ದೈನಂದಿನ ಕೆಲಸದ ಒತ್ತಡ ನಿವಾರಣೆಗೆ ಕ್ರೀಡಾಕೂಟ ಸಹಕಾರಿ I stress management
ಶಿವಮೊಗ್ಗದಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಸಂಘದಿಂದ ಏರ್ಪಡಿಸಿದ್ದ ರಾಜ್ಯ ಮಟ್ಟದ ಎರಡು ದಿನಗಳ ಕ್ರಿಕೆಟ್ ಪಂದ್ಯಾವಳಿಗೆ ಸಚಿವ ಕೃಷ್ಣಬೈರೇಗೌಡ ಚಾಲನೆ ನೀಡಿದರು. ಯೋಗೇಶ್ ನಾಯ್ಕ, ಸಿ.ಎಸ್.ಷಡಾಕ್ಷರಿ, ಶಾರದಾ ಪೂರ‌್ಯಾನಾಯ್ಕಾ, ಆರ್.ಮೋಹನ್‌ಕುಮಾರ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕಂದಾಯ ಸಚಿವ ಕೃಷ್ಣಬೈರೇಗೌಡ ಅಭಿಮತ
ಗ್ರಾಮಾಡಳಿತ ಅಧಿಕಾರಿಗಳಿಗೆ ರಾಜ್ಯ ಮಟ್ಟದ ಆಟೋಟ
ಶಿವಮೊಗ್ಗ: ಕೆಲಸದಲ್ಲಿ ಸದಾ ನಿರತರಾಗಿರುವ ಗ್ರಾಮ ಆಡಳಿತಾಧಿಕಾರಿಗಳು ಇದೇ ಮೊದಲ ಬಾರಿಗೆ ಎರಡು ದಿನಗಳ ಕ್ರೀಡಾಕೂಟ (sportsmeet) ಆಯೋಜಿಸಿರುವುದು ಸಂತಸದ ಸಂಗತಿ. ಮುಂದಿನ ದಿನಗಳಲ್ಲಿ ಕಂದಾಯ (revenue) ಇಲಾಖೆಯ ಎಲ್ಲ ಸಿಬ್ಬಂದಿಯನ್ನು ಸೇರಿಸಿ ಕ್ರೀಡಾಕೂಟ ಆಯೋಜಿಸಬೇಕೆಂಬ ಆಶಯ ನನ್ನದು ಎಂದು ಕಂದಾಯ ಸಚಿವ (minster) ಕೃಷ್ಣಬೈರೇಗೌಡ ಹೇಳಿದರು.
ನಗರದ ಕೃಷಿ ಕಾಲೇಜು ಹಾಗೂ ಜೆಎನ್‌ಎನ್‌ಸಿ ಕಾಲೇಜು ಮೈದಾನದಲ್ಲಿ ಗ್ರಾಮಾಡಳಿತ ಅಧಿಕಾರಿಗಳ ರಾಜ್ಯ ಹಾಗೂ ಶಿವಮೊಗ್ಗ ಜಿಲ್ಲಾ ಸಂಘದಿಂದ ಏರ್ಪಡಿಸಿದ್ದ ರಾಜ್ಯ ಮಟ್ಟದ ಎರಡು ದಿನಗಳ ಕ್ರೀಡಾಕೂಟಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಜೀವನವನ್ನು ಸಂಭ್ರಮಿಸುವ ಮನೋಭಾವ ಇರಬೇಕು. ಇಂದು ಸಾಂಕ್ರಾಮಿಕ ರೋಗಗಳು ಕಡಿಮೆ ಆಗಿರಬಹುದು. ಆದರೆ ಜೀವನಶೈಲಿ ಆಧಾರಿತ ಕಾಯಿಲೆಗಳು ನಮ್ಮನ್ನು ಕಾಡುತ್ತಿವೆ. ಅರ್ಧದಷ್ಟು ಕಾಯಿಲೆಗಳು ಅನುವಂಶೀಯವಾಗಿ ಬರುತ್ತವೆ. ಇನ್ನುಳಿದ ಶೇ.50ರಷ್ಟು ಕಾಯಿಲೆಗಳಿಗೆ ನಮ್ಮ ಜೀವನ ಶೈಲಿಯೇ ಕಾರಣ ಎಂದರು.
ಎಷ್ಟು ದಿನ ಬದುಕುತ್ತೇವೆ ಎಂಬುದಕ್ಕಿಂತ ಹೇಗೆ ಬದುಕುತ್ತಿದ್ದೇವೆ ಎಂಬುದು ಮುಖ್ಯ. ಆರೋಗ್ಯ ಇರುವಷ್ಟು ದಿನ ಮಾತ್ರ ಬದುಕಬೇಕೇ ಹೊರತು ಅನಾರೋಗ್ಯದಿಂದ ದೀರ್ಘ ಕಾಲ ಬದುಕುವುದರಲ್ಲಿ ಸುಖವಿಲ್ಲ. ಇದಕ್ಕಾಗಿ ಉತ್ತಮ ಹವ್ಯಾಸ, ಕ್ರೀಡೆಗಳು ಅವಶ್ಯ. ಕೆಲಸದಲ್ಲಿನ ಒತ್ತಡ ನಿವಾರಣೆಗೆ ದೈಹಿಕ ಚಟುವಟಿಕೆ ಅವಶ್ಯ ಎಂದು ಹೇಳಿದರು.
