ಕಂದಾಯ ವಸೂಲಿಯಲ್ಲಿ ಸೊರಬ ಪ್ರಥಮ | meeting

ಸೊರಬದಲ್ಲಿ ಆಯೋಜಿಸಿದ್ದ ಪಿಡಿಒಗಳ ಸಭೆಯಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಗ್ರಾಪಂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಶಶಿಧರ್, ಕೆ.ಆರ್.ಸಂದೀಪ್, ಶ್ರೀರಾಮ, ಚಿದಾನಂದ, ಸೀಮಾ ಇತರರಿದ್ದರು.
ಸೊರಬದಲ್ಲಿ ಆಯೋಜಿಸಿದ್ದ ಪಿಡಿಒಗಳ ಸಭೆಯಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಗ್ರಾಪಂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಶಶಿಧರ್, ಕೆ.ಆರ್.ಸಂದೀಪ್, ಶ್ರೀರಾಮ, ಚಿದಾನಂದ, ಸೀಮಾ ಇತರರಿದ್ದರು.
Published on
ಸೊರಬ: ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಅಧಿಕಾರಿಗಳ ಸಾಂಘಿಕ ಕಾರ್ಯಗಳಿಂದ ಕಂದಾಯ ವಸೂಲಾತಿಯಲ್ಲಿ ಜಿಲ್ಲೆಯಲ್ಲಿ ಸೊರಬ ತಾಲೂಕು ಪ್ರಥಮ ಸ್ಥಾನದಲ್ಲಿದೆ ಎಂದು ತಾಪಂ ಇಒ ಶಶಿಧರ್ ಸಂತಸ ವ್ಯಕ್ತಪಡಿಸಿದರು.
ಪಟ್ಟಣದ ರಂಗಮಂದಿರದಲ್ಲಿ ಪಿಡಿಒಗಳ ಪ್ರಗತಿ ಪರಿಶೀಲನೆ ಹಾಗೂ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಗ್ರಾಪಂ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ಗ್ರಾಪಂ ಸಿಬ್ಬಂದಿ ತಮಗೆ ನೀಡಿದ ಕೆಲಸವನ್ನು ಒಗ್ಗಟ್ಟಿನಿಂದ ನಿರ್ವಹಿಸುವ ಮೂಲಕ ಕಂದಾಯ ವಸೂಲಾತಿಯಲ್ಲಿ ಮುಂಚೂಣಿಯಲ್ಲಿದೆ. ಕೆಲವು ಗ್ರಾಪಂ ಹಿಂದುಳಿದಿರುವುದನ್ನು ಸರಿಪಡಿಸಿಕೊಳ್ಳಬೇಕಿದೆ. ಸ್ವಚ್ಛತೆ, ಆರೋಗ್ಯ ಹಾಗೂ ಶಾಲೆಗಳ ನಿರ್ವಣೆಗಳಿಗೆ ಮೂಲ ಸೌಕರ್ಯ ನೀಡುವ ಕಡೆ ಗಮನ ಹರಿಸಬೇಕು. ನರೇಗಾ ಯೋಜನೆಯಡಿ ಮಾನವ ಸಂಪನ್ಮೂಲದ ಸದ್ಬಳಕೆ ಮಾಡಿಕೊಂಡು ಕಾಮಗಾರಿ ತ್ವರಿತಗೊಳಿಸಬೇಕು ಎಂದರು.
ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಲು ಅಭಿವೃದ್ಧಿ ಅಧಿಕಾರಿಗಳಿಗೆ  ಮತ್ತು ಸಿಬ್ಬಂದಿಗೆ ಪ್ರೋತ್ಸಾಹ ನೀಡಲಾಗಿತ್ತು. ಮತ್ತುಷ್ಟು ಸಿಬ್ಬಂದಿ ಭಾಗವಹಿಸಿದ್ದರೆ ನಾವು ಸಮಗ್ರ ಪ್ರಶಸ್ತಿ ಪಡೆಯಬಹುದಿತ್ತು. ಇನ್ನೂ ಹೆಚ್ಚಿನ ಕಾರ್ಯ ನಿರ್ವಹಿಸುವ ಮೂಲಕ ಮಾದರಿಯಾಗಬೇಕು ಎಂದು ತಿಳಿಸಿದರು. 
ತಾಲೂಕು ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಚಿದಾನಂದ ಮಾತನಾಡಿ, ಗ್ರಾಪಂಗಳ ಅಭಿವೃದ್ಧಿಯಲ್ಲಿ ಎಲ್ಲ ಹಂತದ ನೌಕರರ ಶ್ರಮ ಬಹಳ ಮುಖ್ಯವಾಗಿದೆ. ಹಿಂದುಳಿದಿರುವ ಗ್ರಾಪಂಗಳನ್ನು ಮುನ್ನೆಲೆಗೆ ತರಲು ನಾವೆಲ್ಲರೂ ಸಹಕಾರ ನೀಡಬೇಕು. ಕ್ರೀಡಾಕೂಟದಲ್ಲಿ ಹೆಚ್ಚಿನ ಒತ್ತು ನೀಡಿದ ಹಿನ್ನೆಲೆಯಲ್ಲಿ ಉತ್ತಮ ಪ್ರದರ್ಶನಕ್ಕೆ ಅವಕಾಶ ದೊರೆಯಿತು ಎಂದರು. 
ಕಳೆದ ಡಿಸೆಂಬರ್‌ನಲ್ಲಿ 3.58 ಲಕ್ಷ ರೂ. ಕಂದಾಯ ವಸೂಲಿ ಮಾಡಿದ ಎಣ್ಣೆಕೊಪ್ಪ ಪಿಡಿಒ ಮತ್ತು ಸಿಬ್ಬಂದಿ, ಕಂದಾಯ ವಸೂಲಾತಿಯಲ್ಲಿ ಮುಂಚೂಣಿಯಲ್ಲಿದ್ದ ತವನಂದಿ ಗ್ರಾಪಂ ಸಿಬ್ಬಂದಿ, ನಮ್ಮ ಊರು ನಮ್ಮ ಬೇರು ಕಾರ್ಯಕ್ರಮದಡಿ ಆ ಗ್ರಾಮದ ಇತಿಹಾಸ ಮತ್ತು ಪರಂಪರೆಯನ್ನು ಪುಸ್ತಕ ರೂಪದಲ್ಲಿ ಹೊರತಂದ ಕುಪ್ಪಗಡ್ಡೆ, ಹೆಗ್ಗೋಡು, ಹೆಚ್ಚೆ ಗ್ರಾಪಂಗಳ ಗ್ರಂಥಪಾಲಕರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಗ್ರಾಪಂ ನೌಕರರ ಸಂಘದ ಕೋಶಾಧಿಕಾರಿ ಕೆ.ಆರ್.ಸಂದೀಪ್, ತಾಪಂ ಸಹಾಯಕ ನಿರ್ದೇಶಕ ಶ್ರೀರಾಮ, ಸೀಮಾ, ಮಂಜಪ್ಪ, ಸಂತೋಷ್, ಮನೋಜ್, ಹೋಮೇಶ್, ಸಂಜೀವ್, ಎಂ.ಎಸ್.ಸತೀಶ್, ನಾಗೇಂದ್ರಪ್ಪ, ಲೋಕೇಶ್, ಚನ್ನಬಸಪ್ಪ, ಬಲಿಂದ್ರಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net