ಮನೆಗಣತಿಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಫಸ್ಟ್ | House Census

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮನೆಗಣತಿ ನಡೆಸಿದ ಶಿಕ್ಷಕರು.
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮನೆಗಣತಿ ನಡೆಸಿದ ಶಿಕ್ಷಕರು.
Published on

ಪ್ರಮುಖ ಮುಖ್ಯಾಂಶಗಳು

  • 13 ಸ್ಥಳೀಯ ಆಡಳಿತಗಳ ಪೈಕಿ ಸಿಹಿಮೊಗೆಯಲ್ಲಿ ಸಂಪೂರ್ಣ
  • ಕೊನೇ ಸ್ಥಾನದಲ್ಲಿವೆ ಮಂಗಳೂರು, ಬೆಳಗಾವಿ, ಬಳ್ಳಾರಿ
  • ಕ್ಷೇತ್ರವಾರು ಗಣತಿ 17 ದಿನದಲ್ಲೇ ಮನೆಗಳ ಗಣತಿ ಪೂರ್ಣ
ನವೀನ್ ಬಿಲ್ಗುಣಿ ಶಿವಮೊಗ್ಗ
ಜನಗಣತಿಯ ಮೊದಲ ಹಂತವಾಗಿ ನಡೆದ ಮನೆಪಟ್ಟಿ ಮತ್ತು ಮನೆಗಣತಿ(House Census)ಯನ್ನು ಶಿವಮೊಗ್ಗ ಮಹಾನಗರ ಪಾಲಿಕೆಯು ಪೂರ್ಣಗೊಳಿಸಿದ್ದು, ರಾಜ್ಯದ 13 ಪಾಲಿಕೆಗಳ ಪೈಕಿ ಶಿವಮೊಗ್ಗ ಪ್ರಥಮ ಸ್ಥಾನದಲ್ಲಿದೆ.
ಮನೆಗಳ ಪರಿಸ್ಥಿತಿ, ಸೌಲಭ್ಯಗಳು ಮತ್ತು ಆಸ್ತಿಗಳ ಬಗ್ಗೆ ಮಾಹಿತಿಯನ್ನು ಸರ್ಕಾರ ಕಲೆಹಾಕುತ್ತಿದ್ದು, 2026-27ರಲ್ಲಿ ನಡೆಯುವ ಜನಗಣತಿಗೆ ಎರಡು ಹಂತದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದರಂತೆ ಶಿವಮೊಗ್ಗ ಪಾಲಿಕೆ(Shimogga palike)ಯು ಮೇ ಮೊದಲ ವಾರದಲ್ಲೇ ಶೇ.100ರಷ್ಟು ಮನೆಗಳ ಗಣತಿ ನಡೆಸಿದೆ. ಮಂಗಳೂರು ಶೇ.10.19ರಷ್ಟು ಮಾತ್ರ ಗುರಿ ಸಾಧನೆಯೊಂದಿಗೆ ಕೊನೇ ಸ್ಥಾನದಲ್ಲಿದೆ.
ಕಳೆದ ಏ.1ರಿಂದ 15ರವರೆಗೆ ಸ್ವಯಂ ಮನೆಗಣತಿಗೆ ಸರ್ಕಾರ ಅವಕಾಶ ಕಲ್ಪಿಸಿತ್ತು. ಬರೋಬ್ಬರಿ 33 ಪ್ರಶ್ನೆಗಳನ್ನೊಳಗೊಂಡ ಸ್ವಯಂಗಣತಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಈ ನಡುವೆ ಏ.16ರಿಂದ ಮೇ 15ರವರೆಗೆ ಕ್ಷೇತ್ರವಾರು ಗಣತಿಗೆ ಚಾಲನೆ ನೀಡಿತ್ತು. ಆದರೆ ಶಿವಮೊಗ್ಗ ಪಾಲಿಕೆ ವ್ಯಾಪ್ತಿಯಲ್ಲಿ ಕ್ಷೇತ್ರವಾರು ಗಣತಿ ಆರಂಭಗೊಂಡ 17 ದಿನದಲ್ಲೇ ಮನೆಗಳ ಗಣತಿ ಪೂರ್ಣಗೊಳಿಸಿರುವುದು ವಿಶೇಷ.
800 ಸಿಬ್ಬಂದಿ ಬಳಕೆ: ಶಿವಮೊಗ್ಗ ಪಾಲಿಕೆ ವ್ಯಾಪ್ತಿಯನ್ನು ನಾಲ್ಕು ಬ್ಲಾಕ್‌(Block)ಗಳನ್ನಾಗಿ ವಿಂಗಡಿಸಿದ್ದು, 579 ಬ್ಲಾಕ್‌ಗಳನ್ನು  ರಚನೆ ಮಾಡಲಾಗಿತ್ತು. ಅದರಲ್ಲಿ ಕೊಳಚೆ ಪ್ರದೇಶ, ವಾರ್ಡ್‌ವಾರು ಪ್ರತ್ಯೇಕವಾಗಿ ಬ್ಲಾಕ್‌ಗಳನ್ನು ವಿಂಗಡಿಸಿಕೊಂಡು ಅದಕ್ಕಾಗಿ 600 ಶಿಕ್ಷಕರನ್ನು ನಿಯೋಜಿಸಿತ್ತು. 6 ಶಿಕ್ಷಕರಿಗೆ ಒಬ್ಬ ಮೇಲ್ವಿಚಾರಕರನ್ನೂ ನೇಮಕ ಮಾಡಲಾಗಿತ್ತು. ಒಟ್ಟಾರೆ 800 ಶಿಕ್ಷಕರಿಗೆ ಶೇ.10ರಷ್ಟು ರಿಸರ್ವ್ ಸಿಬ್ಬಂದಿ ನಿಯೋಜಿಸಿಕೊಂಡು ಕ್ಷೇತ್ರವಾರು ಗಣತಿಯನ್ನು ಪೂರ್ಣಗೊಳಿಸಲಾಗಿದೆ. ಮನೆಪಟ್ಟಿ ಮತ್ತು ಮನೆಗಣತಿ ಸಂಬಂಧ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 3 ತಿಂಗಳಿಂದ ಪೂರ್ವ ತಯಾರಿ ಮಾಡಲಾಗಿತ್ತು. ಎಲ್ಲ ಬ್ಲಾಕ್‌ಗಳಿಗೂ ಸಮನಾಗಿ ಮನೆಗಳು ಹಂಚಿಕೆ ಆಗಬೇಕು ಎನ್ನುವ ಉದ್ದೇಶದಿಂದ ಗೂಗಲ್‌ಅರ್ಥ್ ಮೂಲಕ ಡಿಜಿಟಲ್ ಸರ್ವೇ(Digital Survey) ಮಾಡಿ ಮಾರ್ಗಸೂಚಿ ಅನ್ವಯ ಸಿಬ್ಬಂದಿಗೆ ಮನೆಗಳನ್ನು ಹಂಚಿಕೆ ಮಾಡಿದ್ದರಿಂದ ಅವಧಿಗಿಂತ ಮುನ್ನವೇ ಗಣತಿ ಪೂರ್ಣವಾಗಿದೆ.

