ಸಮಾಜಮುಖಿ ಕಾರ್ಯ ಎಲ್ಲರಿಗೂ ಮಾದರಿ

ಸಾಗರದಲ್ಲಿ ನೂತನ ಬಸ್ ತಂಗುದಾಣ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು, ಇ.ನಾಗರಾಜ್, ಪ್ರಫುಲ್ಲಾ ಮಧುಕರ್, ಅಶ್ವಿನಿಕುಮಾರ್ ಇತರರಿದ್ದರು.
ಸಾಗರದಲ್ಲಿ ನೂತನ ಬಸ್ ತಂಗುದಾಣ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು, ಇ.ನಾಗರಾಜ್, ಪ್ರಫುಲ್ಲಾ ಮಧುಕರ್, ಅಶ್ವಿನಿಕುಮಾರ್ ಇತರರಿದ್ದರು.
Published on
ಸಾಗರ: ಸಮಾಜಮುಖಿ ಸೇವೆ ಮಾಡುವುದರಿಂದ ದಾನಿಗಳ ಹೆಸರು ಶಾಶ್ವತವಾಗಿ ಉಳಿಯುವ ಜತೆ ಇತರರಿಗೂ ಮಾದರಿಯಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಜೋಗ ಬಸ್ ನಿಲ್ದಾಣದ ಕೋರ್ಟ್ ವೃತ್ತದಲ್ಲಿ ಲಯನ್ಸ್ ಸಂಸ್ಥೆಯಿಂದ ಈಶ್ವರಪ್ಪ ನಾಯ್ಕ ಸ್ಮರಣಾರ್ಥ ಅವರ ಪುತ್ರ ವಕೀಲ ಇ.ನಾಗರಾಜ್ ಕೊಡುಗೆಯಿಂದ ಆಗುತ್ತಿರುವ ಪ್ರಯಾಣಿಕರ ತಂಗುದಾಣ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಲಯನ್ಸ್ ಸಂಸ್ಥೆ ಅನೇಕ ಸೇವಾ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿದ್ದು, ದಾನಿಗಳು ಲಯನ್ಸ್ ಮೂಲಕ ಸಮಾಜಸೇವೆ ಮಾಡಲು ಉತ್ತಮ ಅವಕಾಶ ಇದೆ. ವಕೀಲ ನಾಗರಾಜ್ ಅವರು ತಂದೆಯವರ ಹೆಸರಿನಲ್ಲಿ ಅನೇಕ ಕೆಲಸಗಳನ್ನು ಮಾಡುತ್ತಿದ್ದಾರೆ. ಜನತೆಗೆ ಅನುಕೂಲವಾಗುವ ಸೇವೆ ನೀಡುವಲ್ಲಿ ಸಾರ್ವಜನಿಕರು ಕೂಡ ದಾನದ ಮೂಲಕ ಸಹಕರಿಸಬೇಕು ಎಂದರು.
ಲಯನ್ಸ್ ಜಿಲ್ಲಾ ಗವರ್ನರ್ ಸ್ವಪ್ನಾ ಸುರೇಶ್ ಮಾತನಾಡಿ, ಸಾಗರದಲ್ಲಿ ಲಯನ್ಸ್ ಸಂಸ್ಥೆ 53 ವರ್ಷದಿಂದ ಸೇವಾ ಕಾರ್ಯ ನಡೆಸುತ್ತಿದೆ ಎಂದು ತಿಳಿಸಿದರು. ಮಾಜಿ ಎಂಎಲ್‌ಸಿ ಪ್ರಫುಲ್ಲಾ ಮಧುಕರ್, ಲಯನ್ಸ್ ದ್ವಿತೀಯ ಜಿಲ್ಲಾ ಉಪ ಗವರ್ನರ್ ಅಶ್ವಿನಿಕುಮಾರ್, ಲಯನ್ಸ್ ಅಧ್ಯಕ್ಷ ಡಾ. ಟಿ.ಪ್ರಸನ್ನ, ಸುರೇಶ್ ಪ್ರಭು, ಇ.ನಾಗರಾಜ್, ಪ್ರಕಾಶ್, ವಿನಯಕುಮಾರ್, ಎಂ.ಬಿ.ಗಿರೀಶ್, ಕೆ.ಬಿ.ಮಹಾಬಲೇಶ್, ವಿನಯ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net