ಸಂಘಕ್ಕೆ ರೂ. 5.75 ಲಕ್ಷ ಲಾಭ | Annual Meeting

ಹೊಸನಗರ ತಾಲೂಕಿನ ಕರಿಮನೆ ಶ್ರೀ ಚಂಡಿಕೇಶ್ವರಿ ಸಹಕಾರ ಸಂಘದ ಸಭೆಯನ್ನು ಅಧ್ಯಕ್ಷ ಎಸ್.ಜೆ.ಹೂವಪ್ಪ ಗೌಡ ಉದ್ಘಾಟಿಸಿದರು. ಪ್ರವೀಣ ಗೌಡ, ಕೆ.ಕೆ.ರಾಮಣ್ಣ, ಯೋಗೇಂದ್ರ, ಲಕ್ಷ್ಮೀ ಇತರರಿದ್ದರು.
ಹೊಸನಗರ ತಾಲೂಕಿನ ಕರಿಮನೆ ಶ್ರೀ ಚಂಡಿಕೇಶ್ವರಿ ಸಹಕಾರ ಸಂಘದ ಸಭೆಯನ್ನು ಅಧ್ಯಕ್ಷ ಎಸ್.ಜೆ.ಹೂವಪ್ಪ ಗೌಡ ಉದ್ಘಾಟಿಸಿದರು. ಪ್ರವೀಣ ಗೌಡ, ಕೆ.ಕೆ.ರಾಮಣ್ಣ, ಯೋಗೇಂದ್ರ, ಲಕ್ಷ್ಮೀ ಇತರರಿದ್ದರು.
Published on
ಹೊಸನಗರ: ತಾಲೂಕಿನ ಪ್ರತಿಷ್ಠಿತ ಕರಿಮನೆ ಶ್ರೀ ಚಂಡಿಕೇಶ್ವರಿ ಸಹಕಾರ ಸಂಘ 2025-26ರಲ್ಲಿ 1.36 ಕೋಟಿ ರೂ. ವ್ಯವಹಾರ ನಡೆಸಿದೆ ಎಂದು ಅಧ್ಯಕ್ಷ ಎಸ್.ಜೆ.ಹೂವಪ್ಪ ಗೌಡ ಹೇಳಿದರು.
ಕರಿಮನೆ ನಿಲ್ಸಕಲ್ ಶ್ರೀ ಚಂಡಿಕೇಶ್ವರಿ ಸಭಾಭವನದಲ್ಲಿ ನಡೆದ ಸದಸ್ಯರ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಬಡ ರೈತ, ಕೂಲಿ ಕಾರ್ಮಿಕರಿಗೆ ನೆರವಾಗುವ ಸಲುವಾಗಿ ಸಣ್ಣದಾಗಿ ಆರಂಭಗೊಂಡ ಸಂಘ ಪ್ರಸ್ತುತ ಉತ್ತಮ ಆರ್ಥಿಕ ವ್ಯವಹಾರ ನಡೆಸಿದೆ. ಪ್ರಸಕ್ತ ವರ್ಷ 5.75 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. 772 ಸದಸ್ಯರನ್ನು ಒಳಗೊಂಡಂತೆ 8.5 ಲಕ್ಷ ಷೇರು ಬಂಡವಾಳ ಹೊಂದಿದೆ ಎಂದರು.
ಸಂಘದ ಸಿಇಒ ಲಕ್ಷ್ಮೀ ಲೆಕ್ಕಪತ್ರ ಮಂಡಿಸಿ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಎಸ್‌ಎಸ್‌ಎಲ್‌ಸಿಯಲ್ಲಿ ಶೇ.98 ಅಂಕಗಳಿಸಿದ ಕೂಸಪ್ಪ ಮತ್ತು ಶಾಂತಲಾ ದಂಪತಿ ಪುತ್ರ ಶಶಾಂಕ್ ಅವರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಪ್ರವೀಣ ಗೌಡ, ಸಂಸ್ಥಾಪಕ ಅಧ್ಯಕ್ಷ ಕೆ.ಕೆ.ರಾಮಣ್ಣ, ನಿರ್ದೇಶಕರಾದ ಯೋಗೇಂದ್ರ, ಎಸ್.ಎಸ್.ಸುಧಾಕರ, ವಾಸಪ್ಪ, ಎ.ಮೂರ್ತಿ, ಸುರೇಶ್, ಶಾಲಿನಿ, ವಿಲ್ಮಾ ಡಿಸೋಜ, ಗುರುಮೂರ್ತಿ, ನಾಗೇಂದ್ರ, ಶ್ವೇತಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net