ಮಹಾಗಣಪತಿ ದೇಗುಲ ಅಭಿವೃದ್ಧಿಗೆ ಕ್ರಮ | cultural event

ಸಾಗರದ ಶ್ರೀ ಮಹಾಗಣಪತಿ ಜಾತ್ರೆ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿದರು. ಟಿ.ವಿ.ಪಾಂಡುರಂಗ, ಐ.ವಿ.ಹೆಗಡೆ, ಮಧುಮಾಲತಿ ಇತರರಿದ್ದರು.
ಸಾಗರದ ಶ್ರೀ ಮಹಾಗಣಪತಿ ಜಾತ್ರೆ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿದರು. ಟಿ.ವಿ.ಪಾಂಡುರಂಗ, ಐ.ವಿ.ಹೆಗಡೆ, ಮಧುಮಾಲತಿ ಇತರರಿದ್ದರು.
Published on
ಸಾಗರ: ಕೇರಳ ಮಾದರಿಯಲ್ಲಿ ಮಹಾಗಣಪತಿ ದೇವಸ್ಥಾನ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರ ಸಲಹೆಯನ್ನು ಸ್ವೀಕರಿಸಿ ದೇವಸ್ಥಾನದ ನೀಲಿನಕ್ಷೆ ಸಿದ್ಧಪಡಿಸಿದ್ದು, ಶೀಘ್ರವೇ ದೇವಸ್ಥಾನ, ಕಲ್ಯಾಣ ಮಂಟಪ, ಉದ್ಯಾನದ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಮಹಾಗಣಪತಿ ಜಾತ್ರೋತ್ಸವ ಅಂಗವಾಗಿ ಏರ್ಪಡಿಸಿದ್ದ ಐದು ದಿನಗಳ ಸಾಂಸ್ಕೃತಿಕ ವೈಭವದ ಸಮಾರೋಪ ಕಾರ್ಯಕ್ರಮದಲ್ಲಿ ಜಾತ್ರೆಗೆ ಸಹಕಾರ ನೀಡಿದವರನ್ನು ಸನ್ಮಾನಿಸಿ ಮಾತನಾಡಿದರು.
ಈಗಾಗಲೆ ಮಹಾದ್ವಾರಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಸುಮಾರು 3.50 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನ ಸಮುಚ್ಛಯ ನಿರ್ಮಾಣವಾಗಲಿದೆ. ಪ್ರಥಮ ಹಂತದಲ್ಲಿ 55 ಲಕ್ಷ ರೂ. ಮಂಜೂರಾಗಿದೆ. ದಾನಿಗಳ ಸಹಕಾರವೂ ಅಗತ್ಯ ಎಂದರು.
ಜಾತ್ರೆಯ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ಕಲಾವಿದರಿಗೆ ನೀಡುವ ಸಂಭಾವನೆ ಮೊತ್ತ ಕಡಿಮೆ ಇದೆ. ಅದನ್ನು ವ್ಯವಸ್ಥಿತವಾಗಿ ನೀಡಬೇಕು ಎಂದು ಕಲಾವಿದರು ಕೋರಿದ್ದಾರೆ. ಬರುವ ದಿನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಲೇ ಹೆಚ್ಚಿನ ಕಾರ್ಯಕ್ರಮ ನೀಡಿ ಸಂಭಾವನೆ ನೀಡುವಂತೆ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕ ಪ್ರಾಯೋಜಕತ್ವದಿಂದಲೂ ಸಹಕರಿಸುವುದಾಗಿ ಭರವಸೆ ನೀಡಿದರು.
ಐ.ವಿ.ಹೆಗಡೆ, ಈಶ್ವರ ಉಪ್ಪಾರ್, ಗಣಪತಿ ಮಂಡಗಳಲೆ, ಕೆ.ಸಿ.ನವೀನ್, ವಿ.ಟಿ.ಸ್ವಾಮಿ, ಮಧುಮಾಲತಿ, ಶಿವಮೂರ್ತಿ, ತೋಯಜಾಕ್ಷಿ, ದಿನೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net