ರಾಜ್ಯಮಟ್ಟದ ಅಥ್ಲೆಟಿಕ್‌ನಲ್ಲಿ ಶಿವಮೊಗ್ಗ ಸಮಗ್ರ ಚಾಂಪಿಯನ್ | State-level athletics

ಬೆಂಗಳೂರಿನಲ್ಲಿ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಸಮಗ್ರ ಚಾಂಪಿಯನ್ ಆದ ಜಿಲ್ಲೆಯ ಕ್ರೀಡಾಪಟುಗಳನ್ನು ಡಿಡಿಪಿಐ ಎಸ್.ಆರ್.ಮಂಜುನಾಥ ಅಭಿನಂದಿಸಿದರು. ಎಂ.ಪ್ರಕಾಶ್,ಬಾಳಪ್ಪ ಮಾನೆ, ಚಂದ್ರಕಾಂತ್, ವಿನಯ್ ಹೆಗಡೆ, ಆಂಜಿನಪ್ಪ, ರಾ.ಹ.ತಿಮ್ಮೇನಹಳ್ಳಿ, ಕಾಳನಾಯ್ಕ, ಮಹೇಶ್ ಉಲ್ಲತ್ತಿ ಇದ್ದರು.
ಬೆಂಗಳೂರಿನಲ್ಲಿ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಸಮಗ್ರ ಚಾಂಪಿಯನ್ ಆದ ಜಿಲ್ಲೆಯ ಕ್ರೀಡಾಪಟುಗಳನ್ನು ಡಿಡಿಪಿಐ ಎಸ್.ಆರ್.ಮಂಜುನಾಥ ಅಭಿನಂದಿಸಿದರು. ಎಂ.ಪ್ರಕಾಶ್,ಬಾಳಪ್ಪ ಮಾನೆ, ಚಂದ್ರಕಾಂತ್, ವಿನಯ್ ಹೆಗಡೆ, ಆಂಜಿನಪ್ಪ, ರಾ.ಹ.ತಿಮ್ಮೇನಹಳ್ಳಿ, ಕಾಳನಾಯ್ಕ, ಮಹೇಶ್ ಉಲ್ಲತ್ತಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಡೆದ ಅಥ್ಲೆಟಿಕ್ ಕ್ರೀಡಾಕೂಟ
  • ಉತ್ತರಪ್ರದೇಶದಲ್ಲಿ ನಡೆಯುವ ಅಥ್ಲೆಟಿಕ್‌ ಗೆ 9 ಬಾಲಕಿಯರು, 8 ಬಾಲಕರು ಆಯ್ಕೆ
  • ಕ್ರೀಡಾಕೂಟದಲ್ಲಿ ಇರಾಮ್ ಶೇಕ್, ವೇದಾ, ಸುಧನ್ವ, ಸಾಗರ್ ನೂತನ ದಾಖಲೆ
ಶಿವಮೊಗ್ಗ: ಬೆಂಗಳೂರಿನಲ್ಲಿ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಅಥ್ಲೆಟಿಕ್(Athletics)ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲೆಸಮಗ್ರ ಚಾಂಪಿಯನ್(Champion)ಆಗಿ ಹೊರಹೊಮ್ಮಿದ್ದು, ಜಿಲ್ಲೆಯ 17 ವರ್ಷದೊಳಗಿನ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರು ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಅಮೂಲ್ಯ ತ್ರಿಪಲ್ ಜಂಪ್‌(Triple jump)ನಲ್ಲಿ ಪ್ರಥಮ, ಕೆ ಜಿ.ಸಿರಿ ಹರ್ಡಲ್ಸ್ನಲ್ಲಿ ದ್ವಿತೀಯ, ಲಾಂಗ್ ಜಂಪ್‌ನಲ್ಲಿ ತೃತೀಯ, ಅಪೂರ್ವ 400 ಮೀ. ಹರ್ಡಲ್ಸ್ನಲ್ಲಿ ಪ್ರಥಮ, ಪದ್ಮಾವತಿ ಜಾವಲಿನ್ ಮತ್ತು ಪೋಲೊ ವ್ಯಾಟ್‌(Polo vat)ನಲ್ಲಿ ಪ್ರಥಮ, ಅನ್ವಿತಾ ಎತ್ತರ ಜಿಗಿತದಲ್ಲಿ ತೃತೀಯ, ಇರಾಮ್ ಶೇಕ್ 100 ಮೀ., 200 ಮೀ.ನಲ್ಲಿ ಪ್ರಥಮ, ಲೇಖನಾ ಸಾಗರ್ 400 ಮೀ. ಹರ್ಡಲ್ಸ್ನಲ್ಲಿ ದ್ವಿತೀಯ, ವೇದಾ ಹ್ಯಾಮರ್ ಥ್ರೋನಲ್ಲಿ ಪ್ರಥಮ, ಎಸ್.ಮಿಥಾಲಿ ಗುಂಡು ಎಸೆತದಲ್ಲಿ ದ್ವಿತೀಯ, 4*100 ರಿಲೇಯಲ್ಲಿ ಅಮೂಲ್ಯಾ, ಸಿರಿ, ಅಪೂರ್ವಾ, ಪದ್ಮಾವತಿ ಪ್ರಥಮ ಸ್ಥಾನ ಪಡೆದರು.
