ಕಲಾಕ್ಷೇತ್ರಕ್ಕೆ ಶ್ರೀನಿವಾಸ್ ರಾವ್ ಕೊಡುಗೆ ಅಪಾರ

ಸಾಗರ ತಾಲೂಕಿನ ಕೆಸವಿನಮನೆಯಲ್ಲಿ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಕಲಾವಿದರನ್ನು ಸನ್ಮಾನಿಸಲಾಯಿತು. ನಿಟ್ಟೂರು ಅನಂತ ಹೆಗಡೆ, ಟಿ.ಎಂ.ಶೇಷಗಿರಿ, ವಿನಯಮೂರ್ತಿ, ಮೇದಿನಿ ಇತರರಿದ್ದರು.
ಸಾಗರ ತಾಲೂಕಿನ ಕೆಸವಿನಮನೆಯಲ್ಲಿ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಕಲಾವಿದರನ್ನು ಸನ್ಮಾನಿಸಲಾಯಿತು. ನಿಟ್ಟೂರು ಅನಂತ ಹೆಗಡೆ, ಟಿ.ಎಂ.ಶೇಷಗಿರಿ, ವಿನಯಮೂರ್ತಿ, ಮೇದಿನಿ ಇತರರಿದ್ದರು.
Published on
ಸಾಗರ: ಕೆಸವಿನಮನೆ ಶ್ರೀನಿವಾಸ್ ರಾವ್ ಕಲೆಯನ್ನು ತಪಸ್ಸಿನಂತೆ ಸ್ವೀಕರಿಸಿ ತನ್ಮೂಲಕ ಸಮಾಜಕ್ಕೆ, ಕಲಾಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಎಂದು ಹಿರಿಯ ಯಕ್ಷಗಾನ ಕಲಾವಿದ ನಿಟ್ಟೂರು ಅನಂತ ಹೆಗಡೆ ಹೇಳಿದರು.
ತಾಲೂಕಿನ ಕೆಸವಿನಮನೆಯಲ್ಲಿ ಶ್ರೀನಿವಾಸ್ ಕುಟುಂಬದವರು ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಕರೂರು ಹೋಬಳಿಯಲ್ಲಿ ಯಕ್ಷಗಾನ ಕಲೆ ಉಳಿದುಕೊಂಡಿದ್ದರೆ ಅದರಲ್ಲಿ ಶ್ರೀನಿವಾಸ್ ಅವರ ಕಲಾಸೇವೆಯೂ ಅಡಗಿದೆ. ಆ ಕಾಲದಲ್ಲಿ ಎಲ್ಲ ಪೌರಾಣಿಕ ಪಾತ್ರಗಳನ್ನು ನಿರ್ವಹಿಸಿದ್ದರು. ಇತರ ಕಲಾವಿದರನ್ನು ಸಹ ಬೆಳೆಸಿದವರು. ಪ್ರತಿಫಲಾಪೇಕ್ಷೆ ಇಲ್ಲದೆ ಯಕ್ಷಗಾನ, ನಾಟಕ, ಹರಿಕಥೆ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದರು ಎಂದು ತಿಳಿಸಿದರು.
ಆಕಾಶವಾಣಿ ಯಕ್ಷಗಾನ ಕಲಾವಿದ ಟಿ.ಎಂ.ಶೇಷಗಿರಿ ಮಾತನಾಡಿ, ಭದ್ರಾವತಿ ಆಕಾಶವಾಣಿಯಲ್ಲಿ ನಾವು ಮಾಡಿದ 34ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಶ್ರೀನಿವಾಸ್ 20ಕ್ಕೂ ಹೆಚ್ಚು ಪ್ರಸಂಗಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದನ್ನು ಮರೆಯುವಂತಿಲ್ಲ. ಕರೂರು ಹೋಬಳಿಯಲ್ಲಿ ಹರಿಕಥೆ ಕಲಾವಿದರು ಶ್ರೀನಿವಾಸ್ ಹೊರತುಪಡಿಸಿ ಬೇರೊಬ್ಬರಿಲ್ಲ. ಅವರು ಆಳವಾದ ಪೌರಾಣಿಕ ಜ್ಞಾನ, ಸಂಗೀತದ ಅರಿವು ಹೊಂದಿದ್ದರು ಎಂದರು.
ಶ್ರೀನಿವಾಸ್ ಕೆಸವಿನಮನೆ ಒಡನಾಡಿ ಕಲಾವಿದರಾಗಿದ್ದ 10ಕ್ಕೂ ಹೆಚ್ಚು ಜನರನ್ನು ಸನ್ಮಾನಿಸಲಾಯಿತು. ನಂತರ ಯಕ್ಷವಾಹಿನಿ ಕಲಾಬಳಗದಿಂದ ವಾಮನ ಚರಿತ್ರೆ ಯಕ್ಷಗಾನ ತಾಳಮದ್ದಳೆ ನಡೆಯಿತು. ಕಲಾವಿದ ಪ್ರಶಾಂತ ಮಧ್ಯಸ್ಥ, ವಿನಯಮೂರ್ತಿ, ಮೇದಿನಿ ಕೆಸವಿನಮನೆ, ಕಲಾವಿದ ಡಿ.ಎಸ್.ಕೃಷ್ಣಮೂರ್ತಿ, ಎ.ವಿ.ಗಜಾನನ ಹೆಗಡೆ, ಎಂ.ಕೆ.ಪರಮೇಶ್ವರ, ಎಚ್.ಎಸ್.ಚಿದಾನಂದ, ರಮಾನಂದ, ಚಂದ್ರರಾಜ ಜೈನ್, ಭಾಸ್ಕರ ಭಟ್, ಬಾಲಕೃಷ್ಣ ಹಿಳ್ಳೋಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net