ಎಸ್‌ಐಆರ್ ಯಶಸ್ವಿ ಆಗಬೇಕಾದರೆ ಕೇವಲ ಗಡುವಿನೊಳಗೆ ಪೂರ್ಣಗೊಳಿಸುವುದೇ ಗುರಿಯಾಗಬಾರದು. ಪ್ರತಿಯೊಬ್ಬ ಮತದಾರರ ಮಾಹಿತಿಯನ್ನು ನಿಖರವಾಗಿ ಪರಿಶೀಲಿಸಿ ದಾಖಲಿಸುವುದು ಮುಖ್ಯ. ಗುಣಮಟ್ಟವಿಲ್ಲದ ಸಮೀಕ್ಷೆಯಿಂದ ಇಡೀ ಪ್ರಕ್ರಿಯೆಯ ಉದ್ದೇಶವೇ ವಿಫಲವಾಗಬಹುದು ಎಂದು ಎಚ್ಚರಿಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎನ್.ರಾಮಕೃಷ್ಣ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ಮುಖಂಡರಾದ ಉಮಾಶಂಕರ್ ಉಪಾಧ್ಯ, ನಾಗೇಶ್, ಸಂಗಯ್ಯ, ನರಸಿಂಹ ಗಂಧದಮನೆ, ದೀಪಕ್ ಸಿಂಗ್, ಮಧುಕುಮಾರ್, ದಯಾನಂದ್ ಸುದ್ದಿಗೋಷ್ಠಿಯಲ್ಲಿದ್ದರು.