24ರಿಂದ ಸಿರಿಗೆರೆ ಮಠದ ತರಳಬಾಳು ಹುಣ್ಣಿಮೆ ಮಹೋತ್ಸವ

ಭದ್ರಾವತಿಯಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಬಿ.ಕೆ.ಸಂಗಮೇಶ್ವರ್, ಜೆ.ಸಿ.ಗೀತಾ ರಾಜಕುಮಾರ್, ಎಚ್.ಆರ್.ಬಸವರಾಜಪ್ಪ, ಕೆ.ಜಿ.ರವಿಕುಮಾರ್, ಕೆ.ಎಚ್.ತೀರ್ಥಯ್ಯ, ಬಿ.ಕೆ. ಮೋಹನ್, ಪ್ರಕಾಶ್ ರಾಥೋಡ್ ಇತರರಿದ್ದರು.
ಭದ್ರಾವತಿಯಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಬಿ.ಕೆ.ಸಂಗಮೇಶ್ವರ್, ಜೆ.ಸಿ.ಗೀತಾ ರಾಜಕುಮಾರ್, ಎಚ್.ಆರ್.ಬಸವರಾಜಪ್ಪ, ಕೆ.ಜಿ.ರವಿಕುಮಾರ್, ಕೆ.ಎಚ್.ತೀರ್ಥಯ್ಯ, ಬಿ.ಕೆ. ಮೋಹನ್, ಪ್ರಕಾಶ್ ರಾಥೋಡ್ ಇತರರಿದ್ದರು.
Published on
 ಭದ್ರಾವತಿ: ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದಿಂದ ಈ ಬಾರಿ ನಗರದ ಹುಡ್ಕೋ ಕಾಲನಿ ವಿಐಎಸ್‌ಎಲ್ ಹೆಲಿಪ್ಯಾಡ್ ಆವರಣದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಜ.24ರಿಂದ ೆ.1ರವರೆಗೆ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಯೋಜಿಸಲಾಗಿದೆ ಎಂದು ಸಿರಿಗೆರೆ ಶ್ರೀಮತ್ ಸಾದು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದರು.
ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ಮಂಗಳವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಳೆದ 76 ವಷರ್ಗಳಿಂದ ಬೃಹನ್ಮಠ ನಡೆಸಿಕೊಂಡು ಬಂದಿರುವ ತರಳಬಾಳು ಹುಣ್ಣಿಮೆಯು ಒಂದು ನಾಡಹಬ್ಬವಾಗಿ ಮನ್ನಣೆ ಗಳಿಸಿದೆ. ಪ್ರತಿದಿನ ಸಂಜೆ 6.30ಕ್ಕೆ ವಿಭಿನ್ನ ವೇದಿಕೆ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಜ.24ರಂದು ಕಲೆ ಮತ್ತು ಸಂಸ್ಕೃತಿ, 25ಕ್ಕೆ ಆರೋಗ್ಯ ಮತ್ತು ಸಮಾಜ, 26ರಂದು ರಾಜಕಾರಣ ಮತ್ತು ಸಮಾಜ, 27ರಂದು ಸಾಹಿತ್ಯ ಮತ್ತು ಶಿಕ್ಷಣ, 28ರಂದು ಕೃಷಿ ಮತ್ತು ಸಮಾಜ, 29ರಂದು ಸರ್ವಧರ್ಮ ಸಮನ್ವಯ, 30ರಂದು ಸಮೂಹ ಮಾಧ್ಯಮ ಮತ್ತು ಸಮಾಜ, 31ರಂದು ನ್ಯಾಯಾಂಗ ಮತ್ತು ಸಮಾಜ ಹಾಗೂ ೆ.1ರಂದು ಧರ್ಮ-ವಿಜ್ಞಾನ-ಸಮಾಜ ವಿಷಯ ಕುರಿತು ತಜ್ಞರು, ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದಾರೆ ಎಂದು ವಿವರಿಸಿದರು.
ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಲಾಗಿದೆ. 25ರಂದು ಭಜನಾ ಸ್ಪರ್ಧೆ, 26ರಂದು ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ದೇಶಭಕ್ತಿ ಗೀತೆಗಳಿಗೆ ನೃತ್ಯ, ರಸಪ್ರಶ್ನೆ, 27ರಂದು ಭಾಷಣ, 28ರಂದು ವೀರಗಾಸೆ, 29ರಂದು ವಚನ ನೃತ್ಯ ಮತ್ತು ಜನಪದ ನೃತ್ಯ ಸ್ಪರ್ಧೆಗಳು ನಡೆಯಲಿವೆ. 30ರಂದು ವಿಜ್ಞಾನ ವಸ್ತು ಪ್ರದರ್ಶನ, 31ರಂದು ಪ್ರತಿಭಾನ್ವೇಷಣೆ ಮತ್ತು ೆ.1ರಂದು ಜಾನಪದ ಕಲಾ ಪ್ರದರ್ಶನ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.  
 ಶಾಸಕ ಬಿ.ಕೆ.ಸಂಗಮೇಶ್ವರ್, ನಗರಸಭೆ ಅಧ್ಯಕ್ಷೆ ಜೆ.ಸಿ.ಗೀತಾ ರಾಜಕುಮಾರ್, ಪ್ರಮುಖರಾದ ಕೆ.ಜಿ.ರವಿಕುಮಾರ್, ಕೆ.ಎಚ್.ತೀರ್ಥಯ್ಯ, ಬಿ.ಕೆ.ಮೋಹನ್, ಪ್ರಕಾಶ್ ರಾಥೋಡ್, ಮಲ್ಲಯ್ಯ, ಕೆ.ಎನ್.ಹೇಮಂತ್, ಬಿ.ಕೆ.ಶಿವಕುಮಾರ್, ಬಿ.ಎಸ್.ಗಣೇಶ್, ಎಚ್.ಬಿ.ಸಿದ್ದೇಶ್, ಕೆ.ಎಸ್.ವಿಜಯಕುಮಾರ್, ಪರಮೇಶ್ವರಪ್ಪ, ಸಿದ್ದಲಿಂಗಯ್ಯ, ಡಾ. ಎಂ.ವಿ.ಅಶೋಕ್ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net