ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಹಾನಿ | fire

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿಗಾಹುತಿಯಾದ ವಸ್ತುಗಳು.
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿಗಾಹುತಿಯಾದ ವಸ್ತುಗಳು.
Published on
ತೀರ್ಥಹಳ್ಳಿ: ತಾಲೂಕಿನ ದೇಮ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊರೇಬೈಲಿನಲ್ಲಿ ಭಾಗೀರಥಿ ಅಶೋಕ್ ಎಂಬುವವರ ಮನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿಗಾಹುತಿಯಾಗಿದೆ.
ಮನೆಯಲ್ಲಿ ಬಂಗಾರದ ಒಡವೆಗಳು, 15 ಸಾವಿರ ರೂ. ನಗದು, ಒಂದೂವರೆ ಕ್ವಿಂಟಾಲ್ ಅಡಕೆ, 10 ಕ್ವಿಂಟಾಲ್ ಭತ್ತ, ಜಮೀನಿನ ದಾಖಲೆ ಪತ್ರಗಳು, ಬಟ್ಟೆ, ಪೀಠೋಪಕರಣಗಳು, ಗೃಹಬಳಕೆ ವಸ್ತುಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಆಗಮಿಸಿದ ಶಾಸಕ ಆರಗ ಜ್ಞಾನೇಂದ್ರ ಅವರು ದೇಮ್ಲಾಪುರ ಗ್ರಾಮ ಪಂಚಾಯಿತಿಯಿಂದ ಸಂತ್ರಸ್ತ ಮಹಿಳೆಗೆ 10 ಸಾವಿರ ರೂ. ತಾತ್ಕಾಲಿಕ ಪರಿಹಾರ ಕೊಡಿಸಿದ್ದು, ಸರ್ಕಾರದಿಂದ ಸಿಗುವ ಸವಲತ್ತು ಕೊಡಿಸುವ ಭರವಸೆ ನೀಡಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಇಲಾಖೆಗೆ ವರದಿ ಸಲ್ಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net