ಸಮಾಜದ ಅಭಿವೃದ್ಧಿಗೆ ಶ್ರಮಿಸಿ | Meeting of the Idiga Association

ಶಿಕಾರಿಪುರದಲ್ಲಿ ಶ್ರೀ ನಾರಾಯಣಗುರು ಈಡಿಗರ ಬಳಗದ ಸದಸ್ಯರ ವಾರ್ಷಿಕ ಸಭೆಯನ್ನು ಅಧ್ಯಕ್ಷ ಚಾಮರಾಜ್ ಉದ್ಘಾಟಿಸಿದರು. ಪ್ರತಿಭಾ, ವೇದಮೂರ್ತಿ, ಕರಿಬಸಪ್ಪ, ದೇವರಾಜ್, ಬಸವರಾಜ್, ಅಣ್ಣಪ್ಪ, ದುರ್ಗಪ್ಪ ಇತರರಿದ್ದರು.
ಶಿಕಾರಿಪುರದಲ್ಲಿ ಶ್ರೀ ನಾರಾಯಣಗುರು ಈಡಿಗರ ಬಳಗದ ಸದಸ್ಯರ ವಾರ್ಷಿಕ ಸಭೆಯನ್ನು ಅಧ್ಯಕ್ಷ ಚಾಮರಾಜ್ ಉದ್ಘಾಟಿಸಿದರು. ಪ್ರತಿಭಾ, ವೇದಮೂರ್ತಿ, ಕರಿಬಸಪ್ಪ, ದೇವರಾಜ್, ಬಸವರಾಜ್, ಅಣ್ಣಪ್ಪ, ದುರ್ಗಪ್ಪ ಇತರರಿದ್ದರು.
Published on
ಶಿಕಾರಿಪುರ: ಪ್ರಸ್ತುತ ಮರೆಯಾಗುತ್ತಿರುವ ಅವಿಭಕ್ತ ಕುಟುಂಬಗಳನ್ನು ಮತ್ತೆ ಸ್ಥಾಪಿಸಬೇಕಾದ ಅಗತ್ಯವಿದೆ ಎಂದು ಶಿವಮೊಗ್ಗದ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಡಿ.ಪಿ.ಪ್ರತಿಭಾ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ನಾರಾಯಣಗುರು ಈಡಿಗರ ಬಳಗದ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯವರು ಇಡೀ ರಾಜ್ಯದಲ್ಲಿ ನೆಲೆಸಿದ್ದಾರೆ. ಅವರು ಆಯಾ ಪ್ರಾಂತ್ಯಗಳಿಗೆ ಸಂಬಂಧಿಸಿದ ಹೆಸರಿನಲ್ಲಿ ಗುರುತಿಸಿಕೊಂಡಿದ್ದಾರೆ ಎಂದರು.
ದಕ್ಷಿಣ ಕನ್ನಡದಲ್ಲಿ ಪೂಜಾರಿ ಎಂದು, ಬೆಂಗಳೂರು ಭಾಗದಲ್ಲಿ ಈಡಿಗ, ಮಲೆನಾಡು ಭಾಗದಲ್ಲಿ ದೀವರು ಎಂದು ಕರೆಯುತ್ತಾರೆ. ನಾವೆಲ್ಲರೂ ಸಂಘಟಿತರಾಗಬೇಕು. ನಾವು ಎಲ್ಲಿದ್ದರೂ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು. ಸಂಘಟನೆಯೇ ನಮ್ಮ ಶಕ್ತಿ ಎಂಬುದನ್ನು ನೆನಪಿಡಬೇಕು ಎಂದು ತಿಳಿಸಿದರು.
ಈಡಿಗರು ಅತ್ಯಂತ ಸ್ವಾಭಿಮಾನಿ ಹಾಗೂ ಪರಿಶ್ರಮಿಗಳು. ಇಂದು ನಾವು ಎಲ್ಲ ಕ್ಷೇತ್ರಗಳಲ್ಲಿಯೂ ಇದ್ದೇವೆ. ಸಮುದಾಯದ ಹಿತ ಕಾಯುವುದೇ ನಮ್ಮ ಗುರಿಯಾಗಬೇಕು. ನಮಗೆ ಮಲೆನಾಡಿನಲ್ಲಿ ಕೃಷಿಯೇ ಪ್ರಧಾನ. ಸಾಕಷ್ಟು ಜನರು ಕುಲಕಸುಬನ್ನು ಮುಂದುವರಿಸಿಕೊಂಡು ಹೋಗಿದ್ದಾರೆ. ನಾವೆಲ್ಲರೂ ಭಿನ್ನಾಭಿಪ್ರಾಯ ಮರೆತು ಸಮಾಜ ಕಟ್ಟಲು ಮುಂದಾಗೋಣ ಎಂದರು.
ಸಂಸ್ಥೆ ಅಧ್ಯಕ್ಷ ಚಾಮರಾಜ್ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹಾಯ ಕಲ್ಪಿಸಬೇಕು. ನಮ್ಮ ಬಳಗ ಗಟ್ಟಿಯಾಗಿ ಬೆಳೆಯಬೇಕು. ಈಡಿಗ ಸಮಾಜ ಎಂದಿಗೂ ಸಮಾಜಮುಖಿ ಎಂದು ಹೇಳಿದರು.
ದೇವರಾಜ್, ಇ.ಎಚ್.ಬಸವರಾಜ್, ಅಣ್ಣಪ್ಪ, ದುರ್ಗಪ್ಪ, ಜಯರಾಜ್, ದಾನಶೇಖರ, ಕೃಷ್ಣಮೂರ್ತಿ, ಗೋಪಾಲಕೃಷ್ಣ, ನಾಗರಾಜ, ರಾಮಚಂದ್ರ, ಪ್ರಭಾಕರ, ವಿಜಯಕುಮಾರ, ಪ್ರಭಾಕರ, ರವಿ, ಪ್ರಕಾಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net