ಅಡಿಕೆ ಮರಕ್ಕೆ 16 ರೂ.!: ತೋಟ ನಾಶವಾದರೆ ಒಂದು ಅಡಿಕೆ ಮರಕ್ಕೆ 16 ರೂ., ಮನೆ ಪೂರ್ಣ ಕುಸಿದರೆ 1.20 ಲಕ್ಷ ರೂ. ಪರಿಹಾರವಿದೆ. ಆದರೆ ವಿದ್ಯುತ್ ಕಂಬ(Electricity pole)ಕ್ಕೆ 5 ಸಾವಿರ, ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ 1 ಲಕ್ಷ ರೂ., ಪ್ರತಿ ಕಿ.ಮೀ. ರಸ್ತೆಗೆ 1 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಶೇ.33ಕ್ಕಿಂತ ಹೆಚ್ಚು ಅಥವಾ ಸಂಪೂರ್ಣ ತೋಟ ನಾಶವಾದರೂ ಎರಡು ಹೆಕ್ಟೆರ್‌ಗೆ ಸೀಮಿತವಾಗಿ 22,500 ರೂ. ಪರಿಹಾರ ನಿಗದಿಸಲಾಗಿದೆ. ಒಂದು ಹೆಕ್ಟೆರ್‌ನಲ್ಲಿ ಶೇ.33ಕ್ಕಿಂತ ಕಡಿಮೆ ಅಂದರೆ 100 ಅಡಕೆ ಮರ ಮುರಿದರೂ ಕೇವಲ 2,500 ರೂ. ಪರಿಹಾರ ನೀಡಲಾಗುತ್ತಿದೆ. ಕಚ್ಚಾ ಮನೆಗಳು ಪೂರ್ಣ ನಾಶವಾದರೆ 1.20 ಲಕ್ಷ ರೂ., 10 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯ ಇರುವ ಪಕ್ಕಾ ಮನೆಗಳಿಗೆ ಕೇವಲ 1.30 ಲಕ್ಷ ರೂ. ಪರಿಹಾರ ನಿಗದಿಪಡಿಸಲಾಗಿದೆ. ಶೇ.15ಕ್ಕಿಂತ ಕಡಿಮೆ ಹಾನಿಯಾಗಿದ್ದಲ್ಲಿ ಕಚ್ಚಾ ಮನೆಗಳಿಗೆ 4 ಸಾವಿರ ರೂ. ಮತ್ತು ಪಕ್ಕಾ ಮನೆಗಳಿಗೆ 6,500 ರೂ. ಪರಿಹಾರವಿದೆ.