ಹೊಸನಗರ: ಈಗ ರಾಜ್ಯದಲ್ಲಿ ಏನಿದ್ದರೂ ಕೇವಲ ಗ್ಯಾರಂಟಿ. ಯಾವುದೇ ಅನುದಾನ ಬಾರದಿದ್ದರಿಂದ ಅಭಿವೃದ್ಧಿ ಶೂನ್ಯವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು.
ತಾಲೂಕಿನ ಮೂಡುಗೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ 1 ಕೋಟಿ ರೂ. ವೆಚ್ಚದ ಬೈಸೆ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ಯಾರಂಟಿ ಯೋಜನೆಗೆ 62 ಸಾವಿರ ಕೋಟಿ ರೂ. ಸಂಗ್ರಹಿಸಲು ರಾಜ್ಯ ಸರ್ಕಾರ ತಡಕಾಡುತ್ತಿದೆ. ಯಾವುದೇ ಅಭಿವೃದ್ಧಿಗೆ ಹಣ ಬರುತ್ತಿಲ್ಲ. ಆದರೆ ಕೇಂದ್ರ ಸರ್ಕಾರದ ಪಿಎಂಜಿಎಸ್ವೈ ಯೋಜನೆಯಿಂದ ಸಾಕಷ್ಟು ಹಣ ತಂದಿದ್ದೇನೆ. ಮೂಡುಗೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಕಳೆದ ಬಾರಿ 20 ಕೋಟಿ ರೂ. ನೀಡಿದ್ದೇನೆ ಎಂದರು.
ನಾನು ಹಿಂದೆ ಗೃಹಸಚಿವನಾಗಿದ್ದೆ. ಪೊಲೀಸ್ ಇಲಾಖೆ ಕಾಮಗಾರಿ, ರಸ್ತೆ ಮತ್ತಿತರ ಅಭಿವೃದ್ಧಿಗೆ ಹಣ ಇರುವುದಿಲ್ಲ. ಹಾಗಾಗಿ ಪೊಲೀಸ್ ಇಲಾಖೆಯ ಕೆಲಸಗಳಿಗಾಗಿ ಬರುತ್ತಿದ್ದ ಇತರ ಸಚಿವರಿಗೆ ನನಗೆ ನಿಮ್ಮ ಖಾತೆಯಿಂದ ಹಣ ಕೊಡಿ, ನಾನು ನಿಮ್ಮ ಕೆಲಸ ಮಾಡುತ್ತೇನೆ ಎಂದು ಮುಯ್ಯಾಳು ಮಾಡಿಕೊಂಡು ೇತ್ರಕ್ಕೆ ಅನುದಾನ ತಂದಿದ್ದೇನೆ. ಕಳೆದ ಬಾರಿ ಕ್ಷೇತ್ರಕ್ಕೆ ನನ್ನ ಮತ್ತು ಸಂಸದರ ಅನುದಾನ ಸೇರಿ 3,250 ಕೋಟಿ ರೂ. ಅಭಿವೃದ್ಧಿಗೆ ಹಣ ಬಂದಿದೆ ಎಂದು ಹೇಳಿದರು.
ಹೊಸನಗರ ಪಪಂ ಮಾಜಿ ಅಧ್ಯ ಹಾಲಗದ್ದೆ ಉಮೇಶ್, ಗ್ರಾಪಂ ಸದಸ್ಯರಾದ ಅರುಣ ಬೈಸೆ, ಕೆ.ಬಿ.ಕುಮಾರ, ಜಾತಪ್ಪ, ರವಿ ಭಟ್, ಸುರೇಶ ಇತರರಿದ್ದರು.