ಶಿಕಾರಿಪುರ ಕುಮದ್ವತಿ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ವೈದ್ಯರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶಸ್ತ್ರ ಚಿಕಿತ್ಸಾ ತಜ್ಞೆ ಡಾ. ಗೀತಾ ಅವರನ್ನು ಗೌರವಿಸಲಾಯಿತು. ಡಾ. ನಟರಾಜ್, ಡಾ. ಅರುಣ್, ಡಾ. ಶಿವಾನಂದ್, ಡಾ. ಬಸವ ಕುಲಾಲ್, ಡಾ. ನವೀನ್ ಇತರರಿದ್ದರು.
Published on:
Copied
Follow Us
ಶಿಕಾರಿಪುರ: ದೇಹ ಮತ್ತು ಮನಸ್ಸಿಗೆ ಪರಸ್ಪರ ಸಂಬಂಧವಿದೆ. ಸದೃಢವಾದ ದೇಹದಲ್ಲಿ ಸದೃಢ ಮನಸ್ಸಿರುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಕೆ.ಎಸ್.ನಟರಾಜ್ ಹೇಳಿದರು.
ಕುಮದ್ವತಿ ಕಾಲೇಜಿನಲ್ಲಿ ತಾಲೂಕು ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಿಂದ ನಡೆದ ಜಿಲ್ಲಾ ಮಟ್ಟದ ವೈದ್ಯರ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ರೋಗಿಗಳ ಸೇವೆಯಲ್ಲಿ ಹಗಲಿರುಳೂ ಶ್ರಮಿಸುವ ವೈದ್ಯರು ಮತ್ತು ಸಿಬ್ಬಂದಿ ಮಾನಸಿಕ ಸದೃಢತೆಗೆ ಕ್ರೀಡೆಗಳು ಸಂಜೀವಿನಿ ಇದ್ದಂತೆ. ಆಟೋಟಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಖಿನ್ನತೆ ದೂರವಾಗಿ, ಕಾರ್ಯಕ್ಷಮತೆ ಹೆಚ್ಚುತ್ತದೆ ಎಂದರು.
ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಅರುಣ್‌ಕುಮಾರ್ ಮಾತನಾಡಿ, ರೋಗಿಗಳ ಆರೋಗ್ಯ ಕಾಪಾಡುವ ನಾವು, ವೈಯಕ್ತಿಕ ಆರೋಗ್ಯದ ಕಡೆಗೂ ಗಮನ ಹರಿಸಬೇಕು. ಕ್ರೀಡೆಯು ಮನಸ್ಸನ್ನು ಪ್ರುಲ್ಲಗೊಳಿಸಿ ಹೊಸ ಚೈತನ್ಯ ನೀಡುತ್ತದೆ ಎಂದು ಹೇಳಿದರು.
ಪಂದ್ಯಾವಳಿಯಲ್ಲಿ 14 ತಂಡಗಳು ಭಾಗವಹಿಸಿದ್ದವು. ತಾಯಿ ಮತ್ತು ಮಕ್ಕಳ ಆಸ್ಪತ್ರೆ ವೈದ್ಯಾಧಿಕಾರಿ ಶಿವಾನಂದ್, ಜಿಲ್ಲಾ ಶಸ್ತ್ರಚಿಕಿತ್ಸಾ ತಜ್ಞೆ ಡಾ. ಗೀತಾ, ಡಾ. ಬಸವ ಕುಲಾಲ್, ಡಾ. ನವೀನ್, ಡಾ. ಶ್ರೀನಿವಾಸ್, ಡಾ. ವಿನಯ್, ಡಾ. ಪ್ರಕಾಶ್, ಹೊಸನಗರದ ಡಾ. ಸುರೇಶ್ ಇತರರಿದ್ದರು.