ಎರಡನೇ ವೀರಗಲ್ಲಿನಲ್ಲಿ ಮಾಂಡಳಿಕನಾದ ಸಿರಿಯಮ್ಮ ಹೆಗ್ಗಡೆಯ ಬಿರುದಾವಳಿಗಳು, ಶಾಸನವನ್ನು ಅಚ್ಚು ಹಾಕಿಸಿದ ದಿನಾಂಕ, ನಂತರದ ಸಾಲುಗಳಲ್ಲಿ ಯುದ್ಧದ ವರ್ಣನೆ ಅತ್ಯಂತ ಸೊಗಸಾಗಿದೆ. ಅಂತ್ಯದಲ್ಲಿ ಶಾಪಾಶಯವನ್ನು ಉಲ್ಲೆಖಿಸಲಾಗಿದೆ. ಈ ಶಾಸನದ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಆಗಬೇಕೆಂದು ಶೃಂಗೇರಿಯ ಸಂಸತ ವಿಶ್ವವಿದ್ಯಾಲಯದ ಇತಿಹಾಸ ಸಹಾಯಕ ಪ್ರಾಧ್ಯಾಪಕ ಡಾ. ಎಂ.ಎ. ಪ್ರಭಾಕರ್ ಅಭಿಪ್ರಾಯಪಟ್ಟಿದ್ದಾರೆ.