ಶಿರಾಳಕೊಪ್ಪ-ಮಂಗಳೂರು ಬಸ್ ಸಂಚಾರ

ಶಿರಾಳಕೊಪ್ಪ-ಮಂಗಳೂರು ಬಸ್ ಸಂಚಾರ ಆರಂಭಿಸಿದ ಹಿನ್ನೆಲೆಯಲ್ಲಿ ವಾಯವ್ಯ ಸಾರಿಗೆ ಅಧಿಕಾರಿಗಳಾದ ವಿಜಯಕುಮಾರ್ ಹಾಗೂ ಅಶೋಕ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ನಾಗಭೂಷಣ್ ಸ್ವಾಮಿ, ಕೆ.ನಾಗರಾಜ್, ಶಶಿಧರ್, ಶಶಿಕುಮಾರ್, ಪ್ರಶಾಂತ್ ಇತರರಿದ್ದರು.
ಶಿರಾಳಕೊಪ್ಪ-ಮಂಗಳೂರು ಬಸ್ ಸಂಚಾರ ಆರಂಭಿಸಿದ ಹಿನ್ನೆಲೆಯಲ್ಲಿ ವಾಯವ್ಯ ಸಾರಿಗೆ ಅಧಿಕಾರಿಗಳಾದ ವಿಜಯಕುಮಾರ್ ಹಾಗೂ ಅಶೋಕ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ನಾಗಭೂಷಣ್ ಸ್ವಾಮಿ, ಕೆ.ನಾಗರಾಜ್, ಶಶಿಧರ್, ಶಶಿಕುಮಾರ್, ಪ್ರಶಾಂತ್ ಇತರರಿದ್ದರು.
Published on
ಶಿರಾಳಕೊಪ್ಪ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಶಿರಾಳಕೊಪ್ಪದಿಂದ ಶಿಕಾರಿಪುರ ಮಾರ್ಗವಾಗಿ ಹಾವೇರಿ, ಮಂಗಳೂರು ನಡುವೆ ಬಸ್ ಸೇವೆ ಆರಂಭಿಸಲಾಯಿತು. ಈ ಬಸ್ ಪ್ರತಿದಿನ ನಿಯಮಿತ ವೇಳಾಪಟ್ಟಿಯಂತೆ ಸಂಚರಿಸಲಿದೆ.
ಸವಣೂರಿನಿಂದ ರಾತ್ರಿ ಹೊರಟು ರಾತ್ರಿ 9.40ಕ್ಕೆ ಹಾವೇರಿಯಿಂದ ಹೊರಡಲಿದೆ. ಬಳಿಕ ಚಿಕ್ಕೇರೂರು (10.50), ಅಗ್ರಹಾರಮುಚಡಿ, ನರಸಾಪುರ, ಬಿಳಿಕಿ, ಶಿರಾಳಕೊಪ್ಪ (11.30), ಶಿಕಾರಿಪುರ, ಆನಂದಪುರ, ಹೊಸನಗರ, ಮಣಿಪಾಲ, ಉಡುಪಿ ಮಾರ್ಗವಾಗಿ ಸಂಚರಿಸಿ ಬೆಳಗ್ಗೆ 6ಕ್ಕೆ ಮಂಗಳೂರನ್ನು ತಲುಪಲಿದೆ.
ಮರಳಿ ಮಂಗಳೂರಿನಿಂದ ರಾತ್ರಿ 8.30ಕ್ಕೆ ಹೊರಟು ಅದೇ ಮಾರ್ಗದಲ್ಲಿ ಸಂಚರಿಸಿ ಬೆಳಗಿನ ಜಾವ 3ಕ್ಕೆ ಶಿರಾಳಕೊಪ್ಪ, 4ಕ್ಕೆ ಚಿಕ್ಕೇರೂರು, 5ಗಂಟೆಗೆ ಹಾವೇರಿ ತಲುಪಲಿದೆ.
ನೂತನ ಬಸ್ ಸೇವೆ ಆರಂಭಿಸಿದ ಹಿನ್ನೆಲೆಯಲ್ಲಿ ವಾಯವ್ಯ ಸಾರಿಗೆ ಹಾವೇರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ್ ಹಾಗೂ ಹಾವೇರಿ ವಿಭಾಗದ ಅಶೋಕ್ ಪಾಟೀಲ್ ಅವರನ್ನು ಹಾವೇರಿ ವಿಭಾಗೀಯ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಸಾಮಾಜಿಕ ಕಾರ್ಯಕರ್ತ ನಾಗಭೂಷಣ್ ಸ್ವಾಮಿ (ಬಿಳಿಕಿ), ಗ್ರಾಪಂ ಮಾಜಿ ಉಪಾಧ್ಯಕ್ಷ ಕೆ.ನಾಗರಾಜ್(ಅಗ್ರಹಾರಮುಚಡಿ), ಶಶಿಧರ್, ಶಶಿಕುಮಾರ್, ಪ್ರಶಾಂತ್ ಮುಂತಾದವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net