ಸೌಹಾರ್ದ ಸಹಕಾರ ಸಂಘಕ್ಕೆ ಷೇರುದಾರರೇ ಬಲ

ಸಾಗರದಲ್ಲಿ ಆಯೋಜಿಸಿದ್ದ ಅಂಭ್ರಿಣಿ ವಿದ್ಯೇಶ ಸೌಹಾರ್ದ ಸಹಕಾರ ಸಂಸ್ಥೆಯ ಷೇರುದಾರರ ಸಭೆಯನ್ನು ಯು.ಶಿವಾನಂದ ಭಂಡಾರ್‌ಕರ್ ಉದ್ಘಾಟಿಸಿದರು. ಕೆ.ಎಚ್.ಸುಧೀಂದ್ರ, ಜಿ.ಆರ್.ರಾಘವೇಂದ್ರ, ಟಿ.ವಿ.ಪಾಂಡುರಂಗ ಇತರರಿದ್ದರು.
ಸಾಗರದಲ್ಲಿ ಆಯೋಜಿಸಿದ್ದ ಅಂಭ್ರಿಣಿ ವಿದ್ಯೇಶ ಸೌಹಾರ್ದ ಸಹಕಾರ ಸಂಸ್ಥೆಯ ಷೇರುದಾರರ ಸಭೆಯನ್ನು ಯು.ಶಿವಾನಂದ ಭಂಡಾರ್‌ಕರ್ ಉದ್ಘಾಟಿಸಿದರು. ಕೆ.ಎಚ್.ಸುಧೀಂದ್ರ, ಜಿ.ಆರ್.ರಾಘವೇಂದ್ರ, ಟಿ.ವಿ.ಪಾಂಡುರಂಗ ಇತರರಿದ್ದರು.
Published on
ಸಾಗರ: ಸಹಕಾರ ಸಂಘಟನೆಗಳು ಪ್ರಗತಿ ಸಾಧಿಸಲು ಷೇರುದಾರರ ಸಹಕಾರವೇ ಮುಖ್ಯ ಎಂದು ಅಂಭ್ರಿಣಿ ವಿದ್ಯೇಶ ಸೌಹಾರ್ದ ಸಹಕಾರ ಸಂಸ್ಥೆ ಅಧ್ಯಕ್ಷ ಯು.ಶಿವಾನಂದ ಭಂಡಾರ್‌ಕರ್ ಹೇಳಿದರು.
ಶೃಂಗೇರಿ ಶಂಕರಮಠದಲ್ಲಿ ಅಂಭ್ರಿಣಿ ವಿದ್ಯೇಶ ಸೌಹಾರ್ದ ಸಹಕಾರ ಸಂಸ್ಥೆಯ 22ನೇ ವರ್ಷದ ಷೇರುದಾರರ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿ, ಹೆಚ್ಚಿನ ಆರ್ಥಿಕ ವಹಿವಾಟು ನಡೆಸುವ ಜತೆಗೆ ಸಾಮಾಜಿಕ ಚಟುವಟಿಕೆಗಳ ಮೂಲಕ ಮನೆಮಾತಾಗಿದೆ ಎಂದು ತಿಳಿಸಿದರು.
ಆಡಳಿತ ಮಂಡಳಿ ಕ್ರಿಯಾಶೀಲವಾಗಿದ್ದರೆ ಸಂಸ್ಥೆ ಉನ್ನತ ಸ್ಥಾನಕ್ಕೆ ಬೆಳೆಯುತ್ತದೆ ಎನ್ನುವುದಕ್ಕೆ ನಮ್ಮ ಸಂಸ್ಥೆಯೇ ಸಾಕ್ಷಿ. ಸಂಸ್ಥೆಯ ಬೆಳ್ಳಿಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಕಾರ್ಯಯೋಜನೆ ರೂಪಿಸಲಾಗುತ್ತಿದೆ. ಈ ವರ್ಷವೂ ಸಹ ಸಂಸ್ಥೆಯ ಷೇರುದಾರರಿಗೆ ಶೇ.10 ಡಿವಿಡೆಂಡ್ ನೀಡಲಾಗುತ್ತಿದೆ ಎಂದರು.
ಸಂಸ್ಥೆಯ ಸಿಇಒ ಕೆ.ಎಚ್.ಸುಧೀಂದ್ರ ಮಾತನಾಡಿ, ದೇಶದಲ್ಲಿ ಸಹಕಾರ ಚಳವಳಿ ಅತ್ಯಂತ ಪ್ರಬುದ್ಧವಾಗಿ ಬೆಳೆಯುತ್ತಿದೆ. ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಕೊಡುಗೆ ಸಣ್ಣ ಪ್ರಮಾಣದಲ್ಲಿದೆ. ಸಂಸ್ಥೆ 25 ವರ್ಷ ಪೂರೈಸುವ ಹೊಸ್ತಿಲಿನಲ್ಲಿ ಇರುವುದರಿಂದ ಗಣಪತಿ ದೇವಸ್ಥಾನ ರಸ್ತೆಯಲ್ಲಿ ವಿಶಾಲ ಜಾಗ ಖರೀದಿಸಿ ಅಂಭ್ರಿಣಿ ರಜತ ಭವನ ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಶೀಘ್ರವೇ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಜಿ.ಆರ್.ರಾಘವೇಂದ್ರ, ಲೆಕ್ಕಪರಿಶೋಧಕ ರಾಘವೇಂದ್ರ, ಟಿ.ವಿ.ಪಾಂಡುರಂಗ, ಶಿವಪ್ರಕಾಶ್, ಕಾರ್ತಿಕ್ ಎಸ್. ಭಂಡಾರ್‌ಕರ್, ಕರಿಬಸಪ್ಪ, ಎಸ್.ಪಿ.ಪ್ರಿಯಾಂಕಾ, ಎಚ್.ಎಸ್.ರಶ್ಮಿ, ಎಸ್.ಬಿ.ಉಮಾ, ಜಿ.ಆರ್.ವಿಜಯಲಕ್ಷ್ಮೀ, ಎಸ್.ಡಿ.ಸುಮಾ, ಕೆ.ಎಚ್.ಕೃಷ್ಣಮೂರ್ತಿ, ಡಾ. ಪದ್ಮಜಾ ಶೆಣೈ, ವಿ.ಟಿ.ಸ್ವಾಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net