ಕ್ರೀಡೆಗಳಿಂದ ಪರಸ್ಪರ ಬಾಂಧವ್ಯ ವೃದ್ಧಿ | Cricket

ಸೊರಬ ತಾಲೂಕಿನ ದೇವತಿಕೊಪ್ಪ ಗ್ರಾಮದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ದಂತ ವೈದ್ಯ ಜ್ಞಾನೇಶ್ ಉದ್ಘಾಟಿಸಿದರು. ದುರ್ಗಪ್ಪ, ನಾಗಪ್ಪ ಇತರರಿದ್ದರು.
ಸೊರಬ ತಾಲೂಕಿನ ದೇವತಿಕೊಪ್ಪ ಗ್ರಾಮದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ದಂತ ವೈದ್ಯ ಜ್ಞಾನೇಶ್ ಉದ್ಘಾಟಿಸಿದರು. ದುರ್ಗಪ್ಪ, ನಾಗಪ್ಪ ಇತರರಿದ್ದರು.
Published on
ಸೊರಬ: ಶಾರೀರಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡಾ ಚಟುವಟಿಕೆಗಳು ಪೂರಕವಾಗಿರುತ್ತವೆ. ಕ್ರೀಡೆಗೆ ಯಾವುದೇ ಜಾತಿ, ಮತ, ಪಂಥದ ಭೇದವಿಲ್ಲ. ಸಾಮಾಜಿಕ ಸ್ವಾಸ್ಥೃ ಕಾಪಾಡುತ್ತದೆ ಎಂದು ದಂತ ವೈದ್ಯ ಜ್ಞಾನೇಶ್ ಹೇಳಿದರು.
ತಾಲೂಕಿನ ದೇವತಿಕೊಪ್ಪ ಗ್ರಾಮದ ಬಸವೇಶ್ವರ ಗೆಳೆಯರ ಬಳಗದಿಂದ ಆಯೋಜಿಸಿದ್ದ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಆಧುನಿಕತೆಯ ಪ್ರಭಾವದಲ್ಲಿ ಗ್ರಾಮೀಣ ಕ್ರೀಡೆಗಳು ಮಾಯವಾಗುತ್ತಿವೆ. ಅವುಗಳನ್ನು ಉಳಿಸಿ ಬೆಳೆಸುವಲ್ಲಿ ಯುವಕರು ಮುಂದಾಗಬೇಕು. ಕ್ರೀಡೆಯಲ್ಲಿ ಗೆಲುವು-ಸೋಲು ಸಹಜ. ಭಾಗವಹಿಸುವುದರಿಂದ ಪರಸ್ಪರ ಬಾಂಧವ್ಯ ಬೆಳೆಯುತ್ತದೆ. ಕ್ರೀಡೆಯನ್ನು ಹಬ್ಬದ ರೀತಿ ಸಂಭ್ರಮಿಸಬೇಕು. ನೈಜವಾಗಿ ಬೆಳೆದು ಬಂದಿರುವ ಕ್ರೀಡೆಗಳು ನಮ್ಮಿಂದ ಮರೆಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಶಿಕಾರಿಪುರ ತಾಲೂಕು ಬ್ರಹ್ಮಶ್ರೀ ನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷ ಕೇಶವಮೂರ್ತಿ ಸಹಸ್ರವಳ್ಳಿ ಮಾತನಾಡಿ, ಗ್ರಾಮೀಣ ಕ್ರೀಡೆಗಳು ಉಳಿದು, ಬೆಳೆಯುವಲ್ಲಿ ಯುವಜನತೆ ಪಾತ್ರ ಹಿರಿದು ಎಂದರು.
ಕೃಷಿ ಪ್ರಶಸ್ತಿ ಪುರಸ್ಕೃತ ದುರ್ಗಪ್ಪ ಅಂಗಡಿ, ದೇವತಿಕೊಪ್ಪ ಗ್ರಾಮ ಸಮಿತಿ ಅಧ್ಯಕ್ಷ ನಾಗಪ್ಪ, ಕಾರ್ಯದರ್ಶಿ ಸುಭಾಷ್‌ಚಂದ್ರ, ಇಂದ್ರಪ್ಪ, ಅನಂದಮೂರ್ತಿ, ಮಧುಕೇಶ್ವರ, ಪವನ್, ಸಂಜಯ್, ಯಶವಂತ್, ರವಿಚಂದ್ರ, ಗುರು, ಭರತ್, ಸಿರಿ, ಕಾರ್ತಿಕ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net