ನಾಲೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು | Student death

ಅರ್ಜುನ್
ಅರ್ಜುನ್
Published on
ಶಿರಾಳಕೊಪ್ಪ: ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ದ್ವಿತೀಯ ವರ್ಷದ ಬಿ.ಕಾಂ ವಿದ್ಯಾರ್ಥಿಯೋರ್ವ ಮಂಗಳವಾರ ಭದ್ರಾ ಎಡದಂಡೆ ನಾಲೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಶಿರಾಳಕೊಪ್ಪ ಸಮೀಪದ ಬೆಲವಂತನಕೊಪ್ಪ ಗ್ರಾಮದ ಯಶೋದಾ, ಮಲ್ಲಿಕಾರ್ಜುನ ಎಂಬುವರ ಮಗ ಅರ್ಜುನ್ (20) ಮೃತ ವಿದ್ಯಾರ್ಥಿ. ಕಾಲೇಜಿಗೆ ರಜೆ ಇದ್ದುದರಿಂದ ಸ್ನೇಹಿತರೊಂದಿಗೆ ಭದ್ರಾ ಡ್ಯಾಂ ವೀಕ್ಷಿಸಲು ಅರ್ಜುನ್ ಹೋಗಿದ್ದ. ಆಗ ನಾಲೆಯಲ್ಲಿ ಒಬ್ಬನೇ ಈಜಲು ಹೋಗಿ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದಾನೆ.
ಉಳಿದ ಸ್ನೇಹಿತರು ಭಯಗೊಂಡು ಸ್ಥಳೀಯರ ಸಹಾಯದಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಶೋಧ ನಡೆಸಿದ್ದಾರೆ. ಬುಧವಾರ ಬೆಳಗ್ಗೆ ಮತ್ತೆ ಶೋಧ ನಡೆಸಿದಾಗ ನಾಲೆಯ ಅರ್ಧ ಕಿ.ಮೀ. ದೂರದಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ಮೃತ ವಿದ್ಯಾರ್ಥಿಯ ತಂದೆ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಮಗನ ಸಾವಿನಿಂದ ಪಾಲಕರು ದಿಗ್ಭ್ರಾಂತರಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net