19ರಿಂದ ಶ್ರೀ ರಾಮೇಶ್ವರ ಜಾತ್ರೋತ್ಸವ | Rameshwaram fair

ತುಂಗಾ ನದಿಯ ಎಡದಂಡೆಯಲ್ಲಿ ನಿಲ್ಲಿಸಿರುವ ಪರಶುರಾಮ ದೇವರ ಪ್ರತಿಮೆ ಮತ್ತು ಶ್ರೀ ರಾಮೇಶ್ವರ ದೇವರು.
ತುಂಗಾ ನದಿಯ ಎಡದಂಡೆಯಲ್ಲಿ ನಿಲ್ಲಿಸಿರುವ ಪರಶುರಾಮ ದೇವರ ಪ್ರತಿಮೆ ಮತ್ತು ಶ್ರೀ ರಾಮೇಶ್ವರ ದೇವರು.
Published on
ತೀರ್ಥಹಳ್ಳಿ: ಪಟ್ಟಣದ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆ ಡಿ.19ರಿಂದ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ.
ಜಾತ್ರೆಗೆ ಪೂರಕವಾಗಿ ಶ್ರೀ ರಾಮೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯಿಂದ ಸಿದ್ಧತೆಗಳು ಭರದಿಂದ ಸಾಗಿವೆ. 19ರಂದು ಶುಕ್ರವಾರ ಬೆಳಗಿನ ಜಾವ ತುಂಗಾ ನದಿ ಮಧ್ಯದಲ್ಲಿರುವ ರಾಮಕೊಂಡದಲ್ಲಿ ತೀರ್ಥಸ್ನಾನ, 20ರಂದು ರಾಮೇಶ್ವರ ದೇವರ ರಥೋತ್ಸವ, 21ರಂದು ಸಂಜೆ ತುಂಗಾನದಿಯಲ್ಲಿ ತೆಪ್ಪೋತ್ಸವ ನೆರವೇರಲಿದೆ.
19ರಂದು ಖ್ಯಾತ ಒಡಿಸ್ಸಿ ನೃತ್ಯಪಟು ಉದಯಕುಮಾರ ಶೆಟ್ಟಿ ತಂಡದವರ ನೃತ್ಯ ಪ್ರದರ್ಶನ, ಬೀಚ್ ವಾಲಿಬಾಲ್ ಕ್ರೀಡೆ  ಆಯೋಜಿಸಲಾಗಿದೆ. 21ರಂದು ಭಾನುವಾರ ಸಿಡಿಮದ್ದು ಪ್ರದರ್ಶನದೊಂದಿಗೆ ರಾಮೇಶ್ವರ ದೇವರ ತೆಪ್ಪೋತ್ಸವ ಜರುಗಲಿದೆ. ಅದೇ ದಿನ ಚಲನಚಿತ್ರ ಹಿನ್ನೆಲೆ ಗಾಯಕ ರಾಮಚಂದ್ರ ಹಡಪದ ತಂಡದವರಿಂದ ಸಂಗೀತ ವೈವಿಧ್ಯ ನಡೆಯಲಿದೆ. ತುಂಗಾ ನದಿ ದಡದಲ್ಲಿ ನಿಲ್ಲಿಸಿರುವ 27 ಅಡಿ ಎತ್ತರದ ಪರಶುರಾಮ ದೇವರ ಪ್ರತಿಮೆ ಈ ಬಾರಿಯ ಆಕರ್ಷಣೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net