾಬಲೇಶ್ವರ, ಭೋಜರಾಜ್, ಜಯಕುಮಾರ್, ಶಿವಶಂಕರ್, ಅಶೋಕ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net