ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಿವೃತ್ತ ಪ್ರಾಚಾರ್ಯ ಜಯಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ತಹಸೀಲ್ದಾರ್ ಮಂಜುಳಾ ಹೆಗಡಾಳ್, ಸಹಾಯಕ ಕೃಷಿ ನಿರ್ದೇಶಕ ಕೆ.ಜಿ.ಕುಮಾರ್, ಎಪಿಎಂಸಿ ಕಾರ್ಯದರ್ಶಿ ಆಶಾ, ಪಶು ವೈದ್ಯಾಧಿಕಾರಿ ಪ್ರದೀಪಕುಮಾರ್, ನಾಗರತ್ನ, ಅರಣ್ಯಾಧಿಕಾರಿ ಜಗದೀಶ್, ಬದರೀಶ್, ಆರೋಗ್ಯ ಇಲಾಖೆಯ ಅಶೋಕ್, ಅಬಕಾರಿ ಇಲಾಖೆಯ ಬಾಲಚಂದ್ರ ಇತರರಿದ್ದರು.