ಬಾಲಕರ ವಿಭಾಗದಲ್ಲಿ ಸಂಜಯ್ 100 ಮೀ. ಓಟದಲ್ಲಿ ಪ್ರಥಮ, 200 ಮೀ. ಓಟದಲ್ಲಿ ದ್ವಿತೀಯ, ಹರ್ಡಲ್ಸ್ನಲ್ಲಿ ದ್ವಿತೀಯ ಸ್ಥಾನ ಪಡೆದರೆ, ಲೋಕೇಶ್ ಜಾಧವ್ 100 ಮೀ. ಓಟದಲ್ಲಿ ದ್ವಿತೀಯ, ಮೊಹಮದ್ ಆಯಿಲ್ ಹರ್ಡಲ್ಸ್ನಲ್ಲಿ ಪ್ರಥಮ, ಮಣಿಕಂಠಗೌಡ ಎತ್ತರ ಜಿಗಿತದಲ್ಲಿ ಪ್ರಥಮ, ತ್ರಿಬಲ್ ಜಂಪ್‌ನಲ್ಲಿ ದ್ವಿತೀಯ, ಬಿ.ಆರೂನ್ ಎತ್ತರ ಜಿಗಿತ(High jump)ದಲ್ಲಿ ದ್ವಿತೀಯ, ಸುಧನ್ವಾ ಹ್ಯಾಮರ್ ಥ್ರೋನಲ್ಲಿ ಪ್ರಥಮ, ಕೆ.ಜೆ.ಶರತ್ 400 ಮೀ.ಓಟದಲ್ಲಿ ಪ್ರಥಮ, ಸಾಗರ್ ಪೋ ಲೋ ವ್ಯಾಟ್‌ನಲ್ಲಿ ಪ್ರಥಮ ಸ್ಥಾನ ಪಡೆದರು. 4*100 ರಿಲೇಯಲ್ಲಿ ಬಾಲಕರು ತೃತೀಯ ಸ್ಥಾನ ಪಡೆದಿದ್ದು, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಉತ್ತರಪ್ರದೇಶದ ಲಕ್ನೋ(Lucknow)ದಲ್ಲಿ ನಡೆಯುವ 17 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ವಿಭಾಗದ ಅಥ್ಲೆಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯಿಂದ 9 ಬಾಲಕಿಯರು, 8 ಬಾಲಕರು ಆಯ್ಕೆಯಾಗಿದ್ದು, 12 ಬಂಗಾರದ ಪದಕ, 8 ಬೆಳ್ಳಿ ಪದಕ, 4 ಕಂಚಿನ ಪದಕ ಪಡೆದು ಜಿಲ್ಲೆಗೆ ಸಮಗ್ರ ಪ್ರಶಸ್ತಿ ತಂದು ಕೊಟ್ಟಿದ್ದಾರೆ.
ಡಿಡಿಪಿಐ(Ddpi) ಎಸ್.ಆರ್.ಮಂಜುನಾಥ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಪ್ರಕಾಶ್ ಕ್ರೀಡಾಪಟುಗಳನ್ನುಅಭಿನಂದಿಸಿದರು. ಯುವಜನ ಸೇವಾ ಕ್ರೀಡಾ ಇಲಾಖೆ ಅಥ್ಲೆಟಿಕ್ ತರಬೇತುದಾರ (Trainer)ಬಾಳಪ್ಪ ಮಾನೆ, ಚಂದ್ರಕಾಂತ್, ವಿನಯ್ ಹೆಗಡೆ, ಆಂಜಿನಪ್ಪ, ರಾ.ಹ.ತಿಮ್ಮೇನಹಳ್ಳಿ, ಕಾಳನಾಯ್ಕ, ಮಹೇಶ್ ಉಲ್ಲತ್ತಿ, ಜೋಶಿ ಮತ್ತಿತರರಿದ್ದರು.
ನೂತನ ದಾಖಲೆ: ನೂತನ ದಾಖಲೆಯ ಆಟದಿಂದ ಈ ಕ್ರೀಡಾಕೂಟದಲ್ಲಿ ಇರಾಮ್ ಶೇಕ್ 100 ಮೀ. ಓಟ, 200 ಮೀ ಓಟ, ವೇದಾ ಹ್ಯಾಮರ್ ಥ್ರೋ ಬಾಲಕಿಯರ ವಿಭಾಗದಲ್ಲಿ ನೂತನ ದಾಖಲೆ (Record) ಮಾಡಿದ್ದಾರೆ. ಬಾಲಕರ ವಿಭಾಗದಲ್ಲಿ ಸುಧನ್ವ ಹ್ಯಾಮರ್ ಥ್ರೋನಲ್ಲಿ, ಸಾಗರ್ ಫೋಲೋ ವ್ಯಾಟ್‌ನಲ್ಲಿ ನೂತನ ದಾಖಲೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net