ಸೊರಬದಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರನ್ನು ವಿವಿಧ ಸಮಾಜದ ಗಣ್ಯರು ಸನ್ಮಾನಿದರು. ಪಾಣಿ ರಾಜಪ್ಪ, ಕೆ.ಪಿ.ಗುಡ್ಡಪ್ಪ, ಸಂದೀಪ್, ಮಹೇಶ್ ಕಾಳೆ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಹಿಂದುತ್ವದ ರಕ್ಷಣೆಗೆ ಬದ್ಧ
ಹಿಂದುಗಳ ನಾಶಕ್ಕಾಗಿ ಕುತಂತ್ರ
ಹಿಂದುಗಳ ಗುರಿಯಾಗಿಸಿ ದಾಳಿ
ಸೊರಬ: ಶ್ರೀರಾಮ ಸೇನೆ ಕಳೆದ 20 ವರ್ಷಗಳಿಂದ ಹೋರಾಟದ ಮೂಲಕ ಸಕ್ರಿಯವಾಗಿದೆ. ಯುವಕರನ್ನು ಸಂಘಟಿಸುವ ಮೂಲಕ ಜಾಗೃತಿ ಮೂಡಿಸುವ ಮೂಲಕ ದುಶ್ಚಟಮುಕ್ತ ಸಮಾಜ ನಿರ್ಮಾಣ ಮಾಡುತ್ತಿದೆ. ಯುವಕರಲ್ಲಿ ದೇಶಭಕ್ತಿ ಮೂಡಿಸುತ್ತಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗೋರಕ್ಷಣೆ, ಲವ್ ಜಿಹಾದ್, ಮತಾಂತರ ತಡೆಗಟ್ಟುವ ಕೆಲಸವನ್ನು ಶ್ರೀರಾಮ ಸೇನೆ ನಿರಂತರವಾಗಿ ಮಾಡುತ್ತಿದೆ. ಹಿಂದುತ್ವದ ರಕ್ಷಣೆಗೆ ನಮ್ಮ ಸಂಘಟನೆ ಕಟ್ಟಿಬದ್ಧವಾಗಿ ದುಡಿಯುತ್ತಿದೆ ಎಂದರು.
ಇತ್ತೀಚೆಗೆ ನಡೆದ ಪೆಹಲ್ಗಾಮ್ ಘಟನೆ ಇಡೀ ದೇಶದ ಹಿಂದುಗಳಿಗೆ ನೀಡಿದ ಎಚ್ಚರಿಕೆಯ ಘಟನೆ. ಹಿಂದುಗಳನ್ನೇ ಗುರಿಯಾಗಿಸಿ ಭಯೋತ್ಪಾದಕರು ದಾಳಿ ಮಾಡಿದ್ದು ಖಂಡನೀಯ. ಹಿಂದುಗಳ ನಾಶಕ್ಕಾಗಿಯೇ ಇಸ್ಲಾಮಿಕ್ ಶಕ್ತಿ ಜಗತ್ತಿನಲ್ಲಿ ಕೆಲಸ ಮಾಡುತ್ತಿದೆ. ಹಾಗಾಗಿ ಹಿಂದುಗಳಾದ ನಾವೂ ಸಹ ಧರ್ಮದ ಆಧಾರದ ಮೇಲೆ ನಡೆಯಬೇಕಾಗಿದೆ. ಹಿಂದುಸ್ತಾನ ನಮ್ಮ ದೇಶ ಅನ್ನೋದನ್ನ ನಾವು ಮೊದಲು ಅರಿತುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ತಾಲೂಕು ಮಾಚಿದೇವ ಮಾಡಿವಾಳ ಸಂಘದ ಅಧ್ಯಕ್ಷ ಕೆ.ಪಿ.ಗುಡ್ಡಪ್ಪ, ನಾಮದೇವ ಸಿಂಪಿ ಸಮಾಜದ ಮಾಜಿ ಅಧ್ಯಕ್ಷ ಯು.ಎನ್.ಲಕ್ಷ್ಮೀಕಾಂತ ಉರಣಕರ್, ಸಂದೀಪ್, ಮಹೇಶ್ ಕಾಳೆ, ಗುರುಮೂರ್ತಿ ಗುಡಿಗಾರ್, ಸುಧೀರ್ ಪೈ, ದಿನಕರ್ ಭಾವೆ, ರಾಮಮೂರ್ತಿ ಇತರರಿದ್ದರು.