ಸಾಮಾಜಿಕ ಜಾಲತಾಣಗಳಿಗೆ ಕಡಿವಾಣ ಅವಶ್ಯ

ಭದ್ರಾವತಿಯಲ್ಲಿ ಆಯೋಜಿಸಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಮಧು ಬಂಗಾರಪ್ಪ, ಎಚ್.ಕೆ.ಪಾಟೀಲ್, ವೇದವ್ಯಾಸಾಚಾರ್ ಶ್ರೀಶಾನಂದ ಇತರರಿದ್ದರು.
ಭದ್ರಾವತಿಯಲ್ಲಿ ಆಯೋಜಿಸಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಮಧು ಬಂಗಾರಪ್ಪ, ಎಚ್.ಕೆ.ಪಾಟೀಲ್, ವೇದವ್ಯಾಸಾಚಾರ್ ಶ್ರೀಶಾನಂದ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಮತ
  • ತರಳಬಾಳು ಹುಣ್ಣಿಮೆ ಮಹೋತ್ಸವ
ಭದ್ರಾವತಿ: ಸಮಾಜದಲ್ಲಿ ಹೆಚ್ಚುತ್ತಿರುವ ಅವ್ಯವಸ್ಥೆಗೆ ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಸಿರಿಗೆರೆ ತರಳಬಾಳು ಮಠದ ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಆಯೋಜಿಸಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ವಾಟ್ಸ್‌ಆ್ಯಪ್, ಫೇಸ್‌ಬುಕ್ ಸೇರಿ ಸಾಮಾಜಿಕ ಮಾಧ್ಯಮಗಳಿಗೆ ಕಡಿವಾಣ ಹಾಕುವ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದರು.
ಮಠಗಳು ಹಿಂದಿನ ಕಾಲದಿಂದಲೂ ನ್ಯಾಯದಾನ ಮಾಡುವ ಪರಂಪರೆ ಹೊಂದಿವೆ. ರಾಜಶಾಸನದ ಕಾಲದಲ್ಲಿ ರಾಜನಿಗೂ ಧರ್ಮವಿವೇಚನೆ ಇದ್ದು, ಧರ್ಮಾಧಾರಿತ ಆಡಳಿತ ನಡೆದುಕೊಂಡು ಬಂದಿತ್ತು. ಧರ್ಮಕ್ಕೆ ಯಾವುದೆ ಸೀಮಾರೇಖೆಗಳಿಲ್ಲ. ಆದರೆ ಕಾನೂನು ಆಯಾಯ ದೇಶಗಳಲ್ಲಿ ವಿಭಿನ್ನ ರೀತಿ ಇರುತ್ತದೆ. ಪಾಲಕರ ಆಸ್ತಿಯಲ್ಲಿ ಮಕ್ಕಳು ಪಾಲು ಕೇಳುವುದನ್ನು ಕೈಬಿಡಬೇಕು ಎಂಬುದು ನಮ್ಮ ಮಠದ ಆಶಯ ಎಂದು ತಿಳಿಸಿದರು.
ಮಠದ ನಿಜವಾದ ಆಸ್ತಿ ಎಂದರೆ ನಮ್ಮ ಶಿಷ್ಯರು. ನಮ್ಮ ಮಠದ ವ್ಯಾಜ್ಯಗಳನ್ನು ನ್ಯಾಯಾಲಯದ ಮೆಟ್ಟಿಲೇರಿಸುವ ಬದಲು ಸಂವಾದ ಮತ್ತು ಸಮ್ಮತಿ ಮೂಲಕ ಪರಿಹರಿಸಿಕೊಳ್ಳಬೇಕು. ನ್ಯಾಯಾಧೀಶರು ಇಂತಹ ವ್ಯಾಜ್ಯಗಳನ್ನು ಕೈಗೆತ್ತಿಕೊಳ್ಳಬಾರದು. ಧರ್ಮವು ವ್ಯಾಪಕವಾಗಿದ್ದು, ಅದಕ್ಕೆ ಚೌಕಟ್ಟು ಇಲ್ಲ. ಆದರೆ ಕಾನೂನು ಆದೇಶ ಮತ್ತು ಪರಿಧಿಗೆ ಒಳಪಟ್ಟಿದೆ. ಧರ್ಮದ ಪ್ರಮುಖ ಅಂಶಗಳು ಕಾನೂನಿನೊಳಗೆ ಅಡಗಿವೆ ಎಂದರು.
ಸ್ಥಳೀಯ, ಜಿಲ್ಲೆ ಹಾಗೂ ಹೈಕೋರ್ಟ್‌ಗಳಲ್ಲಿ ದಾಖಲಾಗಿದ್ದ ಭದ್ರಾವತಿ ತಾಲೂಕಿನ 30 ವರ್ಷಗಳಷ್ಟು ಹಳೆಯ 12 ಪ್ರಕರಣಗಳನ್ನು, ಪ್ರಕರಣದ ಅರ್ಜಿದಾರರು, ಪ್ರತಿವಾದಿಗಳು ಹಾಗೂ ಎರಡೂ ಕಡೆಯ ವಕೀಲರನ್ನು ಕರೆಸಿ ಸಮಾಧಾನದಿಂದ ಬುದ್ಧಿ ಹೇಳುವ ಮೂಲಕ ಒಂದೇ ದಿನದಲ್ಲಿ ಇತ್ಯರ್ಥಪಡಿಸಿರುವ ವಿಷಯವನ್ನು ಮಹೋತ್ಸವದ ವೇದಿಕೆಯಲ್ಲಿ ಓದಿ ಪ್ರಕಟಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net