ಅಂಗವೈಕಲ್ಯ ಮೀರಿ ವಿದ್ಯಾರ್ಥಿ ಸಾಧನೆ | sports

ಗುಂಡು ಎಸೆತದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ನಗರ ಚಿಕ್ಕಪೇಟೆ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿ ಬಾಲಸುಬ್ರಹ್ಮಣ್ಯನನ್ನು ಮೆರವಣಿಗೆ ನಡೆಸಲಾಯಿತು. ರಾಘವೇಂದ್ರ, ಕುಸುಮಾ, ಕರುಣಾಕರ ಶೆಟ್ಟಿ, ಶೈಲಜಾ ಪಾಂಡು ಇತರರಿದ್ದರು.
ಗುಂಡು ಎಸೆತದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ನಗರ ಚಿಕ್ಕಪೇಟೆ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿ ಬಾಲಸುಬ್ರಹ್ಮಣ್ಯನನ್ನು ಮೆರವಣಿಗೆ ನಡೆಸಲಾಯಿತು. ರಾಘವೇಂದ್ರ, ಕುಸುಮಾ, ಕರುಣಾಕರ ಶೆಟ್ಟಿ, ಶೈಲಜಾ ಪಾಂಡು ಇತರರಿದ್ದರು.
Published on
ಹೊಸನಗರ: ಸಾಧನೆಗೆ ಛಲವಿದ್ದರೆ ಸಾಕು. ಅಂಗವೈಕಲ್ಯ ಅಡ್ಡಿಯಲ್ಲ ಎಂದು ತಾಲೂಕು ದೈಹಿಕ ಪರಿವೀಕ್ಷಕ ವಿನಯ ಹೆಗಡೆ ಹೇಳಿದರು.
ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಪ್ರೌಢಶಾಲಾ ವಿಭಾಗದ ಗುಂಡು ಎಸೆತದಲ್ಲಿ ತಾಲೂಕಿನ ನಗರ ಸರ್ಕಾರಿ ಪ್ರೌಢಶಾಲೆಯ ಅಂಗವಿಕಲ ವಿದ್ಯಾರ್ಥಿ ಬಾಲಸುಬ್ರಹ್ಮಣ್ಯ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಬಾಲಸುಬ್ರಹ್ಮಣ್ಯ ಸಾಧನೆ ಅಸಾಧಾರಣ. ಅಂಗವೈಕಲ್ಯ ಇದ್ದರು ಅದನ್ನು ಬದಿಗೊತ್ತಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಈತನ ಸಾಧನೆ ವಿದ್ಯಾರ್ಥಿಗಳಿಗೆ ಮಾದರಿ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ರಮೇಶ ಹಲಸಿನಹಳ್ಳಿ, ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ. ಆದರೆ ಸ್ವಂತ ಪರಿಶ್ರಮ, ಉಳಿದ ಶಿಕ್ಷಕರ ಪ್ರೋತ್ಸಾಹ ಬಾಲಕನ ಸಾಧನೆಗೆ ನೆರವಾಗಿದೆ. ಕೂಡಲೇ ದೈಹಿಕ ಶಿಕ್ಷಣ ಶಿಕ್ಷಕರನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿದರು.
ಚಿಕ್ಕಪೇಟೆ ಸರ್ಕಲ್‌ನಿಂದ ತೆರೆದ ವಾಹನದಲ್ಲಿ ಸರ್ಕಾರಿ ಶಾಲೆವರೆಗೆ ಮೆರವಣಿಗೆ ನಡೆಸಲಾಯಿತು. ಈ ವೇಳೆ ಸಾರ್ವಜನಿಕರು ಹೂವುಗಳನ್ನು ಎರಚಿ ಅಭಿನಂದಿಸಿದರು. ಮೂಡುಗೊಪ್ಪ ಗ್ರಾಪಂ, ಡಿಸಿಸಿ ಶಾಖಾ ಬ್ಯಾಂಕ್, ಶಿವಪ್ಪನಾಯಕ ಸಹಕಾರಿ, ಎಸ್‌ಡಿಎಂಸಿ, ಶಿಕ್ಷಣ ಇಲಾಖೆ, ಊರಿನ ಪ್ರಮುಖರು ಸಾಧಕನನ್ನು ಗೌರವಿಸಿದರು.
ರಾಘವೇಂದ್ರ ಮತ್ತು ಕುಸುಮಾ ದಂಪತಿ, ಗ್ರಾಪಂ ಸದಸ್ಯ ಕರುಣಾಕರ ಶೆಟ್ಟಿ, ಪ್ರಮುಖರಾದ ಶೈಲಜಾ ಪಾಂಡು, ವಿಶ್ವನಾಥ, ಕುಮಾರ ಭಟ್, ಅಬೂಬಕರ್, ಮಂಜುನಾಥ ಪ್ರಭು, ಪಾರ್ವತಿ, ಮುಖ್ಯ ಶಿಕ್ಷಕ ಡಾ. ಜಿ.ಸುಧಾಕರ್, ಶಿಕ್ಷಕರಾದ ವೆಂಕಟೇಶ ವೈದ್ಯ, ಸವಿತಾ, ಭಾರತಿ ಪಾಟೀಲ್, ಭಾರತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net