ಬಿಜೆಪಿ ಯುವ ಮೋರ್ಚಾದಿಂದ ಶ್ರಮದಾನ

ಶಿಕಾರಿಪುರ ತಾಪಂ ಆವರಣದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಸಸಿಗಳನ್ನು ನೆಡಲಾಯಿತು. ಬೆಣ್ಣೆ ಪ್ರವಿಣ, ವೀರಣ್ಣ ಗೌಡ, ಪ್ರಶಾಂತ್​ ಸೋಲಂಕಿ, ಲೋಹಿತ್​ ನಾಯ್ಕ ಇತರರಿದ್ದರು.
ಶಿಕಾರಿಪುರ ತಾಪಂ ಆವರಣದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಸಸಿಗಳನ್ನು ನೆಡಲಾಯಿತು. ಬೆಣ್ಣೆ ಪ್ರವಿಣ, ವೀರಣ್ಣ ಗೌಡ, ಪ್ರಶಾಂತ್​ ಸೋಲಂಕಿ, ಲೋಹಿತ್​ ನಾಯ್ಕ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪರಿಸರ ಜಾಗೃತಿ ಕಾರ್ಯಕ್ರಮ
  • ಬಿಜೆಪಿ ಯುವ ಮೋರ್ಚಾದಿಂದ ಶ್ರಮದಾನ
ಶಿಕಾರಿಪುರ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಶಸ್ವಿಯಾಗಿ 12 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿ ಆವರಣದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಶ್ರಮದಾನ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮ ಆಚರಿಸಲಾಯಿತು. ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿದ್ದ ಕಸ, ಪ್ಲಾಸ್ಟಿಕ್​ ತ್ಯಾಜ್ಯವನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು. ನಂತರ ಆವರಣದ ಸುತ್ತಮುತ್ತ ಸಸಿ ನೆಟ್ಟರು. ಯುವ ಮೋರ್ಚಾ ಜಿಲ್ಲಾ ಉಪಾಧ್ಯ ಬೆಣ್ಣೆ ಪ್ರವಿಣ ಮಾತನಾಡಿ, ನರೇಂದ್ರ ಮೋದಿ ಅವರ 12ವರ್ಷಗಳ ಆಡಳಿತವು ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸಿದೆ. ಅವರ ಸ್ವಚ್ಛ ಭಾರತ ಮತ್ತು ಪರಿಸರಸ್ನೇಹಿ ಯೋಜನೆಗಳಿಂದ ಪ್ರೇರಿತರಾಗಿ ಈ ಸೇವಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಕೇವಲ ಕಚೇರಿ ಆವರಣ ಸ್ವಚ್ಛಗೊಳಿಸುವುದಷ್ಟೇ ನಮ್ಮ ಗುರಿಯಲ್ಲ. ನೆಟ್ಟ ಸಸಿಗಳನ್ನು ಪೋಷಿಸಿ ಬೆಳೆಸುವ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ ಎಂದರು. ಯುವ ಮೋರ್ಚಾ ತಾಲೂಕು ಅಧ್ಯ ವೀರಣ್ಣ ಗೌಡ, ನಗರ ಅಧ್ಯ ಪ್ರಶಾಂತ್​ ಸೋಲಂಕಿ, ಪ್ರಧಾನ ಕಾರ್ಯದರ್ಶಿ ಲೋಹಿತ್​ ನಾಯ್ಕ, ನಿರಂಜನ, ರಾಜು, ಯುವರಾಜ್​, ಗುರುಮೂರ್ತಿ, ಮಂಜು, ಮೋಹನ್​, ಅಜಿಮ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net