ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂ ಆಯೋಜಿಸಿದ್ದ ಪ್ರಮುಖ ನಾಗರಿಕರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್ ಕೇವಲ ಹಿಂದೂ ಸಂಟನೆ ಮಾತ್ರವಲ್ಲ. ಸಮಾಜದಲ್ಲಿನ ಎಲ್ಲ ಲೋಪಗಳನ್ನೂ ತಿದ್ದುಪಡಿ ಮಾಡಿಕೊಂಡು ಬಲಿಷ್ಠ ರಾಷ್ಟ್ರ ನಿರ್ಮಿಸುವ ಗುರಿ ಹೊಂದಿದೆ. ಧರ್ಮದ ಬೋಧನೆಯ ಮೂಲಕ ಜಗತ್ತಿಗೆ ಸಂಸ್ಕಾರ ಕೊಟ್ಟ ದೇಶ ಭಾರತ. ಅದರಿಂದಾಗಿಯೇ ಇಲ್ಲಿ ಶಾಂತಿ, ನೆಮ್ಮದಿಯಿಂದ ಇರಲು ಸಾಧ್ಯವಾಗಿದೆ ಎಂದರು.