120 ವಾಟ್ಸ್‌ಆ್ಯಪ್ ಗ್ರೂಪ್ ರಚನೆ

800 ಗಣತಿದಾರರಿಗೂ ಸಹ್ಯಾದ್ರಿ ಕಾಲೇಜಿನಲ್ಲಿ ಮೂರು ದಿನ ನುರಿತ ತಂತ್ರಜ್ಞರಿಂದ ತರಬೇತಿ ನೀಡಲಾಗಿತ್ತು. ಅಲ್ಲದೆ ಎಂಸಿಎ, ಬಿಸಿಎ ಮತ್ತು ಬಿಇ ಕಂಪ್ಯೂಟರ್ ಸೈನ್ಸ್(Computer Science) ಮಾಡಿದ ಆರು ನುರಿತ ತಂತ್ರಜ್ಞರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಪಾಲಿಕೆಯ ಕಂದಾಯ, ಆರೋಗ್ಯ, ಇಂಜಿನಿಯರಿಂಗ್ ಶಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪ್ರತ್ಯೇಕ 120 ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ರಚಿಸಿಕೊಂಡು ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಸಿಬ್ಬಂದಿಯನ್ನೂ ಪಾಲಿಕೆ ನೇಮಕ ಮಾಡಿತ್ತು. ಎಲ್ಲರ ಸಹಕಾರದಿಂದ ಮೇ 2ರಂದು ಮನೆಗಳ ಗಣತಿ ಪೂರ್ಣಗೊಳಿಸಿದೆ.

* ಪಾಲಿಕೆ ವ್ಯಾಪ್ತಿಯ ಪ್ರಗತಿ((ಮಾಹಿತಿ ಮೇ 3ರವರೆಗೆ))

ಪಾಲಿಕೆಮನೆಪಟ್ಟಿ(ಬ್ಲಾಕ್)ಪ್ರಗತಿಪೂರ್ಣಶೇಕಡವಾರು
ಶಿವಮೊಗ್ಗ579000579100
ದಾವಣಗೆರೆ983997499.08
ರಾಯಚೂರು435443199.08
ಹಾಸನ3404129987.94
ಕಲಬುರಗಿ107016790384.39
ವಿಜಯಪುರ58225033056.70
ತುಮಕೂರು55724731055.66
ಮೈಸೂರು
185089495651.68
ಬೀದರ್
42022020047.62
ಬಳ್ಳಾರಿ
68241526739.15
ಬೆಳಗಾವಿ
95154428830.28
ಮಂಗಳೂರು
8737848910.19
"

13 ಪಾಲಿಕೆಗಳ ಪೈಕಿ ಶಿವಮೊಗ್ಗ ಶೇ.100ರಷ್ಟು ಮನೆಗಣತಿ ಪ್ರಥಮ ಸ್ಥಾನದಲ್ಲಿದೆ. ವಸತಿ, ವಸತಿಯೇತರ, ಕೊಳಚೆ ಪ್ರದೇಶಗಳ ಬ್ಲಾಕ್ ಮಾಡಿಕೊಂಡಿದ್ದು, 800ಕ್ಕೂ ಅಧಿಕ ಗಣತಿದಾರರ ಪರಿಶ್ರಮದಿಂದ ಮನೆಗಣತಿ ಪೂರ್ಣಗೊಂಡಿದೆ.

— ಕೆ.ಮಾಯಣ್ಣ ಗೌಡ, ಶಿವಮೊಗ್ಗ ಮಹಾನಗರ ಪಾಲಿಕೆ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net