ದ್ವೇಷ, ಅನೀತಿಯಿಂದ ದೂರವಿರಿ | religious programe

ಧನುರ್ಮಾಸದ ಮಕರ ಸಂಕ್ರಾಂತಿ ಪ್ರಯುಕ್ತ ಹೊಳೆಹೊನ್ನೂರು ಸಮೀಪದ ಹೊಳೆಹಟ್ಟಿ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಇಷ್ಟಲಿಂಗ ಪೂಜೆ ನೆರವೇರಿದರು.
ಧನುರ್ಮಾಸದ ಮಕರ ಸಂಕ್ರಾಂತಿ ಪ್ರಯುಕ್ತ ಹೊಳೆಹೊನ್ನೂರು ಸಮೀಪದ ಹೊಳೆಹಟ್ಟಿ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಇಷ್ಟಲಿಂಗ ಪೂಜೆ ನೆರವೇರಿದರು.
Published on
ಹೊಳೆಹೊನ್ನೂರು: ಎಳ್ಳು-ಬೆಲ್ಲ ಸವಿದು ಪರಸ್ಪರ ದ್ವೇಷ, ಅಸೂಯೆಗಳನ್ನು ಹಿಮ್ಮೆಟ್ಟಿಸಬೇಕು ಎಂದು ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಸಮೀಪದ ಹೊಳೆಹಟ್ಟಿಯಲ್ಲಿ ಗುರುವಾರ 25ನೇ ವರ್ಷದ ಧನುರ್ಮಾಸದ ಮಕರ ಸಂಕ್ರಾಂತಿ ಪ್ರಯುಕ್ತ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.
ಪ್ರತಿಯೊಬ್ಬರ ಜೀವನದಲ್ಲೂ ಅನೀತಿ ದೂರವಾಗಿ ಸುಮಧುರ ಗುಣಗಳು ಮೂಡಬೇಕು. ಧರ್ಮ ಮಾರ್ಗದಲ್ಲಿ ನಡೆದು ಶಾಂತಿಯುತ ಜೀವನ ಕಟ್ಟಿಕೊಳ್ಳಬೇಕು. ಪ್ರತಿಯೊಬ್ಬರಲ್ಲೂ ಒಳ್ಳೆಯ ಗುಣಗಳಿವೆ ಎಂಬುದನ್ನು ಮರೆಯಬಾರದು. ಕೊನೆಯಲ್ಲಿ ಸಾವು ಅನಿವಾರ್ಯವಾಗಿರುವಾಗ ಬದುಕಿದ್ದಾಗ ಒಂದಷ್ಟು ಉತ್ತಮ ಕಾರ್ಯಗಳನ್ನು ಮಾಡಬೇಕು. ನಿಸ್ವಾರ್ಥ ಸೇವೆಗಳು ಅಂತ್ಯದಲ್ಲಿ ನಮ್ಮನ್ನು ಕಾಪಾಡುತ್ತವೆ. ಮಕ್ಕಳಲ್ಲಿ ಸಂಸ್ಕಾರ ಮೈಗೂಡಿಸುವುದು ಪಾಲಕರ ಕರ್ತವ್ಯ ಎಂದರು. 
ಇಷ್ಟಲಿಂಗ ಪೂಜೆ ಸೇರಿ ವಿವಿಧ ಧಾರ್ಮಿಕ ಕಾರ್ಯಗಳ ಮಹತ್ವವನ್ನು ಕಿರಿಯರಿಗೆ ಮನವರಿಕೆ ಮಾಡಬೇಕಿದೆ. ಸಮಾಜದ ಕಾರ್ಯಕ್ರಮಗಳಲ್ಲಿ ಯುವಶಕ್ತಿ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು. ದುಶ್ಚಟಗಳಿಗೆ ಬಲಿಯಾಗಿ ಯುವಜನರು ದಾರಿ ತಪ್ಪದಂತೆ ನೋಡಿಕೊಳ್ಳಬೇಕು. ಸಮಾಜಮುಖಿ ಕಾರ್ಯಗಳಿಗೆ ನೆರವು ನೀಡುವುದನ್ನು ಮರೆಯಬಾರದು. ಸಂಕಲ್ಪ ಮಾಡಿಕೊಂಡು ಇಷ್ಟಲಿಂಗ ಪೂಜೆಗಳಲ್ಲಿ ಭಾಗವಹಿಸಿದರೆ ಕಾರ್ಯ ಸಾಧನೆ ಆಗುವ ಜತೆಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.
ಗ್ರಾಮ ಮುಖಂಡ ನಾಗರಾಜಯ್ಯ, ನಿವೃತ್ತ ಶಿಕ್ಷಕ ಈಶ್ವರಪ್ಪ, ವೀರೇಶ್, ಪರಮೇಶ್ವರಯ್ಯ, ಕಾಡವೀರಪ್ಪ, ಮಹಿಳಾ ಬಳಗದವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net