ಶೆಡ್ ಬಿದ್ದು ವಾಹನಗಳಿಗೆ ಹಾನಿ | rain effect

ತಡಗಣಿ ಗೇಟ್ ಬಳಿ ನಿರ್ಮಿಸಿದ್ದ ಶೆಡ್‌ನ ಮೇಲ್ಛಾವಣಿ ಕಾರಿನ ಮೇಲೆ ಬಿದ್ದಿರುವುದು.
ತಡಗಣಿ ಗೇಟ್ ಬಳಿ ನಿರ್ಮಿಸಿದ್ದ ಶೆಡ್‌ನ ಮೇಲ್ಛಾವಣಿ ಕಾರಿನ ಮೇಲೆ ಬಿದ್ದಿರುವುದು.
Published on
ಶಿರಾಳಕೊಪ್ಪ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾನುವಾರ ಸುರಿದ ಭಾರಿ ಮಳೆ ಹಾಗೂ ಗಾಳಿಯಿಂದಾಗಿ ಹಲವೆಡೆ ಹಾನಿ ಸಂಭವಿಸಿದೆ. ಪಟ್ಟಣದ ತಡಗಣಿ ವೃತ್ತದ ಬಳಿ ನಿರ್ಮಿಸಲಾಗಿದ್ದ ಐದಕ್ಕೂ ಹೆಚ್ಚು ಮಳಿಗೆಗಳ ಶೆಡ್ ಗಾಳಿಯ ರಭಸಕ್ಕೆ ಹಾರಿಹೋಗಿದೆ. ಈ ವೇಳೆ ಮಳಿಗೆಗಳೊಳಗಿದ್ದ ಐದಾರು ಜನರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಶೆಡ್ ಹಾರಿ ಬಿದ್ದ ಪರಿಣಾಮ ಕೆಳಗಡೆ ನಿಲ್ಲಿಸಿದ್ದ ಕಾರು ಹಾಗೂ ನಾಲ್ಕೈದು ಬೈಕ್‌ಗಳಿಗೆ ಹಾನಿಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net