ಪ್ರಭಾರ ಜಿಲ್ಲಾಧಿಕಾರಿ ಎನ್.ಹೇಮಂತ್, ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್, ಸಾಗರ ಉಪವಿಭಾಗಾಧಿಕಾರಿ ವೀರೇಶ್‌ಕುಮಾರ್, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಯೋಗೇಶ್ ನಾಯ್ಕ, ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್ ಇತರರಿದ್ದರು.
ವಿಎಗಳ ಪರವಾಗಿ ಮನವಿ
ಕಂದಾಯ ಇಲಾಖೆಯ ಪ್ರಗತಿಯಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಕೊಡುಗೆಯೂ ಇದೆ. ರಾಜ್ಯ ಮಟ್ಟದ ಕ್ರೀಡಾಕೂಟದ ಆಯೋಜನೆಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಸಹಕಾರ ನೀಡಿದ್ದಾರೆ. ಸಚಿವರಿಗೆ ಗ್ರಾಮ ಆಡಳಿತಾಧಿಕಾರಿಗಳು ಸಂಪೂರ್ಣ ಸಹಕಾರ ನೀಡಲಿದ್ದೇವೆ. ಗ್ರಾಮ ಆಡಳಿತಾಧಿಕಾರಿಗಳ ಅಂತರ್ ಜಿಲ್ಲಾ ವರ್ಗಾವಣೆಗೆ ಸರ್ಕಾರ ಸಹಕಾರ ನೀಡಬೇಕು. ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟು ಪದೋನ್ನತಿ ನೀಡಬೇಕೆಂದು ಯೋಗೇಶ್ ನಾಯ್ಕ ಮನವಿ ಮಾಡಿದರು.
ಜನರ ಋಣ ತೀರಿಸೋಣ
ಮೂರು ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಅನೇಕ ಜನಪರ ಬದಲಾವಣೆಗಳಾಗಿವೆ. ಸೇವೆ ಮಾಡಲು ಅವಕಾಶ ನೀಡಿರುವುದು ಜನರು. ನಿಮಗೆ ಹುದ್ದೆ ನೀಡಿರುವುದು ಜನರ ಸೇವೆಗಾಗಿ. ಎಲ್ಲ ಕೆಲಸವನ್ನು ಮಾಡಲು ಸಾಧ್ಯವಾಗದೇ ಇರಬಹುದು. ಆದರೆ ತಕ್ಕ ಮಟ್ಟಿನ ಕೆಲಸವಾಗಿದೆ. ಆಸಕ್ತಿ ಇರುವವರೆಲ್ಲರೂ ಒಂದು ತಂಡವಾಗಿ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆರ್‌ಟಿಸಿಯಲ್ಲಿ ಆಧಾರ್ ಜೋಡಣೆ ಬಹುತೇಕ ಯಶಸ್ವಿಯಾಗಿದೆ. ಈಗಾಗಲೇ ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ನಿರೀಕ್ಷಕರಿಗೆ ಸರ್ಕಾರದಿಂದಲೇ ಲ್ಯಾಪ್‌ಟಾಪ್ ನೀಡಲಾಗುತ್ತಿದೆ. ಇ-ಆಫೀಸ್ ಸೌಲಭ್ಯ ಒದಗಿಸಲಾಗುತ್ತಿದೆ. ಬೇಡಿಕೆಗಳನ್ನು ಈಡೇರಿಸಲು ಸಿಎಂ ಬಳಿ ಚರ್ಚಿಸಲಾಗುವುದು ಎಂದು ಕೃಷ್ಣಬೈರೇಗೌಡ ಹೇಳಿದರು.
"
ಕಂದಾಯ ಇಲಾಖೆಯಲ್ಲಿ ಕಳೆದ 15 ವರ್ಷಗಳಿಂದ ಈಚೆಗೆ ಅತ್ಯಂತ ಸುಧಾರಣೆ ತಂದವರು ಕೃಷ್ಣಬೈರೇಗೌಡ. ಸಿಬ್ಬಂದಿಯ ಬೇಡಿಕೆಗಳಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಈಗ ಜನರಿಗೆ ಮನೆ ಬಾಗಿಲಿಗೆ ಕಂದಾಯ ಇಲಾಖೆ ದಾಖಲೆಗಳು ತಲುಪುತ್ತಿವೆ. ರಚನಾತ್ಮಕ ಸುಧಾರಣೆಗಳನ್ನು ತರುತ್ತಿದ್ದಾರೆ.