ಉರುಳಿಗೆ ಸಿಲುಕಿದ್ದ ಆರು ವರ್ಷದ ಕರಡಿ ರಕ್ಷಣೆ

ಭದ್ರಾವತಿ ಅರಣ್ಯ ವಿಭಾಗದ ಶಾಂತಿಸಾಗರ ವಲಯದಲ್ಲಿ ಉರುಳಿಗೆ ಸಿಲುಕಿದ್ದ ಆರು ವರ್ಷದ ಗಂಡು ಕರಡಿಗೆ ಅರವಳಿಕೆ ನೀಡಿರುವುದು.
ಭದ್ರಾವತಿ ಅರಣ್ಯ ವಿಭಾಗದ ಶಾಂತಿಸಾಗರ ವಲಯದಲ್ಲಿ ಉರುಳಿಗೆ ಸಿಲುಕಿದ್ದ ಆರು ವರ್ಷದ ಗಂಡು ಕರಡಿಗೆ ಅರವಳಿಕೆ ನೀಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಭದ್ರಾವತಿ ಅರಣ್ಯ ವಿಭಾಗದ ಶಾಂತಿಸಾಗರ ವಲಯದಲ್ಲಿ ಘಟನೆ
  • ಅರಣ್ಯ ಇಲಾಖೆ, ಶಿವಮೊಗ್ಗ ಮೃಗಾಲಯದ ವೈದ್ಯರ ತಂಡ ರಕ್ಷಣೆ
ಶಿವಮೊಗ್ಗ: ಭದ್ರಾವತಿ ಅರಣ್ಯ ವಿಭಾಗದ ಶಾಂತಿಸಾಗರ ವಲಯದಲ್ಲಿ ಉರುಳಿಗೆ ಸಿಲುಕಿದ್ದ ಆರು ವರ್ಷದ ಗಂಡು ಕರಡಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಶಿವಮೊಗ್ಗ ಮೃಗಾಲಯದ ವೈದ್ಯರ ತಂಡ ರಕ್ಷಿಸಿದೆ.
ಭದ್ರಾವತಿ ವಿಭಾಗದ ಶಾಂತಿಸಾಗರ ರೇಂಜ್ ವ್ಯಾಪ್ತಿ ಅರಣ್ಯ ಪ್ರದೇಶದಲ್ಲಿ ಕರಡಿ ಉರುಳಿಗೆ ಸಿಲುಕಿರುವ ಬಗ್ಗೆ ಇಲಾಖೆಗೆ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯಾಧಿಕಾರಿಗಳು, ಮೃಗಾಲಯದ ವೈದ್ಯಕೀಯ ತಂಡವನ್ನು ಸ್ಥಳಕ್ಕೆ ಕರೆಸಿಕೊಂಡರು. ಶಿವಮೊಗ್ಗ ಮೃಗಾಲಯದ ವೈದ್ಯ ಡಾ. ಮುರಳಿ ಮನೋಹರ್ ಅವರ ನೇತೃತ್ವದ ತಂಡ ಕರಡಿಗೆ ಅರವಳಿಕೆ ನೀಡಿ ಉರುಳಿನಿಂದ ಬಿಡಿಸಿದರು. ನಂತರ ಸುರಕ್ಷಿತವಾಗಿ ಅರಣ್ಯಕ್ಕೆ ಮರಳಿ ಬಿಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net