ಸಿದ್ಧಾಂತ ಶಿಖಾಮಣಿ ಶಿವಾಗಮದ ಸಾರ | Renukacharya jayanti
ಸಮಿಪದ ಅಶೋಕನಗರದಲ್ಲಿ ಆಯೋಜಿಸಿದ್ದ ಶ್ರೀ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಜಗದ್ಗುರುಗಳ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಚನ್ನಗಿರಿ ಹಿರೇಮಠದ ಶ್ರೀಗಳು, ಶ್ರೀ ಚನ್ನವೀರ ಸ್ವಾಮೀಜಿ, ಬಸವರಾಜಪ್ಪ, ಚಂದ್ರಣ್ಣ ಇತರರಿದ್ದರು.
Published on:
Copied
Follow Us
ಹೊಳೆಹೊನ್ನೂರು: ವಿಶ್ವ ಬಂಧುತ್ವ ಸಾರಿದ ವೀರಶೈವ ಧರ್ಮದ ಸಂಸ್ಥಾಪನಾಚಾರ್ಯ ಜಗದ್ಗುರು ರೇಣುಕಾಚಾರ್ಯರ ತತ್ವ ಸಿದ್ಧಾಂತಗಳು ಬದುಕಿಗೆ ಮೂಲ ಸೆಲೆಯಾಗಿವೆ ಎಂದು ಚನ್ನಗಿರಿ ಹಿರೇಮಠದ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಅಶೋಕನಗರದ ಶಿವಾಲಯಲದಲ್ಲಿ ಆಯೋಜಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಶಿವಾಗಮಗಳ ಸಾರವನ್ನು ಒಳಗೊಂಡ ಸಿದ್ಧಾಂತ ಶಿಖಾಮಣಿ ವೀರಶೈವ ಧರ್ಮದ ಮೂಲ ಗ್ರಂಥ. ಜಗದ್ಗುರು ರೇಣುಕಾಚಾರ್ಯರ ದೂರದರ್ಶಿತ್ವದ ವಿಚಾರಧಾರೆಗಳು ಎಲ್ಲ ವರ್ಗದ ಜನರ ಕಲ್ಯಾಣಕ್ಕೆ ಭದ್ರ ಬುನಾದಿ ಒದಗಿಸುತ್ತವೆ ಎಂದರು.
ಕರ್ಮವನ್ನು ಕಳೆದು, ಧರ್ಮವನ್ನು ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಕೀರ್ತಿ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಜಾತಿ, ಮತ, ಪಂಥಗಳನ್ನು ಮೀರಿ ತನು-ಮನ ಶುದ್ಧಿಗೆ ಆದರ್ಶ ಮೌಲ್ಯಗಳ ಪರಿಪಾಲನೆ ಮಹತ್ವ ಸಾರಿದ ಶ್ರೇಯಸ್ಸು ಅವರದು ಎಂದು ತಿಳಿಸಿದರು.
ಅರಕೆರೆ ವಿರಕ್ತ ಮಠದ ಶ್ರೀ ಚನ್ನವೀರ ಸ್ವಾಮೀಜಿ, ಗೌರವಾಧ್ಯಕ್ಷ ಕಾಂತರಾಜ್, ಅಧ್ಯಕ್ಷ ಬಸವರಾಜಪ್ಪ, ಉಪಾಧ್ಯಕ್ಷ ಚಂದ್ರಣ್ಣ, ಸತೀಶ್, ಚಂದ್ರಶೇಖರ್, ನಾಗರಾಜಯ್ಯ, ವಿರೂಪಾಕ್ಷಪ್ಪ, ಗಂಗಾಧರಯ್ಯ, ರುದ್ರಮುನಿಸ್ವಾಮಿ, ರಾಜಪ್ಪ, ಕೆ.ಪಿ.ಕಿರಣ್‌ಕುಮಾರ್, ಶ್ರವಣಕುಮಾರ, ಸುಮಿತ್ರಮ್ಮ, ವೀರೇಶ್ ಶಾಸಿ ಇತರರಿದ್ದರು.