ರೋಟರಿ ಸಂಸ್ಥೆಯಿಂದ ಸಮಾಜಮುಖಿ ಕಾರ್ಯ

ಸೊರಬದ ಪಿಡಬ್ಲುೃಡಿ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಕ್ಲಬ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಜ್ಞಾನೇಶ್ ಮಾತನಾಡಿದರು. ಜೆ.ಎಸ್.ಮಹಾಂತೇಶ್, ನಾಗರಾಜ್ ಗುತ್ತಿ, ದಯಾನಂದ ಕಲ್ಲೇರ ಇತರರಿದ್ದರು.
ಸೊರಬದ ಪಿಡಬ್ಲುೃಡಿ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಕ್ಲಬ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಜ್ಞಾನೇಶ್ ಮಾತನಾಡಿದರು. ಜೆ.ಎಸ್.ಮಹಾಂತೇಶ್, ನಾಗರಾಜ್ ಗುತ್ತಿ, ದಯಾನಂದ ಕಲ್ಲೇರ ಇತರರಿದ್ದರು.
Published on
ಸೊರಬ: ಸೇವೆಯೇ ರೋಟರಿ ಸಂಸ್ಥೆಯ ಪ್ರಮುಖ ಗುರಿಯಾಗಿದ್ದು, ವರ್ಷಪೂರ್ತಿ ಸಮಾಜಮುಖಿ ಕಾರ್ಯಗಳನ್ನು ಸಂಸ್ಥೆ ನಡೆಸುತ್ತದೆ ಎಂದು ವೈದ್ಯ ಜ್ಞಾನೇಶ್ ಹೇಳಿದರು.
ಪಟ್ಟಣದ ಪಿಬ್ಲುೃಡಿ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಕ್ಲಬ್‌ನಿಂದ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ ನೀಡಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸೌಲಭ್ಯಗಳು ಮಕ್ಕಳಿಗೆ ದೊರಕುವಂತೆ ಆಗಬೇಕು ಎಂದು ತಿಳಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಜೆ.ಎಸ್.ಮಹಾಂತೇಶ್ ಮಾತನಾಡಿ, ಮಕ್ಕಳು ನೀರಿನ ಮಹತ್ವದ ಬಗ್ಗೆ ಅರಿತುಕೊಳ್ಳಬೇಕು. ಕೆಲ ಶಾಲೆಗಳಿಗೆ  ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ನೀಡಿದ್ದೇವೆ ಎಂದರು.
ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ನಾಗರಾಜ್ ಗುತ್ತಿ ಮಾತನಾಡಿ, ರೋಟರಿ ಸಂಸ್ಥೆಯಲ್ಲಿ ಸದಸ್ಯರು ಒಟ್ಟುಗೂಡಿ ಸೇವೆ ಮಾಡುತ್ತಿದ್ದೇವೆ. ದುಡಿಮೆಯ ಒಂದು ಭಾಗವನ್ನು ಸೇವೆಗಾಗಿ ಬಳಸುತ್ತಿದ್ದೇವೆ. ಬಡ ಮಕ್ಕಳಿಗೆ ಸೇವೆ ತಲುಪಬೇಕು ಎಂದು ತಿಳಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ದಯಾನಂದ ಕಲ್ಲೇರ ಮಾತನಾಡಿ, ಸರ್ಕಾರದ ನೆರವಿನ ಜತೆಗೆ ಸಮಾಜ ಸೇವಾ ಸಂಸ್ಥೆಗಳು ಸಹ ಅಗತ್ಯ ಸೌಕರ್ಯ ಒದಗಿಸುತ್ತಿವೆ. 5 ಕೋಟಿ ರೂ. ಮೌಲ್ಯದ ವಸ್ತುಗಳು ತಾಲೂಕಿನ ವಿವಿಧ ಶಾಲೆಗಳಿಗೆ ದೊರೆತಿದೆ ಎಂದರು.
ರೋಟರಿ ಕಾರ್ಯದರ್ಶಿ ಕೃಷ್ಣಪ್ಪ ಓಟೂರು, ಮುಖ್ಯಶಿಕ್ಷಕಿ ಸುನಂದಾ, ಎಸ್‌ಡಿಎಂಸಿ ಅಧ್ಯಕ್ಷ ಸಂದೀಪ್, ಉಪಾಧ್ಯಕ್ಷೆ ದೀಪಾ,  ಸುರೇಶ್, ಗಣೇಶ್, ಲಕ್ಷ್ಮಣ್, ಪಾರ್ವತಿ, ಸ್ವಾತಿ, ದೀಪಾ, ಚಂದ್ರಶೇಖರ್, ಏಕಾಂತ್, ಪ್ರೇಮಾ, ಸವಿತಾ, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net