ಸ್ಥಳೀಯ ಕಲಾವಿದರ ಪ್ರಯತ್ನವನ್ನು ಬೆಂಬಲಿಸಿ | film team Celebration

ಸಾಗರದ ಶ್ರೀ ಚಿತ್ರಮಂದಿರದ ಎದುರು ವಿಕಲ್ಪ ಸಿನಿಮಾ ತಂಡದ ಸಂಭ್ರಮಾಚರಣೆ. ಪೃಥ್ವಿರಾಜ್ ಪಾಟೀಲ್, ನಾಗಶ್ರೀ ಹೆಬ್ಬಾರ್, ಇಂದಿರಾ ಶಿವಸ್ವಾಮಿ ಸಂತೋಷ್ ಸದ್ಗುರು ಇತರರಿದ್ದರು.
ಸಾಗರದ ಶ್ರೀ ಚಿತ್ರಮಂದಿರದ ಎದುರು ವಿಕಲ್ಪ ಸಿನಿಮಾ ತಂಡದ ಸಂಭ್ರಮಾಚರಣೆ. ಪೃಥ್ವಿರಾಜ್ ಪಾಟೀಲ್, ನಾಗಶ್ರೀ ಹೆಬ್ಬಾರ್, ಇಂದಿರಾ ಶಿವಸ್ವಾಮಿ ಸಂತೋಷ್ ಸದ್ಗುರು ಇತರರಿದ್ದರು.
Published on
ಸಾಗರ: ಸಾಗರದವರೇ ನಿರ್ಮಿಸಿ, ನಟಿಸಿ, ನಿರ್ದೇಶನ ಮಾಡಿರುವ ವಿಕಲ್ಪ ಚಲನಚಿತ್ರ ನಗರದ ಶ್ರೀಚಿತ್ರ ಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಭಾನುವಾರ ಮೊದಲ ಪ್ರದರ್ಶನ ಹೌಸ್‌ುಲ್ ಆಗಿತ್ತು.
ಇದಕ್ಕೂ ಮೊದಲು ಚಿತ್ರತಂಡವು ಪ್ರೇಕ್ಷಕರಿಗೆ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿತು. ನಾಗರಿಕರ ಪರವಾಗಿ ನಾಯಕನಟ ಪೃಥ್ವಿರಾಜ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಪೃಥ್ವಿರಾಜ್ ಪಾಟೀಲ್ ಮಾತನಾಡಿ, ನಮ್ಮೂರಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಅಭಿನಯಿಸಿದ ವಿಕಲ್ಪ ಚಿತ್ರವನ್ನು ಎಲ್ಲರೂ ವೀಕ್ಷಿಸಿ ನಮ್ಮನ್ನು ಪ್ರೋತ್ಸಾಹಿಸಬೇಕು. ಮನೋವಿಜ್ಞಾನಕ್ಕೆ ಸಂಬಂಧಿಸಿದ ಸಂದೇಶಗಳನ್ನು ಚಲನಚಿತ್ರದಲ್ಲಿ ನೀಡಲಾಗಿದೆ. ರಾಜ್ಯದ ಬೇರೆಬೇರೆ ಚಿತ್ರಮಂದಿರಗಳಲ್ಲಿ ಮೂರನೇ ವಾರದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಸಾಗರದ ಕಲಾವಿದರ ಪ್ರಯತ್ನವನ್ನು ಜನರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಚಲನಚಿತ್ರದಲ್ಲಿ 40ಕ್ಕೂ ಹೆಚ್ಚು ಜನ ಸಾಗರದವರೇ ನಟಿಸಿದ್ದು, 92 ವರ್ಷದ ಮಾಸ್ತ್ಯಮ್ಮ ಅವರು ಹಾಡಿದ ಗ್ರಾಮೀಣ ಜಾನಪದ ಗೀತೆಯನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಸಾಗರ, ತೀರ್ಥಹಳ್ಳಿ, ಶಿರಸಿ ಸೇರಿ ಮಲೆನಾಡು ಭಾಗದಲ್ಲಿ ಅತಿಹೆಚ್ಚು ಚಿತ್ರೀಕರಣ ಮಾಡಲಾಗಿದೆ. ಜತೆಗೆ ಸಿಂಗಾಪುರ ಮತ್ತು ನೆದರ್‌ಲ್ಯಾಂಡ್‌ನಲ್ಲಿಯೂ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಇಂದಿರಾ ಶಿವಸ್ವಾಮಿ ನಿರ್ಮಿಸಿರುವ ಈ ಚಿತ್ರವನ್ನು 102 ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಬದುಕಿಗೆ ಸಂದೇಶ ನೀಡುವ, ಸಂಕಷ್ಟದ ಸಂದರ್ಭದಲ್ಲಿ ಅದರಿಂದ ಹೊರಗೆ ಬರುವ ಮಾರ್ಗವನ್ನು ತಿಳಿಸಿಕೊಡುವ ಚಲನಚಿತ್ರಗಳನ್ನು ವೀಕ್ಷಿಸಿ ಪ್ರೋತ್ಸಾಹಿಸುವುದು ಅಗತ್ಯ. ಪೃಥ್ವಿರಾಜ್ ಪಾಟೀಲ್ ನಮ್ಮೂರಿನವರು. ಇವರ ಪ್ರಯತ್ನವನ್ನು ಎಲ್ಲರೂ ಪ್ರೋತ್ಸಾಹಿಸೋಣ. ನಮ್ಮೂರಿನ ಕಲಾವಿದನ ಕಾಯಕ ನಮಗೆ ಹೆಮ್ಮೆ ಎಂದರು.
ನಾಯಕ ನಟಿ ನಾಗಶ್ರೀ ಹೆಬ್ಬಾರ್, ಸಂತೋಷ್ ಸದ್ಗುರು, ಮಿಥುನ್, ದಿನೇಶ್ ತಟ್ಟೆಕೊಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net