ಹಿತ್ತಲ ಗ್ರಾಮದಲ್ಲಿ ಶ್ರೀ ಬನಶಂಕರಿ ಸಮುದಾಯ ಭವನ ಉದ್ಘಾಟನೆ
ಸಂಸದ ಬಿ.ವೈ.ರಾಘವೇಂದ್ರ ಅಭಿಮತ
ಸಂಘಟಿತ ಪ್ರಯತ್ನದಿಂದ ಯಶಸ್ಸು ಲಭ್ಯ
ಶಿಕಾರಿಪುರ: ಪ್ರತಿ ಸಮುದಾಯವೂ ಬಲವಾಗಬೇಕು. ಸಂಘಟಿತ ಪ್ರಯತ್ನದಿಂದ ಮಾತ್ರ ಯಶಸ್ಸು ಲಭ್ಯವಾಗುತ್ತದೆ. ತಾಲೂಕಿನ ಬಹುತೇಕ ಎಲ್ಲ ಸಮುದಾಯಗಳ ಭವನಗಳಿಗೆ ಆದ್ಯತೆ ನೀಡಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಹಿತ್ತಲ ಗ್ರಾಮದಲ್ಲಿ ಶ್ರೀ ಬನಶಂಕರಿ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ಆಡಳಿತ ಅವಧಿಯಲ್ಲಿ ಕೃಷಿ, ಆರೋಗ್ಯ, ಶಿಣ, ಸಾರಿಗೆ ಸಂಪರ್ಕ, ನೀರಾವರಿ ಸೇರಿ ಎಲ್ಲ ೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಲಾಗಿದೆ. ಅವರ ಆಶಯ ಮತ್ತು ಪರಿಶ್ರಮದ ಲವಾಗಿ ಇಂದು ಶಿಕಾರಿಪುರ ತಾಲೂಕು ಅಭಿವೃದ್ಧಿ ಹೊಂದಿದ ತಾಲೂಕುಗಳಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಶಾಶ್ವತ ನೀರಾವರಿ ಯೋಜನೆ ತಾಲೂಕಿಗೆ ವರದಾನವಾಗಿದೆ. ಏಷ್ಯಾದಲ್ಲಿಯೇ ಅತಿ ಕಡಿಮೆ ಅವಧಿಯಲ್ಲಿ ಶಾಶ್ವತ ನೀರಾವರಿ ಯೋಜನೆಯ ಕೆರೆಗಳನ್ನು ತುಂಬಿಸುವ ಕಾರ್ಯ ದಾಖಲೆಯಾಗಿದೆ ಎಂದರು.
ತಾಲೂಕು ವೀರಶೈವ ಮಹಾಸಭಾ ಅಧ್ಯ ಸುಧೀರ್ ಮಾರವಳ್ಳಿ, ದೇವಾಂಗ ಸಮಾಜದ ಅಧ್ಯ ದೇವೇಂದ್ರಪ್ಪ, ಪರಮೇಶ್ವರಪ್ಪ, ಮಂಜಣ್ಣ, ಚನ್ನವಿರಪ್ಪ, ಧರ್ಮದರ್ಶಿ ಸಮಿತಿ ಅಧ್ಯ ಬಸವರಾಜ್, ಕುಮಾರ್, ಬನಶಂಕರಿ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.